• ಗಮನ ಸೆಳೆದ Murmurations ಪ್ರದರ್ಶನ
• ಕಾಂಚನಾ ರತ್ನಾ ಪ್ರಯತ್ನಕ್ಕೆ ಪ್ರಕೃತಿಯೇ ಸತ್ವ
” There are many diverse methods and limitless materials used to create art. The methods and materials are often combined to create new ways to express their vision and mastery. “
ಕಲಾಕೃತಿ ರಚನಾ ವಿಧಾನಗಳಿಗೆ (methods) ಇತಿಮಿತಿಗಳಿಲ್ಲ. ಯಾವುದೇ ಮಾಧ್ಯಮ (medium) ಆಗಿದ್ದರೂ ಒಬ್ಬ ಕಲಾವಿದನಿಂದ ಇನ್ನೊಬ್ಬ ಕಲಾವಿದರ ಬಳಕೆ ಪ್ರಕ್ರಿಯೆ (process), ವಿಧಾನ ಒಂದೇ ಆಗಿರುವುದಿಲ್ಲ. ಭಿನ್ನತೆ ಇದ್ದೇ ಇರುತ್ತದೆ. ಅಂದಮಾತ್ರಕ್ಕೆ ಭಿನ್ನತೆ ಇರಬಾರದು ಅಥವಾ ಇರಬೇಕು ಎನ್ನುವ ಯಾವ ನಿಯಮವೂ ಇಲ್ಲ. ಅಲಿಖಿತವಾದ ಕೆಲವು ನಿಯಮಗಳನ್ನು ಶೈಕ್ಷಣಿಕವಾಗಿ ಅನುಸರಿಸಿಕೊಂಡು ಬರಲಾಗಿದೆಯಷ್ಟೆ. ಸಾಮಾನ್ಯವಾಗಿ ಅಭ್ಯಾಸ (practice) ಸಂದರ್ಭ ಯಾವ ಕ್ರಮವನ್ನು ಅನುಸರಿಸಿಕೊಂಡು ಬಂದಿರುತ್ತಾರೋ ಅದನ್ನೇ ಮುಂದುವರಿಸುವುದು ಲೋಕರೂಡಿ. ಬೆರಳೆಣಿಕೆಯಷ್ಟು ಮಂದಿ ಪ್ರಯೋಗಾತ್ಮಕ ಅಭ್ಯಾಸ (experimental practice) ಆರಂಭಿಸಿ ತೃಪ್ತಿದಾಯಕ ಅನಿಸಿದಾಗ ಆ ಶೈಲಿಗೆ ಅಂಟಿಕೊಳ್ಳುವ ಅಥವಾ ಅದೇ ವಿಧಾನ ಹಿಂಬಾಲಿಸುವುದು ಸರ್ವೇಸಾಮಾನ್ಯ.
ಪ್ರಾಯೋಗಿಕ ಹಂತದಲ್ಲಿ ಸ್ಪಷ್ಟತೆ ಸಿಕ್ಕಾಗ ಅಥವಾ ಕಂಡುಕೊಂಡಾಗ ಕಲಾವಿದರ ಮುಂದಿನ ಕಲಾ ಪ್ರಯಾಣದಲ್ಲಿ ಪ್ರಭುದ್ಧತೆ(maturity)ಯನ್ನು ಕಾಣಲು ಸಾಧ್ಯ. ಕೆಲವೊಮ್ಮೆ ಕಲಾವಿದರು ಪ್ರಾಯೋಗಿಕ ಹಂತದಲ್ಲಿ ಬಹಳ ಬೇಗ ಫಲಿತಾಂಶ ಕಂಡುಕೊಳ್ಳುತ್ತಾರೆ. ಹಾಗಂತ ಅದೇ ಶ್ರೇಷ್ಠ (supreme) ಎಂದಲ್ಲ. ಅದೇ ಅಂತಿಮ ಎಂದೂ ಹೇಳಲಾಗದು. ಯಾವುದೇ ಹಂತದಲ್ಲಿ ಪುನಃ ಬದಲಾವಣೆ ಕಾಣುವ, ದಿಕ್ಕು ಬದಲಿಸುವ ಸಾದ್ಯತೆಯನ್ನು ತಳ್ಳಿಹಾಕುವಂತಿಲ್ಲ.
| ಹೊಸ ಸಾಧ್ಯತೆ ತೆರೆದಿಟ್ಟ Eco prints |
ಕರ್ನಾಟಕ ಚಿತ್ರಕಲಾ ಪರಿಷತ್ 2ನೇ ಗ್ಯಾಲರಿಯಲ್ಲಿ ನಡೆಯುತ್ತಿರುವ ಕಾಂಚನಾ ರತ್ನಾ ಅವರ ‘ Murmurations ‘ ಏಕವ್ಯಕ್ತಿ ಕಲಾಪ್ರದರ್ಶನ (solo show) ವೀಕ್ಷಿಸಿದಾಗ Eco printing ಮಾಧ್ಯಮವನ್ನು ಬಹಳ ಚೆನ್ನಾಗಿ ಬಳಸಿಕೊಂಡಿದ್ದು ಗಮನ ಸೆಳೆಯಿತು.
ಕಲಾಕೃತಿಯೊಂದು ಕಲಾವಿದನ ಅನುಭವ, ಧೋರಣೆ, ತುಡಿತ ಇವುಗಳನ್ನೆಲ್ಲಾ ತೆರೆದಿಡುತ್ತಾ ಹೋಗಬಲ್ಲದು. ಜೊತೆಗೆ ಸಾಗಿಬಂದಿರುವ ದಾರಿ ಮತ್ತು ಸಾಗಬಹುದಾದ ದಾರಿಯನ್ನೂ ಗುರಿತಿಸಲು ಸಾಧ್ಯ. ಕಾಂಚನಾ ಅವರ ಕಲಾಕೃತಿಗಳಲ್ಲೂ ಈ ಎಲ್ಲಾ ಸಾಧ್ಯತೆಗಳು ಕಂಡವು. ನಿರ್ವಹಣೆಯಲ್ಲಿ ಶಿಸ್ತು, ಶ್ರದ್ಧೆ ಇರುವುದು ನಿಚ್ಚಳ. ಆದರೆ, ಮುದ್ರಣ ಪೂರ್ವ ತಯಾರಿ ವೇಳೆ ಸಂಯೋಜನೆಯಲ್ಲಿ ಇನ್ನು ಹೆಚ್ಚಿನ ಗಮನ ಕೊಡಬಹುದಿತ್ತೇನೋ ಅನಿಸಿತು. ಅಲ್ಲದೆ, ಸೀಮಿತಗೊಳಿಸಿಕೊಳ್ಳುವ ಬದಲು ಮಗದಷ್ಟು ಪ್ರಾಯೋಗಿಕ ಪ್ರಯತ್ನಗಳನ್ನು ನಡೆಸಿದಲ್ಲಿ ಹೊಸತೊಂದರ ಅನಾವರಣವೂ ಆದೀತು.
ಒಟ್ಟಾರೆಯಾಗಿ ಹೇಳುವುದಾದರೆ ಕಾಂಚನಾ ರತ್ನಾ ಅವರು Eco print ವಿಧಾನವನ್ನು ಕಲಾಕೃತಿಗಳ ರಚನೆಗೆ ಜಾಣತನದಿಂದ ಉಪಯೋಗಿಸಿಕೊಂಡಿದ್ದಾರೆ.
ಸ್ನೇಹಿತರೆ Murmurations ಕಲಾಪ್ರದರ್ಶನ ನಾಳೆ ಭಾನುವಾರ (May 26th) ಸಂಪನ್ನಗೊಳ್ಳಲಿದೆ. ಬಿಡುವು ಮಾಡಿಕೊಂಡು ಹೋಗಿಬನ್ನಿ.