IRAAC 2024ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರದಾನ

Share This

ಕಲಬುರಗಿಯ ಇಂಡಿಯನ್ ರಾಯಲ್ ಅಕಾಡೆಮಿ ಆಫ್ ಆರ್ಟ್ & ಕಲ್ಚರ್ (IRAAC) ಅವರ 2024ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರದಾನ ಡಿಸೆಂಬರ್ ೨೪ರಂದು ನಡೆಯಿತು. ಕಲಬುರಗಿಯ ಕನ್ನಡ ಭವನದ ಕಲಾಸೌಧ ಗ್ಯಾಲರಿಯಲ್ಲಿ ಕರ್ನಾಟಕ ಲಲಿತಕಲಾ ಮಹಾವಿದ್ಯಾಲಯದ ಮಾಜಿ ವಿಶೇಷ ಅಧಿಕಾರಿ, ದೃಶ್ಯಕಲಾ ಲೇಖಕರಾದ ಡಾ. ಎಸ್. ಸಿ. ಪಾಟೀಲ್ ಅವರು ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಕೇಂದ್ರ ಮಹಾವಿದ್ಯಾಲಯದ ಸಹಾಯಕ ರಜಿಸ್ಟ್ರಾರ್ ಪ್ರೊ. ಅಜಿಮ್ ಪಾಷಾ ಬಡಿಗೇರ್, ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ವಿಜಯಕುಮಾರ್ ಪಾಟೀಲ್ ತೆಗಲತಿಪ್ಪಿ, ಇಂಡಿಯನ್ ರಾಯಲ್ ಅಕಾಡೆಮಿ ಆಫ್ ಆರ್ಟ್ & ಕಲ್ಚರ್ ಅಧ್ಯಕ್ಷ, ಕಲಾವಿದ ರೆಹಮಾನ್ ಪಟೇಲ್, ಶಿವರಾಜ್ ಅಂಡಗಿ, ಅಯಾಜುದ್ದೀನ್ ಪಟೇಲ್ ಸೇರಿದಂತೆ ಅನೇಕ ಹಿರಿಯ ಕಲಾವಿದರು ಉಪಸ್ಥಿತರಿದ್ದರು.
ಹಿರಿಯ ಕಲಾವಿದರಾದ ಫ್ರಾನ್ಸಿಸ್ ನ್ಯೂಟನ್ ಸೋಜಾ (F.N. Souza) ಹೆಸರಲ್ಲಿ ಕೊಡುವ ರಾಷ್ಟ್ರೀಯ ಪ್ರಶಸ್ತಿಗೆ ನಾನು ರಚಿಸಿರುವ ‘ No one is Afraid ‘ ಶೀರ್ಷಿಕೆಯ ಕಲಾಕೃತಿಯನ್ನು ಆಯ್ಕೆಮಾಡಲಾಗಿತ್ತು. ಇದೆ ಸಂದರ್ಭದಲ್ಲಿ ಎಸ್ . ಎಚ್. ರಜಾ ಹೆಸರಲ್ಲಿ ನೀಡಲಾಗುವ ಪ್ರಶಸ್ತಿಯನ್ನು ಮೈಸೂರಿನ ಆನಂದ ಬಾಬು ಅವರಿಗೆ, ಎ.ಎ. ಅಲಮೇಲ್ಕರ್ ಹೆಸರಲ್ಲಿ ನೀಡಲಾಗುವ ಪ್ರಶಸ್ತಿಯನ್ನು ಮಾನ್ವಿಯ ವಾಜಿದ್ ಸಾಜಿದ್ ಅವರಿಗೆ, ಅಮೃತಾ ಶೇರ್ಗಿಲ್ ಹೆಸರಲ್ಲಿ ನೀಡಲಾಗುವ ಪ್ರಶಸ್ತಿಯನ್ನು ಮಹಾರಾಷ್ಟ್ರದ ಸುಹಾನಿ ಜೈನ್ ಅವರಿಗೆ ಪ್ರದಾನ ಮಾಡಲಾಯಿತು. ಅಲ್ಲದೆ ಗೋಲ್ಡ್ ಮೆಡಲ್ ಪಡೆದ ಕಲಾವಿದರಿಗೂ ಪದಕ ಪ್ರದಾನ ಮಾಡಲಾಯಿತು.
F.N. Souza ಪ್ರಶಸ್ತಿಗೆ ನನ್ನ ಕಲಾಕೃತಿ ಪರಿಗಣಿಸಿ ಆಯ್ಕೆ ಮಾಡಿದ ಎಲ್ಲರಿಗೂ ಆಯ್ಕೆ ಸಮಿತಿಗೂ, ಆಡಳಿತ ಮಂಡಳಿಗೂ ಅನಂತಾನಂತ ಧನ್ಯವಾದಗಳು. ನಾನು ಇಷ್ಟಪಡುವ ಕಲಾಶಿಕ್ಷಕ, ಕಲಾವಿದ ಮಿತ್ರರಾದ Chandrahas Yj ಅವರ ಭೇಟಿ ಬಹಳ ಖುಷಿಕೊಟ್ಟಿತು.

Share This

Leave a Reply

Your email address will not be published. Required fields are marked *