ಭಾವನೆಗಳ ಹಂದರವಾದ “DISSONANCE” ಪ್ರದರ್ಶನ

Share This

• ಹಿರಿಯ ಕಲಾವಿದರ ಜೊತೆ ಮಾತುಕತೆ  • ಅಕಾಡೆಮಿ ಅಧ್ಯಕ್ಷರಿಗೆ ಅಭಿನಂದನೆ
ಸರಿಸುಮಾರು ನಾಲ್ಕು ವರ್ಷಗಳೇ ಕಳೆದುಹೋಗಿತ್ತು. ಕೋವಿಡ್ ಬಳಿಕ ಭೇಟಿ ಸಾಧ್ಯವಾಗಿರಲಿಲ್ಲ. ತುಸು ಬಿಡುವು ಮಾಡಿಕೊಂಡು ಹೋಗಿಬರಬೇಕು ಎಂದುಕೊಳ್ಳುತ್ತಲೇ ಇದ್ದೆ. ಕಾಕತಾಳೀಯವೋ ಏನೊ, ಎರಡು ದಿನಗಳ ಹಿಂದೆ ವಿದ್ಯಾರ್ಥಿಗಳ ಕಲಾಪ್ರದರ್ಶಕ್ಕೆ ಬರುವಂತೆ ಆಹ್ವಾನ ಪತ್ರಿಕೆ ಬಂತು. ಒಂದೊಳ್ಳೆಯ ನೆಪ ಸಿಕ್ಕಿತು. ಹೀಗಾಗಿ ಮೈಸೂರಿನ ರವಿವರ್ಮ ಕಲಾಶಾಲೆ ಭೇಟಿಗೆ ಒಳ್ಳೆಯ ಸಂದರ್ಭ ಅನಿಸಿತು.
ನಿಜವಾಯ್ತು, ಒಂದು ಸುಂದರ ಸಂಗಮಕ್ಕೆ ಸಾಕ್ಷಿಯಾದೆ. ಈ ಶಿಕ್ಷಣ ಸಂಸ್ಥೆಯ ಪ್ರಾಚಾರ್ಯರು, ಮುನ್ನಡೆಸುತ್ತಿರುವ ಮಾಲೀಕರು, ಗುರುವರ್ಯರು ಆದ ಶಿವಕುಮಾರ್ ಕೆಸರಮಡು ಅವರೊಂದಿಗಿನ ದೀರ್ಘ ಕಾಲದ ಮಾತುಕತೆಗೆ ಅವಕಾಶವಾಯ್ತು. ವಿಶೇಷವಾಗಿ ಕಲಾವಿದ್ಯಾರ್ಥಿಗಳ ಕಲಾಕೃತಿಗಳನ್ನು ನೋಡಿ ಕಣ್ತುಂಬಿಕೊಂಡೆ.
ಒಂದೊಮ್ಮೆ ಹೋಗುವ ಮನಸ್ಸು ಮಾಡದೇ ಇದ್ದಿದ್ದರೆ ಕೆಲ ಸುಂದರ ಕಲಾಕೃತಿಗಳನ್ನು, ವಿದ್ಯಾರ್ಥಿ ಮನಸ್ಸಿನ ಭಾವಗಳನ್ನು ಅರಿಯುವ ಅವಕಾಶ ಕಳೆದುಕೊಳ್ಳುತ್ತಿದ್ದೆ. ಹಾಗಾಗಲಿಲ್ಲ, ಒಂದೊಳ್ಳೆಯ ಭೇಟಿ ಇದಾಗಿತ್ತು. ಜೊತೆಗೆ ನಾಡಿನ ಹಿರಿಯ ಕಲಾವಿದರಾದ, ಕರ್ನಾಟಕ ಲಲಿತಕಲಾ ಅಕಾಡೆಮಿ ನೂತನ ಅಧ್ಯಕ್ಷರಾದ ಪಿ. ಸಂಪತ್ ಕುಮಾರ್ (P Sampath Kumar), ಇನ್ನೊಬ್ಬರು ಹಿರಿಯ ಕಲಾವಿದರಾದ, ಗುರುಗಳು ಆದ ಪ್ರಭು ಹರಸೂರ್ (Prabhu Harsoor) ಅವರನ್ನು ಅಭಿನಂದಿಸುವ ಮತ್ತು ಅವರ ಜೊತೆ ಚರ್ಚಿಸುವ ಅವಕಾಶವೂ ಸಿಕ್ಕಿತು. ಮರೆಯಲಾಗದ ಕ್ಷಣ ಇದಾಗಿತ್ತು.
ರವಿವರ್ಮ ಕಲಾಶಾಲೆ ವಿಧ್ಯಾರ್ಥಿಗಳ ಕಲಾಕೃತಿಗಳು ಗಮನ ಸೆಳೆಯಿತು. ವಿಭಿನ್ನ ಚಿಂತನೆಯ ಮತ್ತು ವಿಭಿನ್ನ ಸಂಯೋಜನೆಯ ಪ್ರಯತ್ನಗಳು ಪ್ರದರ್ಶಿತ ಕಲಾಕೃತಿಗಳಲ್ಲಿ ಕಂಡುಬಂತು. ಕಲಾಶಿಕ್ಷಣದ ಆರಂಭಿಕ ದಿನಗಳಲ್ಲಿ ಸಿಗುವ ಇಂತಹ ಅವಕಾಶಗಳು ಒಬ್ಬ ಒಳ್ಳೆಯ ಕಲಾವಿದರಾಗಿ ಬೆಳೆಯಲು ಸಹಕಾರಿ. ಈ ನಿಟ್ಟಿನಲ್ಲಿ ಪ್ರದರ್ಶನದ ಅವಕಾಶ ಪಡೆದುಕೊಂಡಿರುವ ಭವಿಷ್ಯದ ಕಲಾವಿದರಿಗೆ ಅಭಿನಂದನೆಗಳು. Ravi Varma Art Institute ಜೊತೆ ಕೈ ಜೊಡಿಸಿದ “A Rich Foundation” ಮುಂದಾಳು, ಸ್ನೇಹಿತರಾದ ಶ್ರೀನಿವಾಸ್ ಅವರಿಗೂ ಅಭಿನಂದನೆಗಳು.

 

 

 


Share This

Leave a Reply

Your email address will not be published. Required fields are marked *