ದಾಕಹವಿಸ ಸಾಗಿಬಂದ ದಾರಿ ಗಮನಾರ್ಹ

Share This

ಬೇರೆ ಬೇರೆ ಕಾರಣಗಳಿಗಾಗಿ ಒಂದು ಕಲಾಕೃತಿ ನೋಡುಗರನ್ನು ಹಿಡಿದುನಿಲ್ಲಿಸುತ್ತದೆ. ಕಲಾಕೃತಿ ಅಗತ್ಯ ಸತ್ವಗಳನ್ನೆಲ್ಲ ಒಳಗೊಂಡಿದೆ ಎಂದಾದರೆ ಆ ಕಾಲಘಟ್ಟಕ್ಕೆ ಆ ಕಲಾಕೃತಿಯ ಯಶಸ್ಸು ಅದು.
ಹಾಗೇ, ಕಲಾಪ್ರದರ್ಶನ ಕೂಡ. ಗಮನ ಸೆಳೆಯುವ ಕಲಾಕೃತಿಗಳು ಪ್ರದರ್ಶಿಸಲ್ಪಟ್ಟಿವೆ ಎಂದಾದಲ್ಲಿ ಸಹಜವಾಗಿಯೇ ಅದನ್ನು ಯಶಸ್ಸು ಎಂದೇ ಪರಿಗಣಿಸಬೇಕಾಗುತ್ತದೆ.
ವಿಶೇಷವಾಗಿ, ಸಮೂಹ ಕಲಾಪ್ರದರ್ಶನ ಆಗಿರುವ ಸಂದರ್ಭದಲ್ಲಿ ಇಡೀ ಪ್ರದರ್ಶನದ ಸಮತೋಲನ ಕಾಪಾಡಿಕೊಳ್ಳುವುದು ಬಲು ಕಷ್ಟದ ಸಂಗತಿ. ಈ ಪ್ರಯತ್ನದಲ್ಲಿಯೇ ಆಯೋಜಕರು ಹೈರಾಣ ಆಗಬೇಕಾದ ಸ್ಥಿತಿ ನಿರ್ಮಾಣ ಆಗಿರುತ್ತದೆ.
ಈ ಸವಾಲುಗಳನ್ನೆಲ್ಲ ಮೀರಿ ಪ್ರದರ್ಶನಕ್ಕೆ ನ್ಯಾಯ ದೊರಕಿಸುವುದೇ ಆಯೋಜಕರ ಮುಂದಿರುವ ಸವಾಲಾಗಿರುತ್ತದೆ.

ಇತ್ತೀಚಿಗೆ ಕರ್ನಾಟಕ ಚಿತ್ರಕಲಾ ಪರಿಷತ್ತಿನ ದೇವರಾಜ ಅರಸು ಗ್ಯಾಲರಿಯಲ್ಲಿ ನಡೆದ ದಾವಣಗೆರೆ ಕಲಾಶಾಲೆ ಹಳೆಯ ವಿದ್ಯಾರ್ಥಿಗಳ ಸಂಘ (ದಾಕಹವಿಸ) ಆಯೋಜಿಸಿದ ಕಲಾಪ್ರದರ್ಶನ ಈ ನಿಟ್ಟಿನಲ್ಲಿ ಗಮನ ಸೆಳೆಯಿತು. ಹಳೆಯ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸುವುದೇ ಪ್ರಯಾಸದ ಕೆಲಸ. ಅದರಲ್ಲೂ ಅವರ ಕಲಾಕೃತಿಗಳನ್ನು ತರಲು ಹೇಳಿ ಅವುಗಳನ್ನು ಪ್ರದರ್ಶಿಸುವುದು ಇನ್ನೂ ಪ್ರಯಾಸದ ಕೆಲಸ.

ಈ ಆಂಶಗಳನ್ನೆಲ್ಲ ಗಮನಿಸಿದಾಗ ದಾಕಹವಿಸ ಸಾಗಿಬಂದ ದಾರಿ ಬಹಳ ಗಮನಾರ್ಹ ಅನಿಸುತ್ತದೆ. ಸಂಘಟನೆಯ ಕಹಿ-ಸಿಹಿ ಸಂಘಟನೆಗಿಳಿದವರಿಗೇ ಮಾತ್ರ ಗೊತ್ತಿರಲು ಸಾಧ್ಯ. ಈ ನಿಟ್ಟಿನಲ್ಲಿ ದಾಕಹವಿಸ ಭರವಸೆಯ ಬೆಳಕು. ಯಾವಾಗಲೂ ತನ್ನ ಪರಿಧಿಯಲ್ಲಿರುವವರನ್ನು ಗೋಚರಿಸುವಂತೆ ಮಾಡುವುದು ಬೆಳಕಿನ ಗುಣ. ದಾಕಹವಿಸ ಎಂಬ ಬೆಳಕು ಎಲ್ಲರನ್ನೂ ಒಳಗೊಳ್ಳುವ ಪ್ರಜ್ವಲಿಸುವ ಶಕ್ತಿಯಾಗಲಿ.
ಕಲಾಪ್ರದರ್ಶನದಲ್ಲಿ ತಮ್ಮ ಕಲಾಕೃತಿ ಪ್ರದರ್ಶಿಸಿದ ಎಲ್ಲಾ ಕಲಾವಿದರಿಗೂ ಅಭಿನಂದನೆಗಳು 💐

 


Share This

Leave a Reply

Your email address will not be published. Required fields are marked *