- ಹಳ್ಳಿಯ ಬದುಕಿನ ಮೌಲ್ಯ ನೆನಪಿಸಿದ ಕುರಿಗಾಹಿಗಳ ಬಳಕೆ ಸಾಮಗ್ರಿಗಳು
ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರ (IGNCA) ಬೆಂಗಳೂರು ಕೇಂದ್ರದ ಆವರಣದಲ್ಲಿ ಜನವರಿ 27ರಿಂದ ಆರಂಭವಾದ ‘Pastoralism’ ಕರಕುಶಲ ಕಲಾ ಪ್ರದರ್ಶನ ಮತ್ತು ಜೀವನ ಪದ್ಧತಿ ತೆರೆದಿಡುವ ಅಧ್ಯಯನ ಯೋಗ್ಯ ಪ್ರದರ್ಶನ ನಿನ್ನೆ ಫೆ.16ರಂದು ಸಂಪನ್ನಗೊಂಡಿದೆ.
ಕಡೆಯ ದಿನವಾದ ನಿನ್ನೆ ಭಾನುವಾರ ಒಂದು ಸುತ್ತು ಹೊಡೆದು ಕಣ್ತುಂಬಿಕೊಂಡು ಬಂದೆ. ಇಂತಹ ಮೇಳಗಳು ಜನಸಾಮಾನ್ಯರಿಗೆ ಬುಡಕಟ್ಟು ಜನರ ಬದುಕಿನ ಮೌಲ್ಯಗಳನ್ನು, ಜೀವನ ಪದ್ಧತಿಯನ್ನು, ಅನಿವಾರ್ಯತೆಗಳನ್ನು, ಸುಖ-ದುಃಖಗಳನ್ನು ಪರಿಚಯಿಸಲು ಸಾಧ್ಯವಾಗುತ್ತದೆ. ಕಾಂಕ್ರೀಟ್ ಕಾಡಿನಲ್ಲಿ ನಿತ್ಯ ಬೇಯುವ ಬೆಂಗಳೂರು ಜನತೆ ಈ ಪ್ರದರ್ಶನದ ಸದುಪಯೋಗ ಪಡೆದಿದೆ ಎಂದು ಭಾವಿಸಿದ್ದೇನೆ. ಈ ಪ್ರದರ್ಶನದ ಒಂದಿಷ್ಟು ಛಾಯಾಚಿತ್ರಗಳನ್ನು ನಿಮಗಾಗಿ ಮುಖಪುಟದ ಗೋಡೆಗೆ ಅಂಟಿಸಿದ್ದೇನೆ. ನೀವೂ ಕಣ್ತುಂಬಿಕೊಳ್ಳಿ.
ಪ್ರದರ್ಶನದಲ್ಲಿ ಕಾಣಿಸಿದ ಕೆಲವು ಕರಕುಶಲ ಕಲಾಕೃತಿಗಳು ಆಪ್ತವೆನಿಸಿದವು. ಕುರಿಗಾಹಿಗಳ ಬಳಕೆಯ ಸಾಮಗ್ರಿಗಳು ಹಳ್ಳಿಯ ಬದುಕಿನ ಮೌಲ್ಯ ನೆನಪಿಸಿದವು. ಅಧ್ಯಯನಶೀಲತೆ ಇದ್ದವರಿಗೆ ಒಂದು ಪಾಠವಾಗಿತ್ತು ಎನ್ನಬಹುದು.
ಈ ಪ್ರದರ್ಶನ ನೋಡಿಬಂದವರು ನಿಮ್ಮ ಅನುಭವ ಹಂಚಿಕೊಳ್ಳಿ.

