ಬೆಂಗಳೂರು ಗ್ಯಾಲರಿಯಲ್ಲಿ ಹೊಯ್ಸಳ ದರ್ಶನ

Share This

“Painting is poetry that is seen rather than felt, and poetry is painting that is felt rather than seen.” ಎನ್ನುತ್ತಾರೆ ಖ್ಯಾತ ಕಲಾವಿದ ಲಿಯಾನಾರ್ಡೋ ಡಾ ವಿನ್ಸಿ (Leonardo da Vinci).
ಚಿತ್ರಕಲೆಯ ಶಕ್ತಿ ಇದು. ಕಣ್ಣಿಂದ ನೋಡಿ ಅನುಭವಿಸಬಹುದಾದ ಕಾವ್ಯವದು. ಕಾವ್ಯದೊಳಗಿನ ಅರ್ಥವನ್ನು ಸಲೀಸಾಗಿ ತಲುಪಿಸುವ ಕಾವ್ಯದಷ್ಟೇ ಪ್ರಾಮುಖ್ಯತೆ ಪಡೆದ ಮಾಧ್ಯಮ ಕೂಡ.
ಯಾವುದೇ ಕಲಾಪ್ರದರ್ಶನಕ್ಕೆ ಭೇಟಿ ನೀಡಿದಾಗಲೂ ಇಂತಹ ಕೆಲವೊಂದು ಸಂಗತಿಗಳು ನೋಡುಗರಲ್ಲಿ ಪ್ರಶ್ನೆ ಹುಟ್ಟುವಂತೆ ಮಾಡುವುದು ಸಹಜ. ನೋಡುಗನಾಗಿ ಯಾವುದೆ ಕಲಾಪ್ರಕಾರದ ಕಲಾಕೃತಿಯನ್ನು ಹೇಗೆ ಗ್ರಹಿಸಬಲ್ಲ, ಹೇಗೆ ಅರ್ಥೈಸಿಕೊಳ್ಳಬಲ್ಲ ಎನ್ನುವುದು ಮುಖ್ಯವಾಗುತ್ತದೆ. ನೋಡುಗ ಕಲಾವಿದನಿಗಿಂತಲೂ ಬೇರೆಯದೇ ಆದ, ಇನ್ನೂ ಅರ್ಥಪೂರ್ಣವಾದ ದೃಷ್ಟಿಕೋನದಿಂದ ಗ್ರಹಿಸಬಹುದಾದ ಸಾಧ್ಯತೆಗಳು ಇವೆ. ಕವಿ ಯೋಚಿಸಿ ಅಕ್ಷರಗಳ ಮೂಲಕ ಕಟ್ಟಿಕೊಳ್ಳಬಹುದಾದುದನ್ನೇ ಕಲಾವಿದ ಯೋಚಿಸಿ ರೇಖೆ, ಬಣ್ಣಗಳ ಮೂಲಕ ಕಾವ್ಯ ರೂಪಿಸಬಲ್ಲ. ಈ ಹಿನ್ನೆಲೆಯಲ್ಲೇ ಲಿಯೊನಾರ್ಡೊ ಡಾ ವಿನ್ಸಿ ಹೀಗೆ ಹೇಳಿದ್ದಿರಬಹುದು.
ಬೆಂಗಳೂರು ಆರ್ಟ್ ಗ್ಯಾಲರಿಯಲ್ಲಿ (ಯುವಪಥ) ನಡೆಯುತ್ತಿರುವ “ಹೊಯ್ಸಳ ಕುಂಚಕಲಾ ದರ್ಶನ” ಸ್ವಲ್ಪಮಟ್ಟಿಗೆ ಕಾವ್ಯದ ಅನುಭವ ನೀಡಿತು. ಸಾಂಪ್ರದಾಯಿಕ ಕಲಾ ಪ್ರಕಾರದಿಂದ ಹಿಡಿದು ಸಮಕಾಲೀನ ಕಲಾಕೃತಿಗಳು ಈ ಪ್ರದರ್ಶನದಲ್ಲಿ ಕಂಡುಬಂದವು. ವರ್ಣಚಿತ್ರ, ಶಿಲ್ಪ ಮತ್ತು ಪ್ರತಿಷ್ಠಾಪನಾ ಕಲಾಕೃತಿಗಳು ಪ್ರದರ್ಶಿಸಲ್ಪಟ್ಟಿದ್ದವು. ಕೆಲವೊಂದು ಕಲಾಕೃತಿಗಳು ಕಥೆ ಹೇಳುತ್ತಿದ್ದವು. ಇನ್ನು ಕೆಲವು ಕಲಾಕೃತಿಗಳು ಕಾಲ್ಪನಿಕ, ಭ್ರಮಾತ್ಮಕ ನಿವಿನಿಂದ ಕೂಡಿತ್ತು. ಬೆರಳೆಣಿಕೆಯಷ್ಟು ಕಲಾಕೃತಿಗಳ ಆಶಯ ಖಂಡಿತವಾಗಿಯೂ ಹೃದಯಸ್ಪರ್ಶಿ ಆಗಿದ್ದವು.
ಬೆಂಗಳೂರಿನಲ್ಲಿ ವಾರಕ್ಕೆರಡು ಕಲಾಪ್ರದರ್ಶನಗಳು ಉದ್ಘಾಟನೆಗೊಳ್ಳುತ್ತಿರುವ ಈ ಸ್ಪರ್ಧಾತ್ಮಕ ಸಂದರ್ಭದಲ್ಲಿ ” ಹೊಯ್ಸಳ ಕುಂಚಕಲಾ ದರ್ಶನ ” ಕಲಾಪ್ರದರ್ಶನದಲ್ಲಿ ಪಾಲ್ಗೊಂಡಿರುವ ಕಲಾವಿದರು ಒಟ್ಟಾರೆ ಕಲಾಪ್ರದರ್ಶನವನ್ನು ಇನ್ನಷ್ಟು ಅರ್ಥಪೂರ್ಣಗೊಳಿಸಬಹುದಿತ್ತು. ಈ ಎಲ್ಲಾ ಅವಕಾಶಗಳು ಇದ್ದವು. ಕ್ರಿಯಾಶೀಲ ಅಭಿವ್ಯಕ್ತಿಗೆ ಉತ್ತಮ ವೇದಿಕೆಯೂ ಇದಾಗಿತ್ತು. ಮುಂಬರುವ ಪ್ರಯತ್ನದಲ್ಲಿ ಇವೆಲ್ಲವನ್ನೂ ನಿರೀಕ್ಷಿಸೋಣ.
ಕಲಾಪ್ರದರ್ಶನದಲ್ಲಿ ಪಾಲ್ಗೊಂಡಿರುವ ಎಲ್ಲರಿಗೂ ಅಭಿನಂದನೆಗಳು, ಶುಭವಾಗಲಿ. Congratulations and Best wishes 💐. ಸ್ನೇಹಿತರೆ, ಕಲಾಪ್ರದರ್ಶನ ಜೂನ್ 30ರಂದು ಸಂಪನ್ನಗೊಳ್ಳಲಿದೆ. ಬಿಡುವು ಮಾಡಿಕೊಂಡು ಹೋಗಿ ಬನ್ನಿ.

 

 


Share This

Leave a Reply

Your email address will not be published. Required fields are marked *