ಹರಿವ ಬಣ್ಣದಲಿ ಭಾವನೆಗಳ ಅಮೂರ್ತ ರೂಪ!

Share This

  • G ಗ್ಯಾಲರಿಯಲ್ಲಿ ಪ್ರಭಾಕರ್ ಕೋಲ್ತೆ ವರ್ಣ ವೈಭವ

ಅಮೂರ್ತ ಕಲಾಕೃತಿಗಳನ್ನು ನೋಡಿದಾಗಲೆಲ್ಲ ದೇಶದ ಕೆಲವು ಕಲಾವಿದರ ಕಲಾಕೃತಿಗಳು ಕಣ್ಮುಂದೆ ಬರುತ್ತವೆ. ಅಂಥವರಲ್ಲಿ ಮಹಾರಾಷ್ಟçದ ಪ್ರಭಾಕರ್ ಕೋಲ್ತೆ ಕೂಡ ಒಬ್ಬರು. ಅವರ ಬಣ್ಣಗಳ ಬಳಕೆ ಬಹಳ ಆಪ್ತವಾಗುವ ಕಾರಣಕ್ಕಾಗಿ ನೆನಪಿನಂಗಳದಲ್ಲಿ ಸದಾ ಉಳಿಯುತ್ತಾರೆ.

“For Me Painting is not an intellectual act, it is an act of feeling.” ಎನ್ನುವ ಪ್ರಭಾಕರ್ ಕೋಲ್ತೆ ಅವರ ಹೇಳಿಕೆ ನನ್ನ ಪಾಲಿಗೆ ಯಾವತ್ತೂ ಸ್ಫೂರ್ತಿದಾಯಕ. ಕಲಾಕೃತಿ ಭಾವನೆಗಳ ಜೊತೆಗಿನ ಪ್ರಕ್ರಿಯೆ ಎನ್ನುವ ಅವರು ಬಹಳ ಸೊಗಸಾಗಿ ಬಣ್ಣಗಳೊಂದಿಗೆ ಅನುಸಂಧಾನ ನಡೆಸುತ್ತಾರೆ. ಬಣ್ಣಗಳನ್ನೂ ಮಾತನಾಡಿಸುತ್ತಾರೆ. ಆಕೃತಿಗಳಲ್ಲಿ ನೂರಾರು ಭಾವನೆಗಳನ್ನು ಹಿಡಿದಿಡುತ್ತಾರೆ.

“I have been practicing my way of painting and it will continue till my last breath. For me painting is my passion, it’s my breath and life.” ತಮ್ಮನ್ನು ಮಾತನಾಡಿಸಿರುವ ಪತ್ರಿಕಾ ಪ್ರತಿನಿಧಿಗೆ ನೀಡಿರುವ ಈ ಮಾತು ಓದಿ, ಈ ಮನುಷ್ಯನ ಜೀವನೋತ್ಸಾಹ ಎಂತಹದ್ದಿರಬೇಕೆಂದು ಅಂದುಕೊಂಡಿದ್ದೆ.

ಸ್ನೇಹಿತರೆ, ಪ್ರಭಾಕರ್ ಕೋಲ್ತೆ ಅವರ ಕಲಾಕೃತಿಗಳ ‘Chromatic Rhythms’ ಪ್ರದರ್ಶನ ಬೆಂಗಳೂರಿನ ಗ್ಯಾಲರಿ ಜಿ (Gallery G)ನಲ್ಲಿ ನಡೆಯುತ್ತಿದ್ದು, ನವೆಂಬರ್ 22ರಂದು ಸಂಪನ್ನಗೊಳ್ಳಲಿದೆ. ಬಿಡುವು ಮಾಡಿಕೊಂಡು ಹೋಗಿ ಬನ್ನಿ.

 

 

 

 


Share This

Leave a Reply

Your email address will not be published. Required fields are marked *