ಹಿರಿಯ ರಂಗ ಕಲಾವಿದೆ, ಕಲಾ ಪೋಷಕಿ ವಿಮಲಾ ರಂಗಾಚಾರ್ ಇಂದು ಸಂಜೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 97 ವರ್ಷ ವಯಸ್ಸಾಗಿತ್ತು. ವಿದೇಶದಲ್ಲಿರುವ ಪುತ್ರಿ ಅವರ ಆಗಮಿಸಿದ ಬಳಿಕ, ಗುರುವಾರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಕರ್ನಾಟಕ ಕರಕುಶಲ ಮಂಡಳಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ವಿಮಲಾ ಅವರು ಬೆಂಗಳೂರಿನ ಅನೇಕ ಸಂಸ್ಥೆಗಳಲ್ಲಿ ಬೇರೆ ಬೇರೆ ಹುದ್ದೆಗಳನ್ನು ಅಲಂಕರಿಸಿ, ಸಮರ್ಥವಾಗಿ ನಿಭಾಯಿಸಿದ ಕೀರ್ತಿಗೆ ಪಾತ್ರರಾಗಿದ್ದರು. ಲಲಿತಕಲೆಗಳು ಮತ್ತು ಪ್ರದರ್ಶನ ಕಲೆಗಳನ್ನು ಪೋಷಿಸಿ ಬೆಳೆಸಿ ಖ್ಯಾತರಾಗಿದ್ದರು.
ಎಸ್.ಕೆ. ರಾಮಾನುಜ ಅಯ್ಯಂಗಾರ್ ಮತ್ತು ಅಮ್ಮಣ್ಣಿಯಮ್ಮ ದಂಪತಿಯ ಪುತ್ರಿಯಾಗಿ ಸಾಮಾಜಿಕ ಕಾರ್ಯಗಳ ಮೂಲಕ ಗುರುತಿಸಿಕೊಂಡಿದ್ದ ವಿಮಲಾ ರಂಗಾಚಾರ್ ಅವರು ಒಬ್ಬ ಉತ್ತಮ ಕಲಾ ಸಂಘಟಕಿಯಾಗಿದ್ದರು. ಎಂಇಎಸ್ ಸಂಸ್ಥೆಗಳ ಸ್ಥಾಪಕ ಸದಸ್ಯರಾಗಿ, ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ್ದರು. ಮಲ್ಲೇಶ್ವರಂ ಲೇಡಿಸ್ ಕ್ಲಬ್‌ನ ಅಧ್ಯಕ್ಷೆಯಾಗಿ, ಸೇವಾ ಸದನ ಅನಾಥಾಶ್ರಮದ ಅಧ್ಯಕ್ಷೆಯಾಗಿ, ಎಡಿಎ ರಂಗಮAದಿರದ ಗೌರವ ಕಾರ್ಯದರ್ಶಿಯಾಗಿ, ಭಾರತೀಯ ವಿದ್ಯಾ ಭವನದ ಗೌರವ ಸದಸ್ಯೆಯಾಗಿ ಸೇವೆ ಸಲ್ಲಿಸಿದ್ದರು.