ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ 2024, ಡಿಸೆಂಬರ್ 8 ಭಾನುವಾರ Art Park ಕಾರ್ಯಕ್ರಮ ನಡೆಯಿತು. ಅನೇಕ ಹಿರಿಯ ಮತ್ತು ಕಿರಿಯ ಕಲಾವಿದರು ಪಾಲ್ಗೊಂಡಿದ್ದರು. ಸ್ನೇಹಿತರ ಭೇಟಿ ಸಾಧ್ಯವಾಯಿತು.
ಕಲಾವಿದರ ಜೊತೆ ಮಾತುಕತೆಗೆ, ಕಲೆಯ ಕುರಿತಾದ ಚರ್ಚೆಗೆ, ಹಿರಿಯ ಕಲಾವಿದರ ರಚನಾ ವಿಧಾನಗಳ ಬಗ್ಗೆ ತಿಳಿದುಕೊಳ್ಳಲು… ಹೀಗೆ ಅನೇಕ ಸಂಗತಿಗಳಿಗೆ ಇದೊಂದು ಉತ್ತಮ ವೇದಿಕೆ. ನಿಮಗೂ ಕಲಾವಿದರ ಜೊತೆ ಮಾತುಕತೆಗೆ ಇಲ್ಲಿ ಅವಕಾಶ ಸಾಧ್ಯವಾಗಲಿದೆ. ಪ್ರತಿ ತಿಂಗಳ ಒಂದು ಭಾನುವಾರ Art Park ನಡೆಯಲಿದೆ. ಆಸಕ್ತರು ಭೇಟಿ ಮಾಡಬಹುದು.