Art Books with Coffee; ಒಂದೊಳ್ಳೆಯ ಕಾರ್ಯಕ್ರಮ!

Share This

ಇಂತಹದ್ದೊಂದು ಅವಕಾಶ ಕಲಾ ಸಮುದಾಯಕ್ಕೆ ಅಗತ್ಯವಿತ್ತು. ಪ್ರಮುಖವಾಗಿ ಆಸಕ್ತರಿಗೆ, ಯುವ ಕಲಾವಿದರಿಗೆ ಮತ್ತು ಕಲಾ ವಿದ್ಯಾರ್ಥಿಗಳಿಗೆ ಬೇಕಿತ್ತು.
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ತನ್ನ ಗ್ರಂಥಾಲಯದ ಸಂಗ್ರಹದಲ್ಲಿರುವ ದೃಶ್ಯ ಕಲೆಗೆ ಸಂಬಂಧಿಸಿದ ಪುಸ್ತಕಗಳನ್ನು ಈ ಸಮುದಾಯಕ್ಕೆ ಲಭ್ಯವಾಗಿಸುವ, ಅಥವಾ ಸಮಾನ ಮನಸ್ಕರು ಒಂದೆಡೆ ಸೇರಿ ಹೊತ್ತಿಗೆಗೆ ಸಂಬಂಧಿಸಿ ಚರ್ಚಿಸುವ ಸಂಸ್ಕೃತಿಯೊಂದರ ಮರುಸೃಷ್ಟಿಗೆ ನಾಂದಿ ಹಾಡಿದೆ. ‘ಆರ್ಟ್ ಬುಕ್ಸ್ ವಿತ್ ಕಾಫಿ | Art Books with Coffee’ ಕಾರ್ಯಕ್ರಮ ಉಪಯುಕ್ತವಾಗಿತ್ತು.
ಜ್ಞಾನಾರ್ಜನೆಗೆ ಓದು ಮುಖ್ಯವೆನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇಲ್ಲಿ ಓದಿನ ಜೊತೆಗೆ ಇನ್ನೊಂದಿಷ್ಟು ಮಾಹಿತಿಗಳೂ ಲಭ್ಯವಾಗಲಿದೆ. ಪರಸ್ಪರ ಮಾಹಿತಿ ವಿನಿಮಯವಾಗಲಿದೆ. ಓದುವ, ಓದಿರುವುದನ್ನು ಹಂಚಿಕೊಳ್ಳುವ ಮನಸ್ಥಿತಿ ಉಳ್ಳವರಿಗೆ ಇದೊಂದು ಅತ್ಯುತ್ತಮ ವೇದಿಕೆ. ಈ ನಿಟ್ಟಿನಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಕಾರ್ಯ ಶ್ಲಾಘನೀಯ, ಅಭಿನಂದನಾರ್ಹ. ಖಂಡಿತವಾಗಿ ಇದೊಂದು ಸಂಸ್ಕೃತಿಯಾಗಿ, ಉಪಯುಕ್ತ ಕಾರ್ಯಕ್ರಮ ಆಗಲಿದೆ. ಪುಸ್ತಕ ಪ್ರೀತಿ ಖಂಡಿತವಾಗಿಯೂ ಅಪಾಯವಂತೂ ಆಗಲಾರದು.
ಕಲೆಯ ಬೆಳವಣಿಗೆ ಕೇವಲ ಪ್ರದರ್ಶನ, ಶಿಬಿರಗಳಿಂದ ಆಗುವಂತಹದ್ದಲ್ಲ. ಸಮುದಾಯಕ್ಕೆ ಅಗತ್ಯವಾಗಿ ಬೇಕಿರುವ ಮಾಹಿತಿ ಒದಗಿಸುವ ಕಾರ್ಯ ಆಗಬೇಕಿದೆ. ದೃಶ್ಯ ಕಲೆಗೆ ಸಂಬಧಿಸಿದ ಮಾಹಿತಿಗಳು ಸಾಮಾನ್ಯರಿಗೂ ತಲುಪುವಂತೆ ಆಗಬೇಕಿದೆ. ಇಂತಹ ಕಾರ್ಯಕ್ರಮ ಕಲಾ ಶಿಕ್ಷಣಕ್ಕೂ ವೇದಿಕೆಯಾಗಲಿದೆ. ಒಂದೊಳ್ಳೆಯ ಕಾರ್ಯಕ್ರಮ ತಿಂಗಳಿಗೊಮ್ಮೆ ಇಂತಹ ಅವಕಾಶ ಸಿಗುವಂತಾಗಲಿ.
ಇಂದು (ಅಕ್ಟೋಬರ್ 13, ಭಾನುವಾರ) ನಡೆದ ‘ಆರ್ಟ್ ಬುಕ್ಸ್ ವಿತ್ ಕಾಫಿ’ ಕಾರ್ಯಕ್ರಮದಲ್ಲಿ ಸಾಕಷ್ಟು ಆಸಕ್ತ ಹಿರಿಯ-ಕಿರಿಯರು, ಮಕ್ಕಳು ಪಾಲ್ಗೊಂಡಿದ್ದರು. ನಾನಂತೂ ಬಹಳ ಖುಷಿ ಪಟ್ಟೆ. ಇದಕ್ಕೆ ಕಾರಣೀಕರ್ತರಾದ IIWC ಎಲ್ಲಾ ಸದಸ್ಯ ವರ್ಗ, ಸಿಬ್ಬಂದಿಗಳಿಗೆ ಅನಂತಾನಂತ ಧನ್ಯವಾದಗಳು.

Share This

Leave a Reply

Your email address will not be published. Required fields are marked *