• ನೋಡಿ ಬನ್ನಿ ಹೊಸಬಗೆಯ ಪುಸ್ತಕ ಪ್ರದರ್ಶನ
‘LINES OF CONFLICTS’ ಶೀರ್ಷಿಕೆಯಡಿ ಕಲಾವಿದರು ಸೃಷ್ಟಿಸಿದ ವಿಭಿನ್ನ ಪುಸ್ತಕಗಳ ಹೆಸರಿನ ಕಲಾಕೃತಿಗಳು ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ ಗ್ಯಾಲರಿಯಲ್ಲಿ ಪ್ರದರ್ಶಿಸಲ್ಪಟ್ಟಿವೆ. Artist’s Book’s ಪ್ರಕಾರದ ಕಲಾಭಿವ್ಯಕ್ತಿ ಇದಾಗಿದ್ದು, ದೃಶ್ಯ ಮತ್ತು ಓದು ಎರಡೂ ಮಹತ್ವಪಡೆದುಕೊಳ್ಳುವ ಕಲಾಕೃತಿಗಳಾಗಿ ಗೋಚರಿಸುತ್ತವೆ.
ವಿಶೇಷ ಆಹ್ವಾನಿತರಾಗಿ ಕರ್ನಾಟಕದ ಹಿರಿಯ ಕಲಾವಿದರಾದ ರವಿಕುಮಾರ್ ಕಾಶಿ ಅವರು ಸೇರಿದಂತೆ ಬೇರೆ ಬೇರೆ ರಾಜ್ಯಗಳ ಕಲಾವಿದರ ಕಲಾಕೃತಿಗಳು ಪ್ರದರ್ಶಿಸಲ್ಪಟ್ಟಿವೆ. ತೆರೆದ ಮತ್ತು ತೆರೆದುಕೊಳ್ಳಬಯಸದ ಕಲಾಕೃತಿಗಳು ನೋಡುಗರನ್ನು ತುಸು ಚಿಂತನೆಗೆ ಎಳೆದು ತಂದು ನಿಲ್ಲಿಸುತ್ತವೆ. ಭಾವನೆಗಳ ಅದುಮಿಟ್ಟು ಅಕ್ಷರಗಳ ರೂಪಕೊಟ್ಟು ಚೌಕಟ್ಟಿನಾಚೆ ತರುವ ಪ್ರಯತ್ನಗಳು ಅಮೂರ್ತವಾಗಿಯೇ ಉಳಿಯುವ ಸಾಧ್ಯತೆ ಕಾಣಿಸಿತು. ವಿಭಿನ್ನ ನೆಲೆಯಲ್ಲಿ ಕಣ್ಣರಳಿಸುವ ತಂತ್ರವೇ? ಎಂದನಿಸುವ ಒಂದೊಳ್ಳೆಯ ಕಲಾಪ್ರದರ್ಶನ. 19 ಕಲಾವಿದರ ಕಲಾಕೃತಿಗಳು ಪ್ರದರ್ಶನದಲ್ಲಿವೆ.
ಸ್ನೇಹಿತರೆ, ಈ ಕಲಾಪ್ರದರ್ಶನ ಜುಲೈ 27, ಭಾನುವಾರ ಸಂಪನ್ನಗೊಳ್ಳಲಿದೆ. ಬಿಡುವು ಮಾಡಿಕೊಂಡು ಹೋಗಿಬನ್ನಿ.
(ಈ ಕಲಾಪ್ರದರ್ಶನ ಕುರಿತ ಭಿನ್ನ ಬರಹ ‘ವಿಕ್ರಮ’ ವಾರಪತ್ರಿಕೆಯ ಮುಂದಿನ ಸಂಚಿಕೆಯಲ್ಲಿ ಇರಲಿದೆ. ನಿರೀಕ್ಷಿಸಿ…)
