ಯಶಸ್ವಿಯಾದ ” ಕೋಬಾಲ್ಟ್ ಕಲಾ ಸಂಪರ್ಕ “! 

Share This

ನಾಲ್ಕಾರು ವರ್ಷ ವಯಸ್ಸಿನ ಮುಗ್ಧ ಮಗುವಿನ ಹತ್ತಾರು ಪ್ರಶ್ನಿಗಳಿಂದ ಹಿಡಿದು ಮುಪ್ಪಿನಲ್ಲೂ ಉತ್ಸಾಹದಿಂದ ಬಂದು ಹರಸಿ, ಬೆನ್ನುತಟ್ಟಿ ಆಸಕ್ತಿಯಿಂದ ಕೇಳುವ ಪ್ರಶ್ನೆಗಳಿಗೆ ಉತ್ತರಿಸುವ ಅವಕಾಶ ಇದಾಗಿತ್ತು.
ಗಣಪತಿ ಹೆಗಡೆ ಅವರ ಕೋಬಾಲ್ಟ್ ಸಂಸ್ಥೆ ಆಯೋಜನೆಯ “ಕಲಾ ಸಂಪರ್ಕ” ಕಾರ್ಯಕ್ರಮ ನಿನ್ನೆ ಭಾನುವಾರ ಬೆಂಗಳೂರಿನ ರಾಜರಾಜೇಶ್ವರಿ ನಗರದ ಫೀಲ್ಡ್ ಮಾರ್ಷಲ್ ಜನರಲ್ ಕಾರ್ಯಪ್ಪ ಉದ್ಯಾನವನದಲ್ಲಿ ನಡೆಯಿತು. ನೂರಾರು ಮಕ್ಕಳು, ಪೋಷಕರು, ಕಲಾಸಕ್ತರು, ಕಲಾವಿದರು ಈ ಸುಂದರ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಯಶಸ್ವಿ ಕಾರ್ಯಕ್ರಮ ಎನ್ನುವುದರಲ್ಲಿ ಯಾವ ಅನುಮಾನ ಇಡಬೇಕಿಲ್ಲ. ಮಕ್ಕಳು ಮತ್ತು ಪೋಷಕರ ಆಸಕ್ತಿಯೇ ಇದಕ್ಕೆ ಸಾಕ್ಷಿ.

ಬಣ್ಣಗಳ ಜೊತೆ ವಿರಮಿಸಿದ ಮಕ್ಕಳು
ಕೋಬಾಲ್ಟ್ ಸಂಸ್ಥೆ ಮಕ್ಕಳ ಚಿತ್ರಕಲಾ ಸ್ಪರ್ಧೆ ಏರ್ಪಡಿಸಿತ್ತು. ಸ್ಪರ್ಧೆಯಲ್ಲಿ ನೂರಾರು ಮಕ್ಕಳು ಪಾಲ್ಗೊಂಡಿದ್ದರು. ನಿಸರ್ಗದ ಮಡಿಲಲ್ಲಿ ಕುಳಿತು ಚಿತ್ರ ರಚಿಸಿ ಗಮನ ಸೆಳೆದರು.


Share This

Leave a Reply

Your email address will not be published. Required fields are marked *