ಹಿರಿಯ ಕಲಾವಿದ ಎಂ.ಎಸ್.ಚಂದ್ರಶೇಖರ್

Share This

• ಶತಮಾನೋತ್ಸವ ನಿಮಿತ್ತ ಕಲಾಪ್ರದರ್ಶನ • ನಾಳೆ ಏಪ್ರಿಲ್ 19ರಂದು ಪ್ರದರ್ಶನಕ್ಕೆ ಚಾಲನೆ
ಮೈಸೂರ ಕಲಾವಿದರ ಹೆಸರುಗಳು ಕೇಳಿಬಂದಾಗ ಅಥವಾ ಕರ್ನಾಟಕದ ಕಲಾವಿದರ ಹೆಸರುಗಳ ಸಾಲಿನಲ್ಲಿ ದಿವಂಗತ ಎಂ.ಎಸ್. ಚಂದ್ರಶೇಖರ್ ಅವರ ಕುರಿತ ಪಾಠ ಕೇಳಿಸಿಕೊಳ್ಳುವಾಗ, ಪುಸ್ತಕ ಓದುವಾಗ ಅಕ್ಷರಗಳ ಮುಖೇನ ಪರಿಚಯ ಆಗುತ್ತಿತ್ತು. ಕೆಲ ಕಲಾವಿದರು ಕಲೆಯ ಕುರಿತು ಮಾತಕತೆ ನಡೆಸುವಾಗಲೂ ಪರಿಚಯವಾಗಿದ್ದಿದೆ.
ಅನೇಕ ಸಂದರ್ಭಗಳಲ್ಲಿ ಒಮ್ಮೆಯಾದರೂ ಚಂದ್ರಶೇಖರ್ ಅವರನ್ನು ಮಾತನಾಡಿಸಬೇಕು ಅನಿಸಿದ್ದಿದೆ. ಆದರೆ, ಭೇಟಿ ಸಾಧ್ಯವಾಗೇ ಇಲ್ಲ. ಅವರದೇ ತಲೆಮಾರಿನ ಮೈಸೂರಿನ ಕಲಾವಿದರ ಜೊತೆ ಸೇರುವಾಗಲೂ ಇಂತಹದ್ದೊಂದು ಅವಕಾಶ ಸಿಕ್ಕಿರಲಿಲ್ಲ.
ಈ ದಿನಗಳಲ್ಲೂ ಆಗಾಗ ಎಂ.ಎಸ್. ಚಂದ್ರಶೇಖರ್ ಅವರ ಹೆಸರು ಪ್ರಸ್ತಾಪವಾದಾಗ ‘ ಎದುರಾದರೆ ಮಾತನಾಡಿಸಬೇಕೆನ್ನುವ ಕನಸು ಹಾಗೇ ಉಳಿದುಬಿಟ್ಟಿತಲ್ಲ’ ಎಂದು ನೆನಪಿಸಿಕೊಂಡಿದ್ದಿದೆ. ಅವರ ಭೇಟಿ ಸಾಧ್ಯವಾಗದಿದ್ದರೂ ಅವರ ಕಲಾಕೃತಿಗಳ ಜೊತೆ ಮಾತನಾಡುವ, ಅವರ ಕುರಿತು ಇನ್ನಷ್ಟು ಮಾಹಿತಿ ಸಂಗ್ರಹಿಸುವ ಅವಕಾಶ ಎದುರಿಗಿದೆ.
ಹೌದು friends, ಕರ್ನಾಟಕ ಚಿತ್ರಕಲಾ ಪರಿಷತ್ತು ಎಂ.ಎಸ್. ಚಂದ್ರಶೇಖರ್ ಅವರ ಮಕ್ಕಳ ಸಂಗ್ರಹದಲ್ಲಿ ಇರುವ ಕಲಾಕೃತಿಗಳನ್ನು “ಎಟರ್ನಲ್ ಎಕೋಸ್” (Eternal Echoes) ಶೀರ್ಷಿಕೆಯಡಿ ಕಲಾಪ್ರದರ್ಶನ ಆಯೋಜಿಸಿದೆ. ಕಲಾಕೃತಿಗಳನ್ನು ವೀಕ್ಷಿಸಲು ಈಗೊಂದು ಅವಕಾಶವಿದೆ.
ಶತಮಾನೋತ್ಸವ ಹಿನ್ನೆಲೆಯಲ್ಲಿ ಏಪ್ರಿಲ್ 19ರಿಂದ ಚಿತ್ರಕಲಾ ಪರಿಷತ್ ಗ್ಯಾಲರಿ 1,2,3 ಮತ್ತು 4ರಲ್ಲಿ ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ. ಜಲವರ್ಣ, ತೈಲವರ್ಣ ಕಲಾಕೃತಿಗಳನ್ನು ವೀಕ್ಷಿಸಬಹುದಾಗಿದೆ. ಅಲ್ಲದೇ, ಅವರ ಕಲಾ ಜೀವನದ ಪ್ರಮುಖ ಘಟ್ಟ ಎನ್ನಬಹುದಾದ ಅಜಂತ ಗುಹೆಗಳಲ್ಲಿನ ಭಿತ್ತಿಚಿತ್ರಗಳನ್ನು ಮರುಚಿತ್ರಿಸುವ ಕಾರ್ಯದಲ್ಲಿ 25 ವರ್ಷಗಳ ಸೇವೆ ಸಲ್ಲಿಸಿದ ಬಳಿಕ, ಮತ್ತು ಆ ಸಂದರ್ಭದಲ್ಲಿ ರಚಿಸಿದ ಕಲಾಕೃತಿಗಳನ್ನೂ ವೀಕ್ಷಿಸುವ ಸುವರ್ಣಾವಕಾಶ ಈ ಪ್ರದರ್ಶನಲ್ಲಿ ಸಿಗಲಿದೆ.
ಏಪ್ರಿಲ್ 19ರಂದು ಕಲಾಪ್ರದರ್ಶನಕ್ಕೆ ಚಾಲನೆ ಸಿಗಲಿದೆ.

Share This

Leave a Reply

Your email address will not be published. Required fields are marked *