• ಬಿಕಾನೆರ್ ಹೌಸ್ ನಲ್ಲಿ ವಿಭಿನ್ನ ಪ್ರದರ್ಶನ
ತಮ್ಮದೇ ಆದ ವಿಭಿನ್ನ ಚಿಂತನೆ, ಕಲಾಕೃತಿಗಳ ಮೂಲಕ ಗುರುತಿಸಿಕೊಂಡಿರುವ ಶಿಲ್ಪಾ ಗುಪ್ತಾ ಅವರ ಪ್ರತಿಷ್ಠಾಪನಾ (installation art) ಕಲಾಕೃತಿಗಳು ಮತ್ತು ರೇಖಾ ಚಿತ್ರಗಳ ಪ್ರದರ್ಶನವು ನವದೆಹಲಿಯ ಬಿಕಾನೆರ್ ಹೌಸ್ ಗ್ಯಾಲರಿಯಲ್ಲಿ ಪ್ರದರ್ಶಿಸಲ್ಪಟ್ಟಿವೆ. ತಮ್ಮ ಎಂದಿನ ಪ್ರತಿಷ್ಠಾಪನಾ ಶೈಲಿಯನ್ನೇ ಮುಂದುವರಿಸಿದ್ದಾರೆ.
ವದೇಹ್ರಾ ಗ್ಯಾಲರಿ ಸಹಯೋಗದಲ್ಲಿ ಆಯೋಜನೆಯಾಗಿರುವ ಈ ಕಲಾಪ್ರದರ್ಶನ ವೀಕ್ಷಕರ ಮನ ನಾಟುವಲ್ಲಿ ತುಸು ಸಮಯ ಬೇಕಾದೀತು. ಪರಿಕಲ್ಪನಾ ಕಲೆ(conceptual art)ಯ ಭಾಗವೇ ಇದಾಗಿದ್ದರಿಂದ ವೀಕ್ಷಕನಿಗೆ ಕಲಾಕೃತಿಗಳ ಸಂದೇಶ ತಲುಪಿಸುವುದು ಮುಖ್ಯವೆನಿಸಬಹುದು. ಈ ಜಾಗೃತೆ ಇಟ್ಟುಕೊಳ್ಳಬೇಕಾದ ಬದ್ಧತೆ ಕಲಾವಿದ ಹೊಂದಿರಬೇಕಾದುದು ಮುಖ್ಯವೆನಿಸುತ್ತದೆ. ಶಿಲ್ಪಾ ಗುಪ್ತಾ ಅವರ ಕೆಲವು ಕಲಾಕೃತಿಗಳಲ್ಲಿ ಈ ಸೂಕ್ಷ್ಮತೆ ಇದೆ. ಆದರೆ ಕೆಲವು ಕಲಾಕೃತಿಗಳಲ್ಲಿ ಇದನ್ನು ನಿರೀಕ್ಷಿಸಲು ಸಾಧ್ಯವಾಗುತ್ತಿಲ್ಲ. ಉಳಿದಂತೆ ಬಹಳ ವಿಭಿನ್ಮವೆನಿಸುವ, ವೃತ್ತಿಪರವಾದ ಪ್ರದರ್ಶನ ಇದಾಗಿದೆ.
