- ಅಮಿತಾಬ್ ಸೇನ್ಗುಪ್ತಾ ಏಕವ್ಯಕ್ತಿ ಕಲಾಪ್ರದರ್ಶನ
ಹಿರಿಯ ಕಲಾವಿದ ಅಮಿತಾಬ್ ಸೇನ್ಗುಪ್ತಾ (Amitabh Sengupta) ಅವರ ಏಕವ್ಯಕ್ತಿ ಕಲಾಪ್ರದರ್ಶನ ನವದೆಹಲಿಯ ಬಿಕಾನೆರ್ ಹೌಸ್ ಗ್ಯಾಲರಿಯಲ್ಲಿ ನಡೆಯಿತು. ಪ್ರದರ್ಶಿತ ಕಲಾಕೃತಿಗಳು ಅವರ ಅನುಭವಕ್ಕೆ ಹಿಡಿದ ಕನ್ನಡಿಯಾಗಿತ್ತು. 1995ರ ನಂತರದ ಕಲಾಕೃತಿಗಳನ್ನು ಪ್ರದರ್ಶಿಸಲಾಗಿತ್ತು.
ಕಲಾ ಇತಿಹಾಸ ತಜ್ಞೆ, ಕ್ಯುರೇಟರ್ ಉಮಾ ನಾಯರ್ ಅವರು ಇವರ ಕಲಾಕೃತಿಗಳ ಕುರಿತು ಬಹಳ ಸುಂದರವಾಗಿ ಅಕ್ಷರಗಳಲ್ಲಿ ಹೆಣೆದಿದ್ದರು. ಅಮಿತಾಬ್ ಅವರ ಕಲಾಕೃತಿಗಳಲ್ಲಿ ಅವರ ಚಿಂತನ ಲಹರಿ ಆಸಕ್ತಿ ಮೂಡಿಸುವಂತೆ ಇದ್ದವು. ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಅಭಿವ್ಯಕ್ತಿ ಸಾಮಾನ್ಯ ನೋಡುಗರನ್ನೂ ಬಲುಬೇಗ ತಲುಪಬಲ್ಲವು.