ವಿಭಿನ್ನ ಮೈವಳಿಕೆ(texture) ಇರಬೇಕೆನ್ನುವ ಪ್ರಕ್ರಿಯೆ!

Share This

“Abstract Art is considered as one of the pious forms in expressing one-self without any detailed illustration of reality. It uses a perceptible language such as shapes, color, line, form and gestural marks to create a beauty which may persist with a degree of freedom from visual references in the world”
ಅಂತಃಶಕ್ತಿಯ ಆಳ ಅಳೆಯಲಾಗದು. ಆದರೆ, ಹುಡುಕಾಟದ ದಾರಿಯಲ್ಲಿ ಸಾಗುತ್ತಾ ಹೋದಂತೆ ಶಬ್ದಗಳಲ್ಲಿ ವರ್ಣಿಸಲಾಗದ ಅನುಭವಗಳನ್ನು ಸಿದ್ಧಿಸಿಕೊಳ್ಳಲು ಸಾಧ್ಯ ಎನ್ನುವುದು ಹಿರಿಯರ ಮಾತು. ಬಹುಶಃ ತಪಸ್ಸಿನ ಸಿದ್ಧಿ ಅನ್ನುವುದು ಅದೇ ಇರಬಹುದು. ಅಗೆದಷ್ಟು ಆಳಕ್ಕೆ ಇಳಿಯಲು ಸಾಧ್ಯವಿದೆ ಎನ್ನುವುದಂತೂ ಸ್ಪಷ್ಟ.


ಅನೇಕ ಸಂದರ್ಭಗಳಲ್ಲಿ ‘ಅಮೂರ್ತತೆ’ (abstraction) ಧಾರ್ಮಿಕ ಆಚರಣೆಗಳಲ್ಲಿಯೇ ಜಾಸ್ತಿ ಎಂದೆನಿಸುವುದುಂಟು. ಕಾರಣ ನಿಖರವಾಗಿ ಹೇಳಲಾಗದಿದ್ದರೂ ಅವರವರ ಭಾವಕ್ಕೆ ತಕ್ಕಂತೆ ಹೇಳಬಹುದು. ಆಚರಣೆಯ ಪ್ರಕ್ರಿಯೆಯಲ್ಲಿ ಇರುವವರು ವ್ಯಾಖ್ಯಾನಿಸಬಹುದು. ಆದರೂ ಮೂಲ ಅಮೂರ್ತ. ನಮ್ಮ ನಮ್ಮ ಕಲ್ಪನೆಗಳಿಗೆ ತಕ್ಕಂತೆ ಮೂರ್ತ ರೂಪಕ್ಕೆ ತರುವ ಪ್ರಕ್ರಿಯೆ ನಡೆಯುತ್ತಾಬಂದಿದೆ.
ಉತ್ತರಕನ್ನಡ ಮೂಲದ ಬೆಂಗಳೂರು ನಿವಾಸಿ, ಕೊಬಾಲ್ಟ್ ಸಂಸ್ಥೆಯ ಸಂಸ್ಥಾಪಕರೂ ಆದ ಕಲಾವಿದ ಗಣಪತಿ ಹೆಗಡೆ ಅವರು ಈ ನೆಲೆಯಲ್ಲಿಯೇ ನಿಲ್ಲುವ ಕಲಾಕೃತಿಗಳನ್ನು ಕರ್ನಾಟಕ ಚಿತ್ರಕಲಾ ಪರಿಷತ್ ಗ್ಯಾಲರಿ 3ರಲ್ಲಿ ಪ್ರದರ್ಶಿಸಿದ್ದಾರೆ.


‘ಅಂತಃಶಕ್ತಿಯ ಸಿದ್ಧಿ’ ‘ENTELECHY’ ಶೀರ್ಷಿಕೆಯಡಿ ಪ್ರದರ್ಶಿತ ಕಲಾಕೃತಿಗಳು ನೋಡುಗರನ್ನು ಹುಡುಕಾಟಕ್ಕೆ ಇಳಿಯುವಂತೆ ಮಾಡುತ್ತವೆ. ಬಹುತೇಕ ಕಲಾಕೃತಿಗಳಲ್ಲಿ ಕ್ಯಾನ್ವಾಸ್ ಮತ್ತು ಬಣ್ಣಗಳನ್ನು ದುಡಿಸಿಕೊಂಡಿರುವ ರೀತಿ ಗಮನಸೆಳೆಯುತ್ತವೆ. ವಿಭಿನ್ನ ಮೈವಳಿಕೆ(texture) ಇರಬೇಕೆನ್ನುವ ಪ್ರಕ್ರಿಯೆಯಲ್ಲಿ ಕಲಾವಿದನ ಅನುಭವ ಗಮನಿಸಲು ಸಾಧ್ಯವಾಗಿದೆ. ಕೆಲವೊಂದು ಕಲಾಕೃತಿಗಳಲ್ಲಿ Background Judgment ಸೆಳೆದುನಿಲ್ಲಿಸುತ್ತವೆ.
ಕೆಲವೊಂದು ಕಲಾಕೃತಿಗಳಲ್ಲಿ ಬಣ್ಣಗಳ ಸಂಯೋಜನೆ ಪ್ರಖರ ಎನಿಸುವಂತಿವೆ. ಇದಕ್ಕೆ ತದ್ವಿರುದ್ಧವೆನಿಸುವ ಬಣ್ಣಗಳನ್ನು ಇನ್ನೊಂದಿಷ್ಟು ಕಲಾಕೃತಿಗಳಲ್ಲಿ ದುಡಿಸಿಕೊಂಡಿದ್ದಾರೆ. ಕಲಾವಿದ ಗಣಪತಿ ಹೆಗಡೆ ಅವರ ಇತ್ತೀಚಿನ ಕಲಾಕೃತಿಗಳಲ್ಲಿ ಒಂದು ತರಹದ Mind and Mild Spark ಕಾಣಬಹುದು.


Share This

Leave a Reply

Your email address will not be published. Required fields are marked *