Woodcut ಮುದ್ರಣಗಳಲ್ಲಿ ಸುತ್ತಲಿನ ಜಗತ್ತು!

Share This

•1ಶಾಂತಿರೋಡ್ ಗ್ಯಾಲರಿಯಲ್ಲಿ ಕಲಾವಿದ ಅನಿಲ್ ಕುಮಾರ್ ಗೋವಿಂದಪ್ಪ ಅವರ ಕಲಾಪ್ರದರ್ಶನ
ಮರದಚ್ಚು ಮುದ್ರಣ (woodcut) ಶತ ಶತಮಾನಗಳ ಇತಿಹಾಸವಿರುವ ಕಲಾಪ್ರಕಾರ ಅನ್ನೋದು ತಮಗೆಲ್ಲರಿಗೂ ಗೊತ್ತಿರುವ ವಿಚಾರ. 13ನೇ ಶತಮಾನದಲ್ಲೇ ಚೀನಾದಲ್ಲಿ ಬಟ್ಟೆಗಳ ಮೇಲೆ ಮರದಚ್ಚಿನ ಬ್ಲಾಕ್ ಬಳಸಿ ಮುದ್ರಣ ಮಾಡಿರುವ ದಾಖಲೆಗಳು ಲಭ್ಯವಾಗಿವೆ. ಭಾರತದಲ್ಲಿಯೂ ಹೆಚ್ಚೂಕಡಿಮೆ ಅದೇ ಕಾಲಘಟ್ಟದಲ್ಲಿ ಬಳಕೆಯಾಗಿದೆ. ವಿಶೇಷವಾಗಿ ಹಚ್ಚೆಗಳನ್ನು ಹಾಕಲಾಗುತ್ತಿದ್ದ ಬ್ಲಾಕ್‌ಗಳ ಇತಿಹಾಸ ಕೆದಕಿದರೆ ಸಾಕಷ್ಟು ಮಾಹಿತಿಗಳು ಸಿಗಲಿದೆ. ಯುರೋಪಿನಲ್ಲಿ 1400ರ ಸಂದರ್ಭದಲ್ಲಿಯೇ ಮರದಚ್ಚಿನ ಮುದ್ರಣ ಆಗಿರುವ ಇತಿಹಾಸವಿದೆ.
ಅಂದಹಾಗೆ, ಆಯಾ ಕಾಲಘಟ್ಟದಲ್ಲಿ ಒಂದಿಷ್ಟು ಬದಲಾವಣೆಗಳು ಆದ ಪರಿಣಾಮ ಬಳಿಕ ಕಾಗದಗಳ ಮೇಲೆ ಮುದ್ರಿಸುವ ಪರಿಪಾಠ ಬಂತು. ಈಗ ಮರದಚ್ಚು ಮುದ್ರಣ ಎನ್ನುವುದು ವಿಭಿನ್ನ ಆಯಾಮಗಳನ್ನು ಪಡೆದುಕೊಂಡಿವೆ. ಪ್ರಮುಖ ಕಲಾಪ್ರಕಾರಗಳಲ್ಲಿ ಒಂದೆನಿಸಿಕೊಂಡಿದೆ. ಹಾಗೇ ಅನೇಕ ಏಳು-ಬೀಳುಗಳನ್ನು ಕಂಡಿರುವ ಕಲಾಪ್ರಕಾರವೂ ಹೌದು. ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿಯೂ ವುಡ್ ಕಟ್ ಸಾಕಷ್ಟು ಪ್ರಚಾರ ಪಡೆದುಕೊಂಡಿದೆ. ಅನೇಕ ಯುವ ಕಲಾವಿದರು ಮರದಚ್ಚಿನ ಮುದ್ರಣದತ್ತ ಮುಖ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯೇ ಆಗಿದೆ.
ಬೆಂಗಳೂರಿನ 1ಶಾಂತಿರೋಡ್ ಗ್ಯಾಲರಿಯಲ್ಲಿ ಕಲಾವಿದ ಅನಿಲ್ ಕುಮಾರ್ ಗೋವಿಂದಪ್ಪ ಅವರ ‘INWARD OUTBOUND’ ಶೀರ್ಷಿಕೆಯ ಮರದಚ್ಚು ಮುದ್ರಣದ ಕಲಾಪ್ರದರ್ಶನ ನಡೆಯುತ್ತಿದ್ದು, ಆಗಸ್ಟ್ 3, ಭಾನುವಾರ ಸಂಪನ್ನಗೊಳ್ಳಲಿದೆ. ಅನಿಲ್ ಅವರು ಬಹಳ ಸೊಗಸಾದ ಕಲಾಕೃತಿಗಳನ್ನು ಪ್ರದರ್ಶಿಸಿದ್ದಾರೆ. ಬಹಳ ಅಪರೂಪದ ವರ್ಣ ಸಂಯೋಜನೆಯನ್ನು ಇವರ ಕಲಾಕೃತಿಗಳಲ್ಲಿ ಕಾಣಬಹುದಾಗಿದೆ.
ಸ್ನೇಹಿತರೆ, ಒಂದೊಳ್ಳೆಯ ಕಲಾಪ್ರದರ್ಶನ‌. ಬಿಡುವು ಮಾಡಿಕೊಂಡು ಹೋಗಿಬನ್ನಿ. ಪ್ರದರ್ಶನ ಕುರಿತಾದ ಬರಹವನ್ನು ವಿಕ್ರಮ ವಾರಪತ್ರಿಕೆಯ ಮುಂದಿನ ಸಂಚಿಕೆಯಲ್ಲಿ ನಿರೀಕ್ಷಿಸಬಹುದು.

Share This

Leave a Reply

Your email address will not be published. Required fields are marked *