ದೃಶ್ಯ ಜ್ಞಾನ ನೀಡುವ ಸಸ್ಯ ವಿಜ್ಞಾನ ಕಲಾಪ್ರದರ್ಶನ!

Share This

  • 1 Shanthi Road, Alliance Francaise ಗ್ಯಾಲರಿಗಳಿಗೆ ಭೇಟಿ ಕೊಡಿ, ಇಂದು ಸಂಪನ್ನ

ಸಸ್ಯವೊಂದು ಜಗತ್ತು ಸುತ್ತುವುದನ್ನು ಊಹಿಸಿಕೊಳ್ಳುವುದೇ ಒಂದು ವಿಶೇಷವಾದ ಅನುಭಾವ ಮೂಡಿಸುವಂತದ್ದು. ಅದರಲ್ಲೂ ಸುತ್ತಮುತ್ತಲಿನ, ಕಾಲು ಬುಡದಲ್ಲೇ ಇರುವ ಸಸ್ಯವೊಂದು ಹೇಗೆಲ್ಲಾ ಪ್ರಯಾಣ ನಡೆಸಬಲ್ಲದು ಎನ್ನುವುದನ್ನು ಕಲ್ಪಿಸಿಕೊಳ್ಳುವ ಪ್ರಕ್ರಿಯೆ ನಿಜಕ್ಕೂ ಸೋಜಿಗವಾದುದು. ಸಸ್ಯ ಜಗತ್ತೇ ಒಂದು ಅದ್ಭುತವಾದುದು. ಇಂತಹ ಅದ್ಭುತಗಳ ಬಗ್ಗೆ ಅಧ್ಯಯನ ಮಾಡುತ್ತಾ ಹೋದಾಗ ಮಾತ್ರ ಹೊಸ ಹೊಸ ವಿಚಾರಗಳು ನಮ್ಮನ್ನು ಆವರಿಸಿಕೊಳ್ಳುತ್ತಾ ಹೋಗಲು ಸಾಧ್ಯ. ಅರಿವು ಮೂಡಲು ಸಾಧ್ಯ. ಅಷ್ಟೇ ಅಲ್ಲ ಅಭಿವ್ಯಕ್ತಿಗೆ ಪ್ರೇರಣೆ, ಸ್ಫೂರ್ತಿದಾಯಕವೂ ಹೌದು!

ಸಸ್ಯ, ಪರಿಸರ-ವಿಜ್ಞಾನ ಇತಿಹಾಸ ಜೊತೆಗೆ ಸೌಂದರ್ಯ ಇವೆಲ್ಲವೂ ದೃಶ್ಯಕಲಾವಿದರ ಅಭಿವ್ಯಕ್ತಿಗೆ ಅಗತ್ಯವಿರುವ ಸರಕುಗಳು ಎನ್ನುವುದನ್ನು ಅನೇಕ ಸಂದರ್ಭಗಳಲ್ಲಿ ಪ್ರಸ್ತಾಪಿಸಿ ಬರೆದಿದ್ದೆ. ಇದಕ್ಕೊಂದು ಅತ್ಯುತ್ತಮ ಉದಾಹರಣೆ ಎನ್ನುವಂತಿದೆ ಈ ಕಲಾಪ್ರದರ್ಶನ. ಬೆಂಗಳೂರಿನ 1ಶಾಂತಿರೋಡ್ ಸ್ಟುಡಿಯೋ/ಗ್ಯಾಲರಿ (1 Shanthi Road Studio Gallery, Shantinagar) ಮತ್ತು ಅಲಿಯಾನ್ಸ್ ಫ್ರಾನ್ಸಿಸ್ ಗ್ಯಾಲರಿಗಳಲ್ಲಿ (Alliance Francaise, Vasanthnagar) ಏಕಕಾಲದಲ್ಲಿ ನಡೆಯುತ್ತಿರುವ ‘TRAVELING PLANTS’ ಕಲಾಪ್ರದರ್ಶನ ಅನೇಕ ವಿಶೇಷತೆಯಿಂದ ಕೂಡಿದೆ. ಈ ಹಿಂದೆ ದೆಹಲಿಯಲ್ಲಿ ನಡೆದ ಕಲಾಪ್ರದರ್ಶನ ವೀಕ್ಷಿಸಿದ ನೆನಪು ಜ್ಞಾಪಕಕ್ಕೆ ಬಂತು. ಪರಿಸರ-ವಿಜ್ಞಾನವನ್ನೇ ವಿಷಯವನ್ನಾಗಿಸಿಕೊಂಡು ಕಲಾವಿದ ಭಾವನೆಗಳನ್ನು ದೃಶ್ಯಕಲೆಯ ಮೂಲಕ ಅಭಿವ್ಯಕ್ತಗೊಳಿಸುವುದು ಸಹಜವಾಗಿಯೆ ಒಂದಿಷ್ಟು ಕುತೂಹಲ ಕೆರಳಿಸುತ್ತದೆ. ಈ ಕಲಾಪ್ರದರ್ಶನದಲ್ಲಿಯೂ ಇಂತಹ ಒಂದಿಷ್ಟು ಸಂಗತಿಗಳು, ಮಾಹಿತಿಗಳು ಲಭ್ಯವಾಗುತ್ತವೆ. ಪ್ರತಿಯೊಂದು ಕಲಾಕೃತಿಯೂ ಹೊಸದೊಂದು ಅನುಭವದ ದೋನಿಯಲ್ಲಿ ಕರೆದೊಯ್ಯುತ್ತವೆ. ವಿಭಿನ್ನ ನೆಲೆಯಲ್ಲಿರುವ, ಹೊಸ ಅನುಭವ ಕೊಡುವ ಮತ್ತು ಭಿನ್ನ ಭಾವ ಮೂಡಿಸುವ ಕಲಾಕೃತಿಗಳನ್ನು ಭಿನ್ನ ಆಯಾಮದಲ್ಲಿ ನೋಡುವಂತೆ ಮಾಡಿದ್ದಾರೆ ಇತಿಹಾಸಕಾರರಾದ ಸುರೇಶ್ ಜೈರಾಮ್ ಮತ್ತು ಲಿನಾ ವಿನ್ಸೆಂಟ್. ಇಬ್ಬರು ಕ್ಯುರೇಟರ್ಗಳ ಅನುಭವವನ್ನು ಪ್ರದರ್ಶನದಲ್ಲಿ ಗುರಿತಿಸಬಹುದಾಗಿದೆ.

ಚೆನ್ನೈ, ಹೈದರಾಬಾದ್ ಮತ್ತು ದೆಹಲಿಯಲ್ಲಿ ಪ್ರದರ್ಶನ ಆಯೋಜನೆಯಾಗಿ ಇದೀಗ ಬೆಂಗಳೂರಿಗೆ ಕಾಲಿಟ್ಟಿದೆ. ಬೆಂಗಳೂರು ಆವೃತ್ತಿಗೆ ಸುರೇಶ್ ಜೈರಾಮ್ ಅವರು ಇನ್ನಷ್ಟು ಮೆರಗು ನೀಡುವ ಪ್ರಯತ್ನ ಮಾಡಿದ್ದಾರೆ.

ಬೇರೆ ಬೇರೆ ಕಲಾಪ್ರಕಾರಗಳಲ್ಲಿನ ಮೂರ್ತ ಮತ್ತು ಅಮೂರ್ತತೆಯ ಅನೇಕ ಸಾಧ್ಯತೆಗಳನ್ನು ಈ ಪ್ರದರ್ಶನದಲ್ಲಿ ಕಾಣಬಹುದಾಗಿದೆ. ಸ್ಥಳಾವಕಾಶಗಳನ್ನು ಹೇಗೆಲ್ಲಾ ಬಳಸಿಕೊಳ್ಳಲು ಸಾಧ್ಯ ಎನ್ನುವುದಕ್ಕೂ ಈ ಪ್ರದರ್ಶನ ನಿದರ್ಶನವಾಗಬಲ್ಲದು. Place and perception are crucial in art because they form the foundation of artistic experience, influencing how an artwork is created and how a viewer interprets it. Place refers to the context, environment, or specific location of the artwork, while perception is the viewer’s subjective interpretation, shaped by personal experiences and sensory input. ಈ ನಿಟ್ಟಿನಲ್ಲಿ TRAVELING PLANTS ಕಲಾಪ್ರದರ್ಶನ ಆವರಿಸಿಕೊಳ್ಳುವಂತೆ ಮಾಡಬಲ್ಲವು. ಲಭ್ಯವಿರುವ ಅವಕಾಶಗಳಲ್ಲಿ ಕಲಾಕೃತಿಗಳನ್ನು ಪ್ರದರ್ಶಿಸುವ ಸ್ಥಳ ಮತ್ತು ಗ್ರಹಿಕೆಗಳು ಇಂತಹ ಪ್ರದರ್ಶನಗಳಲ್ಲಿ ಬಹುಮುಖ್ಯ ಪಾತ್ರವಹಿಸುತ್ತವೆ. ಕಲಾಕೃತಿಯನ್ನು ಹೇಗೆ, ಎಲ್ಲಿ ಪ್ರತಿಷ್ಟಾಪಿಸಲಾಗುತ್ತದೆ ಮತ್ತು ವೀಕ್ಷಕ ಹೇಗೆ ನೋಡಬಲ್ಲ ಎನ್ನುವುದನ್ನು ಗಮನದಲ್ಲಿ ಇರಿಸಿಕೊಳ್ಳಬೇಕಾಗುತ್ತದೆ. ಈ ಪ್ರಯತ್ನ ಇಲ್ಲಿ ಪ್ರಾಮಾಣಿಕವಾಗಿ ಆಗಿದೆ. ವೀಕ್ಷಕನಿಗೂ ಇಲ್ಲೊಂದು ಪಾಠ ಅಥವಾ ಸವಾಲು ಇರಲಿದೆ. ಕಲಾಕೃತಿಯನ್ನು ವಿಭಿನ್ನ ಸ್ಥಳಾವಕಾಶದಲ್ಲಿ ನೋಡುವ ಅನುಭವ ಒಂದಾದರೆ, ಹೇಗೆಲ್ಲಾ ನೋಡಲು ಸಾಧ್ಯವೆನ್ನುವುದೂ ಅರಿವಿಗೆ ಬರಲಿದೆ.

ಈ ಕಲಾಪ್ರದರ್ಶನದ ಇನ್ನೊಂದು ವಿಶೇಷತೆ ಏನೆಂದರೆ, ಪ್ರದರ್ಶನವನ್ನು ಅನೇಕ ವಿಚಾರಗಳಿಂದ ಸಂಧಿಸುವ ಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು. ಫ್ರೆಂಡ್ಸ್, ಇಂದು ಕಲಾಪ್ರದರ್ಶನ ಸಂಪನ್ನಗೊಳ್ಳಲಿದೆ. ಸಮಯಾವಕಾಶವಿದ್ದರೆ ಹೋಗಿ ಬನ್ನಿ.

 

 

 

 

 


Share This

Leave a Reply

Your email address will not be published. Required fields are marked *