ಪರಿಷತ್ ಗ್ಯಾಲರಿಯಲ್ಲಿ ‘ಚೋಳಮಂಡಲ’!

Share This

|“ಚೋಳಮಂಡಲ ಕಲಾಗ್ರಾಮ”ದ (Cholamandal Artists Village) ಕಲಾವಿದರನ್ನು ಹಿಂಬಾಲಿಸುವ ಸಂದರ್ಭವೊಂದು ಇತ್ತು. ಕಾರಣ, ಕಲಾಕೃತಿ ರಚಿಸುವ ವಿಚಾರದಲ್ಲಿ ಅವರಲ್ಲಿದ್ದ ಬದ್ಧತೆ, ಕ್ರಿಯಾಶೀಲತೆ, ಪ್ರಯೋಗಶೀಲತೆ ಮತ್ತು ಧಾರ್ಶ್ಯತನ.
ಆ ಕಾಲಘಟ್ಟದಲ್ಲಿ ಕಲೆಯಲ್ಲಿ ಬದಲಾವಣೆ ತರಬೇಕೆನ್ನುವ ತುಡಿತದಲ್ಲಿ ಕಾರ್ಯನಿರ್ವಹಿಸುವ ಚೋಳಮಂಡಲ ಕಲಾವಿದರ ವೇಗ ಎಲ್ಲರನ್ನೂ ಮಂತ್ರ ಮುಗ್ಧರನ್ನಾಗಿಸುತ್ತಿತ್ತು ಎನ್ನುವುದು ಈಗ ಇತಿಹಾಸ. ಅಷ್ಟೇ ಅಲ್ಲ, ದೇಶದ ಕಲಾಕ್ಷೇತ್ರ ಒಮ್ಮೆ ದಕ್ಷಿಣದ ಕಡೆ ಮುಖ ತಿರುಗಿಸಿ ನೋಡುವಂತೆ ಮಾಡಿದ್ದು ಮಡ್ರಾಸ್ ಆರ್ಟ್ ಮೂವ್ಮೆಂಟ್ (madras art movement) ಎನ್ನುವುದನ್ನು ಅನೇಕ ಸಂದರ್ಭಗಳಲ್ಲಿ ಹಿರಿಯ ಕಲಾವಿದರು ಪ್ರಸ್ತಾಪಿಸಿದಾಗ ಕುತೂಹಲ ಮೂಡಿಸುವುದುಂಟು. ಹೀಗಾಗಿ ಚೋಳಮಂಡಲ ಕಲಾವಿದರ ಕಲಾಕೃತಿಗಳ ಬಗ್ಗೆ ಸಾಕಷ್ಟು ನಿರೀಕ್ಷೆಗಳು ಇದ್ದೇ ಇರುತ್ತವೆ. ಆದರೆ, ನಿರೀಕ್ಷೆ ಹುಸಿಯಾದಾಗ ಸಹಜವಾಗಿಯೇ ನಮ್ಮೊಳಗೆ ಹತ್ತಾರು ಪ್ರಶ್ನೆಗಳು ಮೂಡಲಾರಂಬಿಸುತ್ತವೆ.
    ಕರ್ನಾಟಕ ಚಿತ್ರಕಲಾ ಪರಿಷತ್ ಪ್ರಮುಖ ಗ್ಯಾಲರಿಗಳಲ್ಲಿ ಚೋಳಮಂಡಲ ಕಲಾವಿದರ ಕಲಾಕೃತಿಗಳು ಪ್ರದರ್ಶಿಸಲ್ಪಟ್ಟಿವೆ. ” Artists of Cholamandal Artist’s Village ” ಶೀರ್ಷಿಕೆಯಡಿ ಈ ಪ್ರದರ್ಶನವು ಚೋಳಮಂಡಲ ಕಲಾಗ್ರಾಮ ಮತ್ತು ಕರ್ನಾಟಕ ಚಿತ್ರಕಲಾ ಪರಿಷತ್ ಸಹಯೋಗದಲ್ಲಿ ಆಯೋಜಿಸಲಾಗಿದೆ.
    ಬಹಳ ನಿರೀಕ್ಷೆಗಳನ್ನು ಹುಟ್ಟುಹಾಕಿದ್ದ ಕಲಾಪ್ರದರ್ಶನ ಇದಾಗಿತ್ತು. ಮತ್ತೊಮ್ಮೆ ಹೊಸ ಅಲೆಯನ್ನು ಸೃಷ್ಟಿಸಬಲ್ಲ ಪ್ರಯತ್ನದ ಪ್ರದರ್ಶನ ಇದಾಗಿರುತ್ತದೆನ್ನುವ ನಿರೀಕ್ಷೆ ಫಲಿಸಲಿಲ್ಲ. ಆದರೆ ಜನಮಾನಸದಲ್ಲಿ ಅಚ್ಚೊತ್ತಿರುವ ಹಿರಿಯ ಕಲಾವಿದರ ಕಲಾಕೃತಿಗಳನ್ನು ಮಗದೊಮ್ಮೆ ಕಣ್ತುಂಬಿಕೊಳ್ಳುವ ಅವಕಾಶ ಸಿಕ್ಕಿತು. ಆಯೋಜಕರು ಮನಸ್ಸು ಮಾಡಿದ್ದರೆ ಈ ಕಲಾಪ್ರದರ್ಶನವನ್ನು ನಿರೀಕ್ಷೆಯ ಮಟ್ಟಕ್ಕೆ ಕೊಂಡೊಯ್ಯಬಹುದಿತ್ತು. ಕಲಾಕೃತಿಗಳನ್ನು ಇನ್ನಷ್ಟು ಅಳೆದುತೂಗಿ ಆಯ್ದುಕೊಳ್ಳುವ ಪ್ರಕ್ರಿಯೆಗೆ ಒಳಪಡಿಸಬೇಕಿತ್ತು. ಪ್ರದರ್ಶನ ಆಯೋಜನೆಯ ಭಾಗವಿದಾಗಿದ್ದರಿಂದ ಸಮರ್ಥನೀಯವೂ ಆಗಿರುತ್ತಿತ್ತು.
    ಭಾರತೀಯ ನವ್ಯ ಕಲಾ ಪರಂಪರೆಗೆ ಒಂದು ಶಕ್ತಿ ತುಂಬಿರುವ, ತಮ್ಮದೇ ಶೈಲಿಯೊಂದರ ಮೂಲಕ ಕಲಾಕ್ಷೇತ್ರದಲ್ಲಿ ತಮ್ಮ ಛಾಪು ಒತ್ತಿರುವ ನಮ್ಮ ನೆಲದ ಎಸ್.ಜಿ.ವಾಸುದೇವ್ ಸೇರಿದಂತೆ ಅನೇಕ ಹಿರಿಯರ paintings, sculptures, prints ಈ ಪ್ರದರ್ಶನದಲ್ಲಿವೆ.
Friends, ಈ ಕಲಾಪ್ರದರ್ಶನ ಫೆಬ್ರವರಿ 25ರಂದು ಸಂಪನ್ನಗೊಳ್ಳಲಿದೆ. ಬಿಡುವು ಮಾಡಿಕೊಂಡು ಒಂದು ಭೇಟಿ ಕೊಡಿ. ಕಲಾಕೃತಿಗಳನ್ನು ವೀಕ್ಷಿಸಲು ಅವಕಾಶ ಮಾಡಿಕೊಟ್ಟ ಚೋಳಮಂಡಲ ಕಲಾವಿದರೆಲ್ಲರಿಗೂ ಅಭಿನಂದನೆಗಳು 💐.

Share This

Leave a Reply

Your email address will not be published. Required fields are marked *