ಸಮಕಾಲೀನ ಪ್ರಭಾವದ ಲಿಪಿಚಿತ್ರ ಅಭಿವ್ಯಕ್ತಿ!

Share This

• ಲಿಪಿ ಭಾವ ದುಡಿಸಿಕೊಂಡ ನಿಖಿಲ್ ಅಪಾಲೆ

ಬೆಂಗಳೂರು ಅಂತಾರಾಷ್ಟ್ರೀಯ ಕೇಂದ್ರ (Bengaluru International Center)ದ ಕಲಾಗ್ಯಾಲರಿಯಲ್ಲಿ ಆರ್ಟಿಸೆರಾ ( ARTISERA ) ಆಯೋಜಿಸಿದ ನಿಖಿಲ್ ಅಪಾಲೆ ( Nikheel Aphale ) ಅವರ ” ನಿರಾಕಾರ ಆಕಾರ ” ಸಮಕಾಲೀನ ಕ್ಯಾಲಿಗ್ರಫಿ ಪ್ರದರ್ಶನ ಅನನ್ಯ. ಪ್ರಯೋಗಶೀಲ, ಕ್ರಿಯಾಶೀಲ ಪ್ರತಿಬಿಂಬ!
ದೇವನಾಗರಿ ಲಿಪಿಯ ನವ್ಯೋತ್ತರ ಸಂದರ್ಭದ ಅಥವಾ ಸಮಕಾಲೀನ ಸಂದರ್ಭದ ಬದಲಾದ ರೂಪ ಪ್ರಸ್ತುತಿಯ ನಿರ್ವಹಣೆ ವಿಭಿನ್ನವೆನಿಸಿತು. ಯಾವುದೇ ಲಿಪಿ ನೋಡುಗನ ದೃಷ್ಟಿಯಲ್ಲಿ ಚಿತ್ರವಾಗಿ ಗ್ರಹಿಸಲು ಸಾಧ್ಯವಿದ್ದುದರಿಂದ ಅದನ್ನು ಕಲಾಕೃತಿಯಾಗಿಯೇ ಗ್ರಹಿಸಲು ಸಾಧ್ಯವಿದೆ. ಈ ಸಾಧ್ಯತೆಯನ್ನು ನಿಖಿಲ್ ಅವರು ಬಹಳ ಸೊಗಸಾಗಿ ಬಳಸಿಕೊಂಡಿದ್ದಾರೆ. ಕಪ್ಪು ಬಿಳುಪು ಬಣ್ಣಗಳ ಪ್ರಯೋಗ ಬಹುತೇಕ ಕಲಾಕೃತಿಗಳಲ್ಲಿದೆ. ಹಿತ ಮಿತವಾದ ಬಣ್ಣಗಳ ಬಳಕೆಯೂ ಶಾಂತ ಭಾವದತ್ತ ಕರೆದೊಯ್ಯುವಂತಿದೆ. ಕೆಲವೊಂದು ಕಲಾಕೃತಿಗಳಲ್ಲಿ ಕಪ್ಪು-ಬಿಳುಪು ವರ್ಣ ಬಳಕೆ ತುಸು ಹೆಚ್ಚು.
ನಿಖಿಲ್ ಅವರ ಈ ಅಭಿವ್ಯಕ್ತಿಯನ್ನು ಲಿಪಿಯಷ್ಟೇ ಎಂದು ನೋಡಬಹುದಾದರೆ ಅದರಾಚೆಗಿನ ನೋಟಕ್ಕೆ, ಭಾವಕ್ಕೆ ನಿಲುಕದು. ಆಗ ಕಲಾಕೃತಿ ಎಂದು ಹೇಳಲಾಗದು. ಆದರೆ ಕಲಾಕೃತಿಯಾಗಿ ನೋಡುವಾಗ ಲಿಪಿ ಎನ್ನುವ ಆಕಾರಗಳ ಜೊತೆ ಕಲಾವಿದನ ಪರಿಕಲ್ಪನೆ, ಭಾವನೆಗಳಿಗೆ ಜೀವ ತುಂಬಬಹುದಾದ, ಅಭಿವ್ಯಕ್ತಿಗೊಳಿಸುವ ಪ್ರಯತ್ನ ಕಾಣಸಿಗಬೇಕು. ನಿಖಿಲ್ ಅವರು ಈ ಸೂಕ್ಷ್ಮತೆಯನ್ನು ಬಹಳ ಜಾಣತನದಿಂದ ನಿರ್ವಹಿಸಿದ್ದಾರೆ. ಕಲಾಕೃತಿಯಾಗಿಯೂ ನೋಡಲು ಅನುವು ಮಾಡಿಕೊಟ್ಟಿದ್ದಾರೆ. ಸ್ವಾಗತಾರ್ಹ ಪ್ರಯತ್ನವೂ ಹೌದು.
Congratulations and Wish you all the best 💐

 

 

 

 

 


Share This

Leave a Reply

Your email address will not be published. Required fields are marked *