ವಿಚಿತ್ರ ಸೋಮಾರಿ ಗದ್ದೆ ಮಿಂಚುಳ್ಳಿ

Share This

ದ್ದೆ ಭಾಗದಲ್ಲಿರುವ ಎಲೆಗಳಿಲ್ಲದ ಮರಗಳ ಕೊಂಬೆ, ಟೆಲಿಫೋನ್ ಅಥವಾ ವಿದ್ಯುತ್ ತಂತಿಗಳೇ ಈ ಹಕ್ಕಿಯ ಸೋಮಾರಿ ಕಟ್ಟೆ. ಸೋಮಾರಿಗಳಲ್ಲೂ ವಿಚಿತ್ರ ಸೋಮಾರಿ. ಶಿಕಾರಿ ಕಣ್ಣಿಗೆ ಬಿದ್ದ ಬಳಿಕ ಅದೇಸ್ಟೇ ಕಸ್ಟವಾದರೂ ಸರಿ. ತನ್ನ ಬಾಯಿಗೆ ಬೀಳಲೇಬೇಕು. ಭಕ್ಷಿಸಲೇಬೇಕು. ಬೇಟೆ ಸಿಗುವ ತನಕ ತಾನು ಕುಳಿತಲ್ಲಿಂದ ಒಂದಿಂಚೂ ಅಲ್ಲಾಡದ ಸೋಮಾರಿ!
ಇಂಥ ವಿಶೇಷತೆಯ ಹಕ್ಕಿ ಈ ‘ಗದ್ದೆ ಮಿಂಚುಳ್ಳಿ’ ‘ಬೆಳ್ಳೆದೆ ಮಿಂಚುಳ್ಳಿ’ ( White-throated kingfisher ).
ಗುಬ್ಬಚ್ಚಿಗಿಂತ ಸ್ವಲ್ಪ ದೊಡ್ಡದಾಗಿರುವ ಗದ್ದೆ ಮಿಂಚುಳ್ಳಿ ಕರೆ, ಗದ್ದೆ ಭಾಗದಲ್ಲೇ ಜಾಸ್ತಿಯಾಗಿ ಕಾಣಸಿಗುತ್ತದೆ. ಕರಾವಳಿಯಲ್ಲಿ ಈ ಹಕ್ಕಿಗಳನ್ನು ಜಾಸ್ತಿಯಾಗಿ ಕಾಣಬಹುದು. ಆಹಾರಕ್ಕೆ ಇನ್ನುಳಿದ ಮಿಂಚುಳ್ಳಿಗಳು ಪಡುವಸ್ಟು ಶ್ರಮ ಈ ಹಕ್ಕಿಗಿಲ್ಲ. ತೀರಾ ಕಷ್ಟ ಎಂದಾಗ ಕುಳಿತಲ್ಲಿಂದ ಎದ್ದೇಳುವುದಿಲ್ಲ. ಮೀನು, ಕಪ್ಪೆಯೇ ಆಗಬೇಕು ಎಂದು ಕಾಯುವುದೂ ಇಲ್ಲ. ಕೀಟಗಳು ಕಣ್ಣೆದುರು ಬಂದರೆ ಅದನ್ನೇ ಭಕ್ಷಿಸಿ ತೃಪ್ತಿಪಡುತ್ತದೆ.
ನೀರ ಸನಿಹದಲ್ಲಿ ನೆಲಕ್ಕೆ ಹತ್ತಿರ ಇರುವಷ್ಟು ಎತ್ತರದಲ್ಲಿ ಗೂಡು ಮಾಡಿಕೊಂಡಿರುತ್ತದೆ. ಸಾಮಾನ್ಯವಾಗಿ ಮಾರ್ಚ್ ನಿಂದ ಜುಲೈ ವೇಳೆಯಲ್ಲಿ ಗೂಡು ಕಟ್ಟಿಕೊಂಡು 4 -6 ಮೊಟ್ಟೆಗಳನ್ನಿಟ್ಟು ಮರಿಮಾಡುತ್ತದೆ.
ಎದೆ ಭಾಗದಲ್ಲಿ ಬೆಳ್ಳಗಿನ ಮಚ್ಚೆ, ರೆಕ್ಕೆಗಳ ಮೇಲಿನ ನೀಲಿ ಆಕರ್ಷಣೀಯ. ದೇಹದ ಇನ್ನುಳಿದ ಭಾಗ ಕಂದು ಬಣ್ಣದಿಂದ ಇರುತ್ತದೆ. ಗದ್ದೆ ಮಿಂಚುಳ್ಳಿಯನ್ನು ಪಾಕಿಸ್ತಾನ, ಬಾಂಗ್ಲಾ, ಶ್ರೀಲಂಕಾಗಳಲ್ಲಿ ಜಾಸ್ತಿಯಾಗಿ ಅಲೆದಾಡಿಕೊಂಡಿರುತ್ತದೆ.
ಚಿತ್ರ: ಅಂತರ್ಜಾಲ


Share This

Leave a Reply

Your email address will not be published. Required fields are marked *