ಸತ್ಯಬ್ರತಾ ದಾಸ್ ಕಲಾಕೃತಿಗಳ ಪ್ರದರ್ಶನ

Share This

” It is good to love many things, for therein lies the true strength, and whosoever loves much performs much, and can accomplish much, and what is done in love is well done. “
   ಡಚ್ ಕಲಾವಿದ ವಿನ್ಸೆಂಟ್ ವಾನ್ ಗೋ (Vincent Van Gogh) ಅವರ ಸ್ಫೂರ್ತಿದಾಯಕ ಮಾತಿದು. ಜೀವನದ ಅನೇಕ ಏಳು ಬೀಳು ಕಂಡ ವಾನ್ ಗೋ ನಾನಾ ಕಾರಣಗಳಿಂದ ಸ್ಫೂರ್ತಿಯಾಗುತ್ತಾರೆ. ಅದರಲ್ಲೂ ವಾನ್ ಗೋ ಕಲಾಕೃತಿಗಳಿಂದ ಸ್ಫೂರ್ತಿ ಪಡೆದು ಕಲಾವಿದರಾದವರು ನೂರಾರು ಮಂದಿ. ಅನುಕರಣೆ ಮಾಡಿದವರು ಸಾವಿರಾರು ಮಂದಿ. ಪರಿಣಾಮ ಇಂಪ್ರೆಷನಿಸಂ (impressionism) ಮತ್ತು ಪೋಸ್ಟ್ ಇಂಪ್ರೆಷನಿಸಂ ಪಂಥದ ಮೇರು ಕಲಾವಿದ ಅನಿಸಿಕೊಂಡಿದ್ದಾರೆ.
    ಹೀಗೆ ವಾನ್ ಗೋ ಅವರ ಕಲಾಕೃತಿಗಳಿಂದ ಸ್ಫೂರ್ತಿ ಪಡೆದ ಭುವನೇಶ್ವರದ ಸತ್ಯಬ್ರತಾ ದಾಸ್ ಅವರ ಕಲಾಕೃತಿಗಳ ಪ್ರದರ್ಶನ ಬೆಂಗಳೂರಿನ MKF ಗ್ಯಾಲರಿಯಲ್ಲಿ ಫೆಬ್ರವರಿ 10ರಿಂದ ಆರಂಭಗೊಂಡು ಇಂದು ಸಂಪನ್ನಗೊಳ್ಳಲಿದೆ.
ಸತ್ಯಬ್ರತಾ ದಾಸ್ ಅವರು, ಸಣ್ಣ ಅಳತೆಯ ಕಲಾಕೃತಿಗಳನ್ನು ಮಾತ್ರ ಪ್ರದರ್ಶಿಸಿದ್ದಾರೆ. ಬಣ್ಣಗಳ ಆಯ್ಕೆ ಸಹಜವಾಗಿ ಭಾರತೀಯ ನೈಸರ್ಗಿಕ ಕಲಾಕೃತಿಗಳಿಗಿಂತ ಭಿನ್ನವೆನಿಸದು. ಆದರೆ, ಕಲಾಕೃತಿಗಳಲ್ಲಿ ಅವರ ಕುಂಚದ ಬೀಸು (brush stroke ) ಪರಿಣಾಮಕಾರಿಯಾಗಿದೆ. ನಿಸರ್ಗದ ಗಾಢ ವರ್ಣಗಳನ್ನು ಕಲಾಕೃತಿಗಳಲ್ಲಿ ತರುವ ಪ್ರಯತ್ನ ನೋಡುಗರನ್ನು ಕ್ಷಣಕಾಲ ನಿಲ್ಲುವಂತೆ ಮಾಡುತ್ತವೆ.


Share This

Leave a Reply

Your email address will not be published. Required fields are marked *