• ಸಾಧನ ಸಂಗಮ ನೃತ್ಯ ಕೇಂದ್ರದ ವಿದ್ಯಾರ್ಥಿನಿ
ಬೆಂಗಳೂರಿನ ಸಾಧನ ಸಂಗಮ ನೃತ್ಯ ಕೇಂದ್ರದ ವಿದ್ಯಾರ್ಥಿನಿ ಕುಮಾರಿ ಧೃತಿ ಪಿ. ಶೆಟ್ಟಿ ಅವರ ಭರತನಾಟ್ಯ ರಂಗಪ್ರವೇಶ ಸೆಪ್ಟೆಂಬರ್ 8, 2024 ಭಾನುವಾರ ಬೆಳಗ್ಗೆ 10.30ಕ್ಕೆ ಬಸವೇಶ್ವರ ನಗರದ ಕೆಇಎ ಪ್ರಭಾತ್ ರಂಗಮಂದಿರದಲ್ಲಿ ನಡೆಯಲಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ.ಅಹಲ್ಯಾ ಶರ್ಮ ಮತ್ತು ಹಿರಿಯ ನೃತ್ಯ ಗುರು ಶ್ರೀಮತಿ ಶೀಲಾ ಚಂದ್ರಶೇಖರ್ ಅವರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ, ನೃತ್ಯ ಗುರು ಜ್ಯೋತಿ ಪಟ್ಟಾಭಿರಾಮ್ ಮತ್ತು ಗುರು ಡಾ. ಸಾಧನಶ್ರೀ ಪಿ. ಅವರ ಮಾರ್ಗದರ್ಶನದಲ್ಲಿ ಧೃತಿ ರಂಗಪ್ರವೇಶಕ್ಕೆ ಸಜ್ಜಾಗಿದ್ದಾರೆ.
ಗಾಯನದಲ್ಲಿ ವಿದ್ವಾನ್ ಬಾಲಸುಬ್ರಹ್ಮಣ್ಯ ಶರ್ಮ, ನಟುವಾಂಗದಲ್ಲಿ ಡಾ.ಸಾಧನಶ್ರೀ, ಮೃದಂಗದಲ್ಲಿ ವಿದ್ವಾನ್ ಜಿ. ಗುರುಮೂರ್ತಿ, ಕೊಳಲು ವಾದನದಲ್ಲಿ ವಿದ್ವಾನ್ ಜಯರಾಂ ಕಿಕ್ಕೇರಿ, ವೀಣಾ ವಾದನದಲ್ಲಿ ವಿದ್ವಾನ್ ಗೋಪಾಲ್ ವಿ. ಮತ್ತು ಖಂಜೀರಾ, ರಿದಂ ಪ್ಯಾಡ್ ವಾದನದಲ್ಲಿ ವಿದ್ವಾನ್ ಡಿ.ವಿ.ಪ್ರಸನ್ನ ಕುಮಾರ್ ಅವರು ಪಾಲ್ಗೊಳ್ಳಲಿದ್ದಾರೆ.
| ಧೃತಿ ಶೆಟ್ಟಿ ಸಂಕ್ಷಿಪ್ತ ಪರಿಚಯ |
ಶ್ರೀಮತಿ ಶೈಲಜಾ ಎಸ್.ಡಿ. ಮತ್ತು ಪ್ರಶಾಂತ್ ಟಿ. ದಂಪತಿಯ ಪುತ್ರಿ ಧೃತಿ ಪಿ.ಶೆಟ್ಟಿ ಅವರು ಮೌಂಟ್ ಕಾರ್ಮೆಲ್ ಕಾಲೇಜಿನ ಬ್ಯಾಚ್ಯುಲರ್ ಆಫ್ ಕಾಮರ್ಸ್ ದ್ವಿತೀಯ ವರ್ಷದ ವಿದ್ಯಾರ್ಥಿನಿ. 10ನೇ ತರಗತಿಯನ್ನು ಶ್ರೀವಾಣಿ ಶಿಕ್ಷಣ ಕೇಂದ್ರದಲ್ಲಿ 94% ಅಂಕ ಪಡೆದು ಉತ್ತೀರ್ಣರಾಗಿ, ಬಳಿಕ ಪಿಯು ದ್ವಿತೀಯ ವರ್ಷದಲ್ಲಿ 93% ಅಂಕ ಪಡೆದು ಉತ್ತೀರ್ಣರಾಗಿದ್ದಾರೆ.
ಗಂಧರ್ವ ಐದು ಹಂತಗಳ ಪರೀಕ್ಷೆ, ಜ್ಯೂನಿಯರ್ ಮತ್ತು ಸೀನಿಯರ್ ನೃತ್ಯ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಉತ್ತೀರ್ಣರಾಗಿದ್ದಾರೆ. ನೃತ್ಯ ನಿಪುಣ ನೃತ್ಯ ತಂಡದ ಭಾಗವಾಗಿ ಅನೇಕ ನೃತ್ಯೋತ್ಸವಗಳಲ್ಲಿ ಪ್ರದರ್ಶನ ನೀಡಿರುತ್ತಾರೆ. ಅಲ್ಲದೆ, ಎನ್‌ಸಿಸಿಯ ಎಲ್ಲಾ ಸರ್ಟಿಫಿಕೆಟ್ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದಾರೆ.