• ‘Polyphony’ ಪ್ರದರ್ಶನದಲ್ಲಿ ಸ್ತ್ರೀ ಸಂವೇದನೆ
• ಸಾಗರಿಕಾ ತೆರೆದಿಟ್ಟ ದೃಶ್ಯ ಕ್ಷೇತ್ರದ ಮಾಯಾಲೋಕ
ಭಾರತೀಯ ಮೂಲದ ನ್ಯೂಯಾರ್ಕ್ ಕಲಾವಿದೆ ಸಾಗರಿಕಾ ಸುಂದರಂ (Sagarika Sundaram) ಅವರ ಕಲಾಕೃತಿಗಳು ಇವು. ನವದೆಹಲಿಯ ನೇಚರ್ ಮೊರ್ಟೆ ಗ್ಯಾಲರಿಯಲ್ಲಿ ಪ್ರದರ್ಶನ ನಡೆಯುತ್ತಿದ್ದು, ಫೆ.23ರಂದು ಸಂಪನ್ನಗೊಳ್ಳಲಿದೆ.
‘Polyphony’ ಏಕವ್ಯಕ್ತಿ ಕಲಾಪ್ರದರ್ಶನದಲ್ಲಿ ಎರಡು ವಿಭಿನ್ನ ಸರಣಿಯ ಕಲಾಕೃತಿಗಳು ಪ್ರದರ್ಶಿಸಲ್ಪಟ್ಟಿವೆ. ಶೀರ್ಷಿಕೆ ಹೇಳುವಂತೆ ಕಲಾಕೃತಿಗಳು ಬಹುಮುಖ ಧ್ವನಿಯಾಗಿ ತೆರೆದುಕೊಳ್ಳುತ್ತವೆ. ನೇಯ್ಗೆಯಲ್ಲಿ ಬಳಸಲಾಗುವ ತರಹೇವಾರಿ ವಿಧದ ಪರಿಕರಗಳನ್ನು ಬಳಸಿ ರಚಿಸಲಾದ ಕಲಾಕೃತಿಗಳು ಇವು. ಇಂತಹ ಪ್ರಯತ್ನಗಳು ಹೊಸದಲ್ಲದಿದ್ದರೂ ಸಾಗರಿಕಾ ಅವರು ದುಡಿಸಿಕೊಂಡಿರುವ ಪರಿ ಹುಬ್ಬೇರಿಸುವಂತಿವೆ. ಬೇರೆ ಬೇರೆ ಪದರಗಳ ರಚನೆ ಮತ್ತು ಪಕ್ಷಿಯ ರೆಕ್ಕೆ(wings)ಗಳ ಮಾದರಿಯಲ್ಲಿ ಕಣ್ಣಿಗೆ ರಾಚುವ ಅಥವಾ ಗೋಚರಿಸುವ ರೂಪಕಗಳಾಗಿವೆ (metaphor). ಸೂಕ್ಷ್ಮ ಸಂವೇದನೆಯ ಅಭಿವ್ಯಕ್ತಿಗೆ ಪ್ರತಿಯೊಂದು ಕಲಾಕೃತಿಯೂ ಸಾಕ್ಷಿಯಾಗಿ ನಿಲ್ಲುತ್ತವೆ.
ಬಾಟಿಕ್ ಕಲಾತ್ಮಕ ತಂತ್ರಗಾರಿಕೆಯ ಹೊಳಹು ಒಟ್ಟಾರೆ ಕಲಾಕೃತಿಗಳಲ್ಲಿ ನೋಡಲು ಸಾಧ್ಯವಿದೆ. ಜೊತೆಗೆ ಕರಕುಶಲ ಕೌಶಲ್ಯ ಇವರ ಕಲಾಕೃತಿಗಳ ಹಿಂದಿನ ಪ್ರಬಲ ಶಕ್ತಿಯಾಗಿ ಕಣಿಸುತ್ತವೆ. ಹೊಸತಲ್ಲದ ಹೊಸತು ಅನಾವರಣ ಮಾಡುವ ಪ್ರಯತ್ನದಲ್ಲಿ ಸಾಗರಿಕಾ ಅವರು ಯಶಸ್ವಿಯಾಗಿದ್ದಾರೆ ಎನ್ನಬಹುದು.
ಯುವ ಕಲಾವಿದೆ ಸಾಗರಿಕಾ ಸುಂದರಂ ಇದೇ ಮೊದಲ ಬಾರಿಗೆ ಭಾರತದಲ್ಲಿ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿದ್ದಾರೆ. ಅಷ್ಟೇ ಅಲ್ಲ, ಇದು ಇವರ ಎರಡನೇ ಏಕವ್ಯಕ್ತಿ ಪ್ರದರ್ಶನ ಎನ್ನುವುದು ಇನ್ನೊಂದು ವಿಶೇಷ. Textile ಕ್ಷೇತ್ರದಲ್ಲಿ ಶಿಕ್ಷಣ ಪಡೆದು ಪದವಿ ಸಂಪಾದಿಸಿರುವ ಕಲಾವಿದೆ ಸಾಗರಿಕಾ ಅವರು ದೃಶ್ಯಕಲೆಯತ್ತ ಹೊರಳಿಕೊಂಡಿರುವುದು ಗಮನಾರ್ಹ. ವಿಭಿನ್ನ ಮಾಧ್ಯಮ ಆಯ್ಕೆ ಮಾಡಿಕೊಳ್ಳು ಧೈರ್ಯ ತೋರಿರುವುದು ಅವರ ಬದ್ಧತೆಯನ್ನು ತೋರಿಸುತ್ತದೆ.
Congratulations
and Best wishes Sagarika Sundaram jii 

