ಅಜಂತಾ ಸುಗಂಧ ಬೀರಿದ ಗಣೇಶ್ ಹಲಾಯ್!

Share This

  • ಭಿತ್ತಿಚಿತ್ರ ನಕಲು ಕಲಾಕೃತಿಗಳ ಪ್ರದರ್ಶನ
  • • ದೆಹಲಿಯ ಆಕಾರ್ ಪ್ರಕಾರ್ ಗ್ಯಾಲರಿ ಆಯೋಜನೆ
  • • ಮಾರ್ಚ್ 7ರಂದು ಕಲಾಪ್ರದರ್ಶನ ಸಂಪನ್ನ
ಖ್ಯಾತ ಕಲಾವಿದ ಗಣೇಶ್ ಹಲಾಯ್ (Ganesh Haloi) ಅವರ ಅಜಂತಾ ಗುಹೆಗಳಲ್ಲಿನ ಭಿತ್ತಿ ಚಿತ್ರಗಳ ಸಂರಕ್ಷಿತ ಕಲಾಕೃತಿಗಳ ‘ Figure-ing Out : The Ajanta Project ‘ ಪ್ರದರ್ಶನವನ್ನು ಗ್ಯಾಲರಿ ಆಕಾರ್ ಪ್ರಕಾರ್ (Akar Prakar) ಆಯೋಜಿಸಿದೆ.
ಕುತೂಹಲಕರ, ಆಕರ್ಷಕ ವರ್ಣ ಬಳಕೆಯಿಂದ ಕೂಡಿರುವ ಒಂದೊಂದು ಕಲಾಕೃತಿಗಳೂ ಕರ್ನಾಟಕದ ಹಿರಿಯ ಕಲಾವಿದರಾದ ಎಂ.ಎಸ್.ಚಂದ್ರಶೇಖರ್ ಅವರನ್ನೂ ನೆನಪಿಸುಂತೆ ಮಾಡುತ್ತವೆ. ಕಲಾಕೃತಿಗಳ ಮೈವಳಿಕೆ ಮತ್ತು ರಚನೆಯಲ್ಲಿ ಕಂಡುಬರುವ ತಂತ್ರಗಾರಿಕೆ ಗಮನಾರ್ಹವಾದುದು.
ಅಜಂತಾ ಭಿತ್ತಿಚಿತ್ರಗಳಲ್ಲಿನ ಸೌಮ್ಯ ಭಾವ ಗುಣವನ್ನು ಶೇಕಡಾ ನೂರರಷ್ಟು ಸೆರೆಹಿಡಿದು ರಚಿಸುವಲ್ಲಿ ಯಶಸ್ವಿಯಾಗಿರುವ ಗಣೇಶ್ ಹಲಾಯ್ ಅವರ ಕಲಾಕೃತಿಗಳ ಈ ಪ್ರದರ್ಶನ ಹೃದಯಸ್ಪರ್ಶಿಯಾಗಿತ್ತು.
1936ರಲ್ಲಿ ಜನಿಸಿದ ಗಣೇಶ್ ಹಲಾಯ್ ಅವರು ಮೂಲತಃ ಬಾಂಗ್ಲಾದೇಶದ ಜಮಲ್ಪುರದವರು. ಭಾರತ-ಪಾಕಿಸ್ತಾನ ವಿಭಜನೆಯ ಸಂದರ್ಭದಲ್ಲಿ, 1950ರಲ್ಲಿ ಕೊಲ್ಕತ್ತಾಕ್ಕೆ ಬಂದು ನೆಲೆಸಿದ ಗಣೇಶ್ ಹಲಾಯ್ ಅವರು ಜೀವನದ ಹೆಚ್ಚಿನ ಸಮಯವನ್ನು ಭಾರತದಲ್ಲೇ ಕಳೆದಿದ್ದಾರೆ.
ಅಜಂತಾದ ಭಿತ್ತಿ ಚಿತ್ರಗಳ ಸಂರಕ್ಷಣೆ, ನಕಲು ಕಾರ್ಯಕ್ಕಾಗಿ ಭಾರತ ಸರ್ಕಾರದಿಂದ ನಿಯೋಜನೆಯಾದ ಗಣೇಶ್ ಹಲಾಯ್ ಅವರು ಸುಮಾರು ಏಳೆಂಟು ವರ್ಷಗಳ ಕಾಲ ಅಲ್ಲಿಯೇ ತಂಗಿದ್ದರು. ಗಣೇಶ್ ಹಲಾಯ್ ಅವರು ಕೇವಲ ಕಲಾವಿದರಷ್ಟೇ ಅಲ್ಲ, ಕ್ಯುರೇಟರ್ ಮತ್ತು ಲೇಖಕ ಕೂಡ ಆಗಿದ್ದರು.
ಅಪರೂಪದ ಕಲಾಕೃತಿಗಳ ಕಲಾಪ್ರದರ್ಶನ ಮಾರ್ಚ್‌ 7ರಂದು ಸಂಪನ್ನಗೊಳ್ಳಲಿದೆ.

 


Share This

Leave a Reply

Your email address will not be published. Required fields are marked *