ದ್ವಿಜಾ ಆರ್ಟ್ ಗ್ಯಾಲರಿಯಲ್ಲಿ ‘Resonance of Resilience’

Share This

  • ಕಲಾಪ್ರದರ್ಶನ ನಾಳೆ ಸಂಪನ್ನ, ಆಸಕ್ತರು ಹೋಗಿ ಬನ್ನಿ

ಕಲೆ ಮತ್ತು ಕಲಾಕೃತಿ ಅನಂತಗಳನ್ನು ಮೀರಿ ಮನುಷ್ಯನ ಭಾವನೆಗಳ ಜೊತೆ ಅನುಸಂಧಾನ ನಡೆಸುವ ಶಕ್ತಿ ಹೊಂದಿರುತ್ತವೆ. ಪರಿಣಾಮ ಕಲಾಕೃತಿಗಳು ಭಾವನೆಗಳಿರುವ ಮನುಷ್ಯರನ್ನು (Emotional Human) ಸಹಜವಾಗಿ ಆಕರ್ಷಿಸುತ್ತವೆ. ತುಸು ಕಾಲ ಕಲಾಕೃತಿಗಳ ಮುಂದೆ ನಿಲ್ಲುವಂತೆ ಮಾಡುತ್ತವೆ. ಅವು ಯಾವ್ಯಾವುದೋ ಕಾರಣಗಳಿಂದ ಸಂತೋಷವನ್ನು ನೀಡುತ್ತವೆ. ಸಂಭಾಷಣೆ ನಡೆಸುವಂತೆ ಪ್ರೇರೇಪಿಸುತ್ತವೆ. ಇಂತಹ ಸಂತೋಷದ ವಿಚಾರ ಬಂದಾಗ ಟಿಬೆಟ್ ಧರ್ಮ ನಾಯಕರಾದ ದಲೈ ಲಾಮಾ ಅವರ ಮಾತೊಂದು ನೆನಪಿಗೆ ಬರುತ್ತದೆ. “Happiness is not something ready-made. It comes from your own actions.” ಎಂದಿರುವ ಅವರ ಮಾತಲ್ಲಿ ಕೇವಲ ಸಂತೋಷದ ಬಗ್ಗೆ ಮಾತ್ರ ಇರುವುದಲ್ಲ. ಸಂತೋಷ ಬೇಕೆಂದರೆ ಮೊದಲು ಸ್ವಂತ ಕ್ರಿಯೆ ಬೇಕು ಎನ್ನುತ್ತಾರೆ. ಅಂದರೆ ಸಂತೋಷಕ್ಕಾಗಿ ಶ್ರಮಿಸಬೇಕು ಎನ್ನುವ ಅರ್ಥವೂ ಅಡಗಿದೆ ಅನಿಸುತ್ತಿರುತ್ತದೆ.

ಕೆಲ ವರ್ಷಗಳ ಹಿಂದೆ ಹಿರಿಯ ಕಲಾವಿದರೊಬ್ಬರು ಕಲಾಪ್ರದರ್ಶನವನ್ನು ನೋಡುವುದು ಎಷ್ಟು ಮುಖ್ಯವಾಗುತ್ತದೆ ಎನ್ನುವುದನ್ನು ಕಲಾ ವಿದ್ಯಾರ್ಥಿಗಳಿಗೆ ವಿವರಿಸುವಾಗ “Visiting an art exhibition is vital for intellectual stimulation, mental health benefits, and personal inspiration” ಎಂದು ವ್ಯಾಖ್ಯಾನಿಸಿದ್ದರು. ಅವರ ಜೊತೆಯಲ್ಲಿದ್ದ ನನಗೂ ಅದು ಕಿವಿ ಮಾತಾಯಿತು. ಹೀಗಾಗಿ ಇಂದಿಗೂ ಕಲಾಪ್ರದರ್ಶನ ವೀಕ್ಷಣೆಯನ್ನು ಕಡ್ಡಾಯವಾಗಿಸಿಕೊಂಡಿದ್ದೇನೆ. ನನ್ನ ಬರವಣಿಗೆಗೆ ಅಗತ್ಯವಾದ ಸ್ಫೂರ್ತಿಯನ್ನು ಆ ಕಲಾಕೃತಿಗಳು ನೀಡುತ್ತಿವೆ.

ಇಂತಹ ಸ್ಫೂರ್ತಿದಾಯಕ ಕಲಾಕೃತಿಗಳ ಪ್ರದರ್ಶನ ‘Resonance of Resilience’ ಬೆಂಗಳೂರಿನ ದ್ವಿಜಾ ಆರ್ಟ್ ಗ್ಯಾಲರಿಯಲ್ಲಿ ನಡೆಯುತ್ತಿದೆ. ಕೃಷ್ಣ ಸೆಟ್ಟಿ ಫೌಂಡೇಷನ್ ಮತ್ತು Nature Knots ಸಹಯೋಗದಲ್ಲಿ ಇತ್ತೀಚಿಗೆ ನಡೆದ ಪೇಂಟಿಂಗ್ ಕ್ಯಾಂಪ್ನಲ್ಲಿ ರಚಿಸಲಾದ ಕಲಾಕೃತಿಗಳು ಇಲ್ಲಿ ಪ್ರದರ್ಶಿಸಲ್ಪಟ್ಟಿವೆ. ನವದೆಹಲಿಯ ಹಿರಿಯ ಕಲಾವಿದರಾದ ಜತಿನ್ ದಾಸ್, ಆಸ್ಟ್ರಿಯಾದ ಕ್ಲೆಮೆನ್ಸ್ ಬಿ.ಸೌ., ಚಂಢೀಗಢದ ಮದನ್ ಲಾಲ್, ಜಮ್ಮುವಿನ ಕೆ.ಕೆ.ಗಾಂಧಿ, ಕಜಕಿಸ್ತಾನದ ಜುಲಿಯಾ ಚುಬುಟ್ಕಿನಾ, ಕರ್ನಾಟಕದ ಜಿ. ಸುಬ್ರಮಣಿಯನ್, ಶ್ರೀಲಂಕಾದ ಸುದತ್ ಅಬೇಯ್ಸೇಕರಾ, ಸಿಂಗಾಪುರದ ಪಿ.ಗ್ನಾನ, ಚೆನ್ನೈನ ರಾಮಾ ಸುರೇಶ್, ತುಮಕೂರಿನ ಬಾಸುಕಿ ದಾಸ್ಗುಪ್ತಾ, ಪ್ರಭು ಹರಸೂರು, ಅಸ್ಸಾಂನ ಮಿಂಟು ದೇಕಾ, ಶ್ರೀಲಂಕಾದ ಅಚಲಗುಣವರ್ಧನ, ಹೈದರಾಬಾದ್ನ ವಿಜಯ್ ದೋರೆ, ತಮಿಳುನಾಡಿನ ಕಂದನ್ ಜಿ., ಹಾವೇರಿಯ ಕರಿಯಪ್ಪ ಹಂಚಿನಮನಿ, ಬೆಂಗಳೂರಿನ ಪ್ರವೀಣ್ ಕುಮಾರ್ ಮತ್ತು ಚಿ.ಸು. ಕೃಷ್ಣಸೆಟ್ಟಿ ಅವರ ಕಲಾಕೃತಿಗಳನ್ನು ಈ ಪ್ರದರ್ಶನದಲ್ಲಿ ವೀಕ್ಷಿಸಬಹುದಾಗಿದೆ.

ಸ್ನೇಹಿತರೆ, ಏಪ್ರಿಲ್ 17ರಿಂದ ಆರಂಭವಾಗಿರುವ ‘Resonance of Resilience’ ಕಲಾಪ್ರದರ್ಶನ ಏಪ್ರಿಲ್ 26 (ನಾಳೆ) ಭಾನುವಾರ ಸಂಪನ್ನಗೊಳ್ಳಲಿದೆ. ಆಸಕ್ತರು ಬಿಡುವು ಮಾಡಿಕೊಂಡು ಹೋಗಿಬನ್ನಿ.

 

 

 

 

 

 

 

 

 

 

 

 

 


Share This

Leave a Reply

Your email address will not be published. Required fields are marked *