- ನವದೆಹಲಿಯ Shrine Empire ಗ್ಯಾಲರಿಯಲ್ಲಿ ಆಯೋಜನೆ
ಕಾಗೆ! ಪ್ರಪಂಚದ ಪಕ್ಷಿ ಸಂಕುಲದಲ್ಲೇ ಅತ್ಯಂತ ಬುದ್ಧಿವಂತ ಪಕ್ಷಿ. ಮನುಷ್ಯನ ವಾಸ ಸ್ಥಾನಗಳ ಸುತ್ತಮುತ್ತವೇ ತಾನೂ ಇರಬೇಕೆನ್ನುವ ಪಕ್ಷಿ. ಜಗತ್ತಿನ ಯಾವುದೇ ಮೂಲೆಗೆ ಹೋದರೂ ಕಾಣಸಿಗುವ ಪಕ್ಷಿ.
ಕಾಗೆಯ ಜಾಡು ಹಿಡಿದು ಹೊರಟ ಬಾಂಗ್ಲಾದೇಶದ ಫೋಟೋ ಜರ್ನಲಿಸ್ಟ್ ಸರ್ಕಾರ್ ಪ್ರೋಥಿಕ್ ಅವರ ವಿಡಿಯೋ ಪ್ರಸಂಟೇಷನ್ ಮತ್ತು ಛಾಯಾಚಿತ್ರ ಪ್ರದರ್ಶನ ‘Shadows in the Sky’ ನವದೆಹಲಿಯ Shrine Empire ಗ್ಯಾಲರಿಯಲ್ಲಿ ಆಯೋಜನೆಯಾಗಿದೆ.
ಢಾಕಾದಲ್ಲಿ ತಾವಿರುವ ಅಪಾರ್ಟ್ಮೆಂಟ್ ಬಾಲ್ಕನಿಯಿಂದ ಕಂಡ ಕಾಗೆಯ ಜೀವನ ಮತ್ತು ತಾಯಿಯ ಜೊತೆಗಿನ ಅನುಸಂಧಾನದ ಒಂದು ಸುಂದರ ಕಥೆ ಕಟ್ಟಿಕೊಡುವ ಪ್ರದರ್ಶನ ಇದಾಗಿತ್ತು. ಪಕ್ಷಿಯೊಂದು ಹೇಗೆ ಒಡನಾಡಿಯಾಗಿ, ಮಾನವನ ಜೊತೆ ಜೊತೆಯಲ್ಲೇ ತನ್ನ ಬದುಕು ಕಟ್ಟಿಕೊಂಡು ಆಗಸದಲ್ಲಿ ಪ್ರಪಂಚ ಪರ್ಯಟನೆ ಮಾಡಿಕೊಳ್ಳುತ್ತಾ ಜೀವಿಸುವ ಭಾವನಾತ್ಮಕ ದೃಶ್ಯ ಕಥೆ ಹೇಳಿದ ಪರಿ ಆಪ್ತವೆನಿಸಿತು.Readability analysis:



