ಧ್ಯಾನಸ್ಥರನ್ನಾಗಿಸುವ S.H.RAZA ಕಲಾಕೃತಿಗಳು!

Share This

• ನವದೆಹಲಿಯ ಶ್ರೀಧರಣಿ ಗ್ಯಾಲರಿಯಲ್ಲಿ ‘ಅಂತಿಮ’ ಕಲಾಪ್ರದರ್ಶನ
ಖ್ಯಾತ ಹಿರಿಯ ಕಲಾವಿದರಾದ ಎಸ್.ಎಚ್.ರಜಾ ಇಹಲೋಕ ತ್ಯಜಿಸುವ ಕಡೇ ಕ್ಷಣಗಳಲ್ಲಿ ರಚಿಸಿರುವ ಕಲಾಕೃತಿಗಳ ‘ಅಂತಿಮ/ Antima ಪ್ರದರ್ಶನ ನವದೆಹಲಿಯ ತ್ರಿವೇಣಿ ಕಲಾ ಸಂಗಮದ ಶ್ರೀಧರಣಿ ಗ್ಯಾಲರಿಯಲ್ಲಿ ನಡೆಯುತ್ತಿದೆ.
ಭಾವನಾತ್ಮಕವಾಗಿ ಹೃದಯಸ್ಪರ್ಶಿ ಅನಿಸುವ ಕಲಾಪ್ರದರ್ಶನ ಇದು. ಅಂತಿಮ ಕ್ಷಣದಲ್ಲಿ ಆರಂಭಿಸಿ ಅಪೂರ್ಣವಾಗಿಯೇ ಉಳಿದ ಕಲಾಕೃತಿಯ ಎದುರು ನಿಂತಾಗ ಮತ್ತೆ ಬಂದು ಪೂರ್ಣಗೊಳಿಸುತ್ತಾರೆ ಎನ್ನುವ ಭಾವ ನಮ್ಮನ್ನು ಆವರಿಸಿಕೊಳ್ಳುತ್ತದೆ.
ಗಾಢವಾದ ವರ್ಣ ಬಳಕೆ ಮತ್ತು ತಂತ್ರಗಳನ್ನೇ ವಿಷಯ ವಸ್ತುವಾಗಿಸಿಕೊಂಡು ಛಾಪು ಮೂಡಿಸಿರುವ ಎಸ್.ಎಚ್.ರಜಾ ಅವರ ಕಲಾಕೃತಿಗಳಲ್ಲಿ ಕಾಣಲು ಸಾಧ್ಯವಾಗುವ ಅಮೂರ್ತವಾದ ನೋಡುಗರನ್ನು ಗೊತ್ತಿಲ್ಲದಂತೆ ಧ್ಯಾನಸ್ಥರನ್ನಾಗಿಸುವ ಶಕ್ತಿ ಹೊಂದಿವೆ. ವೈವಿಧ್ಯಮಯ ಬಣ್ಣಗಳ ಬಳಕೆಯಲ್ಲಿನ ಸಮತೋಲನ ಆಧ್ಯಾತ್ಮದ ಕಡೆ ಕೊಂಡೊಯ್ಯುತ್ತದೆ.
S H Raza ಅವರು 2010ರಲ್ಲಿ ಭಾರತಕ್ಕೆ ಮರಳಿದ ಬಳಿಕ 2016ರ ತನಕ ರಚಿಸಿರುವ ಕಲಾಕೃತಿಗಳು ಇವು ಎನ್ನುವುದನ್ನು ಆಯೋಜಕರಾದ ರಜಾ ಆರ್ಟ್ ಫೌಂಡೇಶನ್ ಸ್ಪಷ್ಟಪಡಿಸಿದೆ. ಫೆ.12ರಂದು ಆರಂಭವಾದ ಕಲಾಪ್ರದರ್ಶನ ಫೆ.22ರಂದು ಸಂಪನ್ನಗೊಳ್ಳಲಿದೆ.

 


Share This

Leave a Reply

Your email address will not be published. Required fields are marked *