ಅಕ್ಟೋಬರ್ 27, ಭಾನುವಾರ ಬೆಳಗ್ಗೆ 10.30ಕ್ಕೆ ನೃತ್ಯ ಕಾರ್ಯಕ್ರಮ
ಬೆಂಗಳೂರು: ನಗರದ ಪ್ರತಿಷ್ಠಿತ ನೃತ್ಯ ಸಂಸ್ಥೆಗಳಲ್ಲಿ ಒಂದಾಗಿರುವ ಸಾಧನ ಸಂಗಮ ನೃತ್ಯ ಕೇಂದ್ರದ ವಿದ್ಯಾರ್ಥಿನಿಯರಾದ ಕುಮಾರಿ ಶುಭಾಂಗಿಣಿ ದೇವದಾಸ್ ಮತ್ತು ಕುಮಾರಿ ಮೇಘನಾ ಗಂಗಸ್ವಾಮಿ ಅವರ ಗೆಜ್ಜೆ ಪೂಜೆ ನೃತ್ಯ ಕಾರ್ಯಕ್ರಮ ಅಕ್ಟೋಬರ್ 27, ಭಾನುವಾರ ಬೆಳಗ್ಗೆ 10.30ಕ್ಕೆ ಬಸವೇಶ್ವರ ನಗರದ ರಂಗೋಪನಿಷತ್ ರಂಗಮಂದಿರಲ್ಲಿ ನಡೆಯಲಿದೆ. ಕರ್ನಾಟಕ ಕಲಾಶ್ರೀ, ನೃತ್ಯಗುರು ಜ್ಯೋತಿ ಪಟ್ಟಾಭಿರಾಮ್ ಮತ್ತು ಗುರು ಡಾ. ಸಾಧನಶ್ರೀ ಪಿ. ಅವರ ಮಾರ್ಗದರ್ಶನದಲ್ಲಿ ಇಬ್ಬರು ವಿದ್ಯಾರ್ಥಿನಿಯರು ಅಧಿಕೃತವಾಗಿ ಗೆಜ್ಜೆಪೂಜೆ ನೆರವೇರಿಸಿ, ನೃತ್ಯ ಪ್ರದರ್ಶನ ನೀಡಲಿದ್ದಾರೆ.
13 ವರ್ಷದ ಶುಭಾಂಗಿಣಿ ಅವರು ಕ್ಲುನಿ ಕಾನ್ವೆಂಟ್ ಹೈಸ್ಕೂಲಿನ 8ನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ಕಳೆದ 9 ವರ್ಷಗಳಿಂದ ನೃತ್ಯಾಭ್ಯಾಸದಲ್ಲಿ ತೊಡಗಿಕೊಂಡಿದ್ದಾರೆ. 14 ವರ್ಷದ ಮೇಘನಾ ಅವರು ವಿದ್ಯಾ ವಾಹಿನಿ ಸ್ಕೂಲ್ ವಿದ್ಯಾರ್ಥಿನಿಯಾಗಿದ್ದು, ಕಳೆದ 9 ವರ್ಷಗಳಿಂದ ನೃತ್ಯಾಭ್ಯಾಸದಲ್ಲಿ ತೊಡಗಿಕೊಂಡಿದ್ದಾರೆ. ಭಾನುವಾರ ನಡೆಯಲಿರುವ ಕಾರ್ಯಕ್ರಮದಲ್ಲಿ ನೃತ್ಯ ನಿನಾದ ಸಂಸ್ಥೆಯ ನಿದೇರ್ಶಕರಾದ ಚೇತನ್ ಗಂಗತ್ಕರ್ ಮತ್ತು ಶ್ರೀಮತಿ ಚಂದ್ರಪಭಾ ಅವರು ಹಾಗೂ ಕ್ಲುನಿ ಕಾನ್ವೆಂಟ್ ಹೈಸ್ಕೂಲಿನ ಪ್ರಾಂಶುಪಾಲೆ ಸಿಸ್ಟರ್ ಮಂಜುಳಾ ಪಿ. ಅಂಥೋನಿ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದ ಸಂಗೀತದ ಭಾಗವಾಗಿ ನಟ್ಟುವಾಂಗದಲ್ಲಿ ಡಾ.ಸಾಧನಶ್ರೀ, ಗಾಯನದಲ್ಲಿ ವಿದುಷಿ ಹರ್ಷಿತಾ ವೈದ್ಯ, ಮೃದಂಗದಲ್ಲಿ ವಿದ್ವಾನ್ ಪವನ್ ಮಾಧವ್ ಮಾಸುರ್, ಕೊಳಲು ವಾದನದಲ್ಲಿ ವಿದ್ವಾನ್ ಶಶಾಂಕ್ ಜೋಡಿದಾರ್, ಪಿಟೀಲು ವಾದನದಲ್ಲಿ ವಿದ್ವಾನ್ ಕೃಷ್ಣ ಕಶ್ಯಪ್ ರಸಿಕರನ್ನು ರಂಜಿಸಲಿದ್ದಾರೆ.