ಚಲನೆ, ಧ್ವನಿ ಹೇಳುವ ಸತ್ಯ: ಇದು ಕಲೆಯ ಒಂದು ವರಸೆ

Share This

ಕ್ರೀಯಾಶೀಲತೆಗೆ ಇತಿಮಿತಿಗಳಿಲ್ಲ. ಹಾಗೇ ಕ್ರಿಯಾಶೀಲರಿಗೆ ಸುಮ್ಮನೆ ಕುಳಿತಿರಲು ಆಗುವುದಿಲ್ಲ. ಏನಾದರೂ ಚಟುವಟಿಕೆಯಲ್ಲಿ ತೊಡಗಿಕೊಂಡಿರಬೇಕು. ಆಗಲೇ ಅವರಿಗೆ ಸಮಾಧಾನ!
ಆದರೆ, ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಲಾಕ್‍ಡೌನ್ ಆಗಿದ್ದರಿಂದ ಕೆಲವು ಕ್ರಿಯಾಶೀಲರು ಮನೆಯಲ್ಲೇ ಕುಳಿತುಕೊಂಡು ಲಾಕ್‍ಡೌನ್ ಸಮಯದ ಒಂದಿಷ್ಟು ಕ್ಷಣಗಳನ್ನು ಸೆರೆಹಿಡಿದಿದ್ದಾರೆ.
ಸಾಮಾನ್ಯವಾಗಿ ನಮಗೆ ಬೇರಿನ್ನೇನೂ ಕೆಲಸ ಮಾಡಲು ಸಾಧ್ಯವಾಗದೇ ಸುಮ್ಮನೇ ಕುಳಿತಾಗ ಹೊಸ ಹೊಸ ಯೋಚನೆಗಳು ಮನಸ್ಸಿನಲ್ಲಿ ಸಕ್ರೀಯವಾಗಿ ಕೆಲಸ ಆರಂಭಿಸಲು ಶುರುಮಾಡುತ್ತವೆ. ಲಾಕ್‍ಡೌನ್ ಸಮಯದಲ್ಲಿ ಆಗಿದ್ದೂ ಇದೆ. ಮಾಡಲಿಕ್ಕೆ ಕೆಲಸ ಬೇಕಷ್ಟಿದ್ದರೂ ಅದನ್ನೇನೂ ಮಾಡಲಾಗದ ಪರಿಸ್ಥಿತಿ. ಹೀಗಾಗಿ ಲಾಕ್‍ಡೌನ್ ಸಮಯವನ್ನು ಸದುಪಯೋಗ ಪಡಿಸಿಕೊಂಡಿರುವ ಕೆಲವು ಕಲಾವಿದರು ತಮ್ಮನ್ನು ಕಾಡಿದ ಕೆಲವು ಧ್ವನಿಗಳನ್ನು ದಾಖಲಿಸಿದ್ದಾರೆ. ಮನೆಯ ಒಳಗಿನ ಅಥವಾ ಮನೆಯ ಹೊರಗಿನ ಈ ಧ್ವನಿಗಳು ನಮ್ಮನ್ನು ಯೋಚಿಸುವಂತೆ ಮಾಡುವಂತಿವೆ. ಅಬ್ಬಾ… ನಮ್ಮ ಮನೆ ಬಳಿಯೂ ಕೇಳಿಸಬೇಕಲ್ಲ ಎಂದು ಒಮ್ಮೆ ನೀವೂ ಇಂಥದ್ದೊಂದು ಪ್ರಯತ್ನಕ್ಕೆ ಕೈಹಾಕಿದರೂ ಅಚ್ಚರಿಯೇನಿಲ್ಲ. ಕಾರಣ ದಿನಬೆಳಗಾದರೆ ಕೇಳಿಸಿಕೊಳ್ಳಬಹುದಾದ ಧ್ವನಿಗಳನ್ನೇ ಈ ಕಲಾವಿದರೂ ಸೆರೆಹಿಡಿದಿದ್ದಾರೆ.
ಈ ಪ್ರಯತ್ನ ಭಾರತದವರಷ್ಟೇ ಅಲ್ಲ ಇಟಲಿ, ಅಮೆರಿಕ ಸೇರಿದಂತೆ ಇನ್ನೂ ಅನೇಕ ರಾಷ್ಟ್ರಗಳಲ್ಲಿ ನಡೆದಿದೆ. ಅನೇಕ ಕ್ರಿಯಾಶೀಲರು ತಮ್ಮ ಸುತ್ತಲಿನ ಗಮನಾರ್ಹ ಧ್ವನಿಗಳನ್ನು ಸೆರೆಹಿಡಿದಿದ್ದಾರೆ.

ಚಲನೆ ಮತ್ತು ಧ್ವನಿ:
ಲಾಕ್‍ಡೌನ್ ಸಮಯದಲ್ಲಿ ರೆಕಾರ್ಡ್ ಮಾಡಲಾದ ಈ ಒಂದೊಂದು ಧ್ವನಿಗಳನ್ನು ಕೇಳಿಸಿಕೊಂಡ ಬಳಿಕ ಅನಿಸುವುದಿಷ್ಟೆ. ನಮ್ಮ ಸುತ್ತ್ತಲಿನ ಪರಿಸರದಲ್ಲಿರುವ ಅದೆಷ್ಟೋ ಜೀವಿಗಳ ಹಾಗೂ ಕೃತಕ ವಸ್ತುಗಳ ಚಲನಾತ್ಮಕ ಪ್ರಕ್ರಿಯೆಗಳಿಗೆ ನಾವು ಹೇಗೆ ಪ್ರತಿಕ್ರಿಯಿಸಲು ಸಾಧ್ಯ ಎನ್ನುವುದನ್ನು ಅರಿಯಬಹುದು. ಅನೇಕ ಸಂದರ್ಭಗಳಲ್ಲಿ ಈ ಧ್ವನಿಯೇ ನಮಗೆ ಕರ್ಕಶವಾಗಿ ಕೇಳಿಸಿದ್ದೂ ಇರಬಹುದು. ಅಥವಾ, ಧ್ವನಿ ನಮ್ಮನ್ನು ಹೇಗೆ ಕ್ರಿಯಾಶೀಲರನ್ನಾಗಿ ಮಾಡುತ್ತದೆ ಎನ್ನುವುದಕ್ಕೂ ಇದನ್ನು ಉದಾಹರಿಸಬಹುದು. ಅಷ್ಟಕ್ಕೂ ಈ ಪ್ರಯತ್ನಗಳನ್ನು ಪ್ರತಿಯೊಬ್ಬರೂ ಒಂದೊಂದು ರೀತಿಯಲ್ಲಿ ವ್ಯಾಖ್ಯಾನಿಸಬಹುದು.
ನಗರ ಪ್ರದೇಶಗಳಲ್ಲಿ ವಾಸಿಸುವ ಮಂದಿಗೆ ಹಗಲು ಹಗಲಾವುದು, ರಾತ್ರಿಯಾವುದು ಎನ್ನುವುದೂ ಗೊತ್ತಾಗದ ರೀತಿಯಲ್ಲಿ ಸದಾ ಕಾಲ ವಾಹನಗಳ ಅಥವಾ ಕಾರ್ಖಾನೆಗಳ ಧ್ವನಿಗಳನ್ನೇ ಕೇಳಿಸಿಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿ. ಅದರಿಂದಾಚೆ ಕಿವಿಗೆ ಹಿತ ನೀಡುವ ಒಂದಿಷ್ಟು ಧ್ವನಿಗಳು ಇಲ್ಲಿವೆ. ಕೃತವಾಗಿ ಮನುಷ್ಯ ಸೃಷ್ಟಿಸಿದ ಧ್ವನಿಗಳೂ ಇವೆ. ಅದೆಷ್ಟೋ ಧ್ವನಿಗಳನ್ನು ಮನುಷ್ಯರಾದ ನಾವು ಮರೆತು ಹೋಗಿದ್ದೇವೆ. ಆದರೆ ಲಾಕ್‍ಡೌನ್ ಮತ್ತೊಮ್ಮೆ ಕೇಳಿಸುವಂತೆ ಮಾಡಿದೆ.
ಹಾಗಾದರೆ ಏನೆಲ್ಲಾ ಮಾಡಿದ್ದಾರೆ, ಆ ಬಗ್ಗೆ ಯಾರ್ಯಾರು ಏನೇನು ಹೇಳಿದ್ದಾರೆ ಇಲ್ಲಿವೆ ನೋಡಿ.

ಸೇತುವಾದ ಸಾಮಾಜಿಕ ಜಾಲತಾಣ
ಅಷ್ಟಕ್ಕೂ ಇಂಥದ್ದೊಂದು ಪ್ರಕ್ರಿಯೆ ವಿಶ್ವದ ಎಲ್ಲೆಡೆ ನಡೆದಿದೆ. ಒಬ್ಬ ಸಾಮಾನ್ಯನೂ ಲಾಕ್‍ಡೌನ್‍ನ ಕ್ಷಣದಲ್ಲಿನ ಧ್ವನಿಗಳನ್ನು ರೆಕಾರ್ಡ್ ಮಾಡಿರಬಹುದು. ಕಾರಣ ಈ ಪ್ರಯತ್ನ ಯಾರಿಂದ ಆರಂಭವಾಯಿತೋ ಗೊತ್ತಿಲ್ಲ. ಆದರೆ ಒಂದಿಷ್ಟು ಮಂದಿ ಕಲಾವಿದರಂತೂ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಪ್ರಯತ್ನವನ್ನು ಶೇರ್ ಮಾಡಿಕೊಳ್ಳುವ ಮೂಲಕ ಲಾಕ್‍ಡೌನ್ ಸಮಯವನ್ನಂತೂ ಕಳೆದಿದ್ದಾರೆ. ಅದೆಷ್ಟೋ ಮಂದಿ ಕಲಾವಿದರು ಈಗಾಗಲೇ ಈ ಸಮಯವನ್ನು ಹೇಗೆ ಕಳೆದೆ ಎಂಬುದನ್ನು ಮುಂಬರುವ ದಿನಗಳಲ್ಲಿ ಪ್ರದರ್ಶನ ಮಾಡುವ ಲೆಕ್ಕಾಚಾರದಲ್ಲೂ ಇದ್ದಾರೆ.

ಆಸ್ಪತ್ರೆಯೊಳಗಿನ ಧ್ವನಿ ಕೇಳಿಸುತ್ತಿತ್ತು!

ಪಲ್ಲವಿ ಪೌಲ್

“ಸಮುದ್ರದ ಅಲೆಗಳು ಒಂದಕ್ಕೊಂದು ಬಡಿದುಕೊಳ್ಳುವುದು, ಮರ-ಗಿಡಗಳ ಮೇಲಿನ ಅಳಿದುಳಿದ ಒಂದಿಷ್ಟು ಪಕ್ಷಿಗಳ ಹಾಗೂ ಆಸ್ಪತ್ರೆಗಳ ಒಳಗಿನ ಚಿಕಿತ್ಸಾ ಉಪಯೋಗಿ ಸಾಮಗ್ರಿಗಳ ಧ್ವನಿಗಳು ಕೇಳಿಸುತ್ತಿದ್ದವು”
ಲಾಕ್‍ಡೌನ್‍ನ ಸಮಯದ ಕಠೋರ ಸತ್ಯವನ್ನು ಹೀಗೆ ವಿವರಿಸಿದ್ದು ನವದೆಹಲಿಯ ಕಲಾವಿದೆ ಹಾಗೂ ನಿರ್ದೇಶಕಿ ಪಲ್ಲವಿ ಪೌಲ್. ಅವರ ಈ ಒಂದು ಹೇಳಿಕೆಯಲ್ಲಿ ಇಷ್ಟೊಂದು ನಿಗೂಢ ಸತ್ಯಗಳು ಅಡಗಿವೆ ಎನ್ನುವುದನ್ನು ನಾವಿಲ್ಲಿ ಗ್ರಹಿಸಬಹುದು. ನಮ್ಮ ದೈನಂದಿನ ದಿನಗಳಂತೆ ಇರಲಿಲ್ಲ ಎನ್ನುವುದು ಒಂದು ಕಡೆಯಾದರೆ, ನಾವು ನಿತ್ಯ ಕೇಳಿಸಿಕೊಳ್ಳುವ ಧ್ವನಿಗಳು ಇವಾಗಿದ್ದರೂ ಕೂಡ ಉಳಿದ ನಮ್ಮ ಒತ್ತಡಗಳ ನಡುವೆ ಈ ಬಗ್ಗೆ ಇಷ್ಟೊಂದು ತಲೆಕೆಡಿಸಿಕೊಳ್ಳುವುದಿಲ್ಲ ಎಂಬುದನ್ನು ಹೇಳುವಂತಿದೆ. ಆಸ್ಪತ್ರೆಗಳ ಒಳಗಿನ ಸಾಮಗ್ರಿಗಳ ಧ್ವನಿ ನಮಗೆ ಈಗ ಕೇಳಿಸುತ್ತಿದೆ ಎಂಬ ಮಾತು ಅದರ ಗಂಭೀರತೆಯನ್ನು, ಮಹತ್ವವನ್ನೂ ತಿಳಸುವಂತಿದೆ.

ಸೂಚನೆ: ಒಂದಿಷ್ಟು ಆಡಿಯೋ ಇಲ್ಲಿವೆ. ಕೇಳಿಸಿಕೊಳ್ಳಿ.
(ಕೃಪೆ: ವೈಸ್)


Share This

Leave a Reply

Your email address will not be published. Required fields are marked *