ಮುಂಬೈನಲ್ಲೂ ಇಂಡಿಯಾ ಆರ್ಟ್ ಫೇರ್!

Share This

  • ಫೆಬ್ರವರಿಯಲ್ಲಿ ದೆಹಲಿ, ನವೆಂಬರ್‌ನಲ್ಲಿ ಮುಂಬೈ
  • 16ನೇ ಆವೃತ್ತಿಯಲ್ಲಿ 116 ಪ್ರದರ್ಶಕರು ಭಾಗಿ

ಬರೋಬ್ಬರಿ 116 ಪ್ರದರ್ಶಕರಿಂದ ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ. ಇವುಗಳಲ್ಲಿ 77 ಗ್ಯಾಲರಿಗಳು, 25 ಪ್ರಮುಖ ಸಂಘ-ಸಂಸ್ಥೆಗಳು!

ಹೌದು, ಏಷ್ಯಾದ ಅತ್ಯಂತ ಪ್ರತಿಷ್ಠಿತ ಕಲಾಪ್ರದರ್ಶನಗಳಲ್ಲಿ ಒಂದಾದ ಇಂಡಿಯಾ ಆಟ್ ಫೇರ್ (India Art Fair) 16ನೇ ಆವೃತ್ತಿಗೆ ಸಿದ್ಧತೆ ಜೋರಾಗಿದೆ. 2025ರ ಫೆಬ್ರವರಿ 6ರಿಂದ 9ರ ತನಕ ನವದೆಹಲಿಯ ಎನ್‌ಎಸ್‌ಐಸಿ (NSIC) ಪ್ರದರ್ಶನ ಮೈದಾನದಲ್ಲಿ ನಡೆಯಲಿರುವ ಈ ಕಲಾಪ್ರದರ್ಶನ ಈ ವರ್ಷ ಇನ್ನಷ್ಟು ವಿಶೇಷತೆಗಳಿಂದ ಕೂಡಿರುತ್ತದೆ ಎಂದು ಇಂಡಿಯಾ ಆರ್ಟ್ ಫೇರ್ ನಿರ್ದೇಶಕ ಜಯಾ ಅಶೋಕನ್ ಹೇಳಿಕೊಂಡಿದ್ದಾರೆ. ಎಂದಿನಂತೆ ಬಿಎಂಡಬ್ಲ್ಯೂ ಇಂಡಿಯಾ (BMW India) ಪ್ರಾಯೋಜಕತ್ವದಲ್ಲಿ ಪ್ರದರ್ಶನ ಆಯೋಜನೆಗೊಳ್ಳಲಿದೆ ಎಂದಿದ್ದಾರೆ.

 

ಇನ್ನೊಂದು ಗಮನಾರ್ಹ ಸಂಗತಿ ಏನೆಂದರೆ ಇದೇ ಮೊದಲ ಬಾರಿಗೆ ಮುಂಬೈನಲ್ಲಿ ಇಂಡಿಯಾ ಆರ್ಟ್ ಫೇರ್ ಕಂಟೆಂಪರರಿ (India Art Fair contemporary) ಪ್ರದರ್ಶನ ಆಯೋಜನೆಗೊಳ್ಳುತ್ತಿದೆ. ಜಿಯೋ ವರ್ಲ್ಡ್ ಗಾರ್ಡನ್ ಆವರಣದಲ್ಲಿ 2025ರ ನವೆಂಬರ್ 13ರಿಂದ 16ರ ತನಕ ನಡೆಯಲಿದೆ. 50ರಿಂದ 70 ಪ್ರದರ್ಶಕರು ಇರಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.

 

ಅಂತಾರಾಷ್ಟ್ರೀಯ ಗ್ಯಾಲರಿಗಳಾದ Carpenters Workshop Gallery, David Zwirner, Galleria Continua, Lisson Gallery  ಸೇರಿದಂತೆ ಭಾರತದ ಪ್ರಮುಖ ಗ್ಯಾಲರಿಗಳಾದ Nature Morte, Chemould Prescott Road, Experimenter, DAG and Jhaveri Contemporary 16ನೇ ಆವೃತ್ತಿಯಲ್ಲಿ ಕಾಣಿಸಿಕೊಳ್ಳಲಿವೆ. 2024ರ ಆವೃತ್ತಿಯಲ್ಲಿ ಮೊದಲ ಬಾರಿಗೆ ಪಾಲ್ಗೊಂಡು ಯಶಸ್ವಿ ಪ್ರದರ್ಶನಕ್ಕೆ ಸಾಕ್ಷಿಯಾಗಿರುವ ಭಾರತದ ಪ್ರಮುಖ ವಿನ್ಯಾಸ (design studios) ಸ್ಟುಡಿಯೋಗಳು ಪಾಲ್ಗೊಳ್ಳಲಿವೆ. ಇದಲ್ಲದೆ ಕಾರ್ಪೋರೆಟ್ ಮಟ್ಟದ ಪ್ರದರ್ಶಕರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಆಯೋಜಕರು ಹೇಳಿಕೊಂಡಿದ್ದಾರೆ.

 

“ದಕ್ಷಿಣ ಏಷ್ಯಾ ಮಟ್ಟದಲ್ಲಿ ಇಂಡಿಯಾ ಆರ್ಟ್ ಫೇರ್ ಅಗ್ರಸ್ಥಾನದಲ್ಲಿ ನಿಲ್ಲುವ ಪ್ರದರ್ಶನವಾಗಿದೆ. ಮುಂಬರುವ ಆವೃತ್ತಿಯಲ್ಲಿ ವಿಶ್ವದ ಮುಂಚೂಣಿ ಕಲಾವಿದರ ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ. ಆಧುನಿಕ ಮತ್ತು ಸಮಕಾಲೀನ ಕಲಾಕೃತಿಗಳ ವೀಕ್ಷಣೆಗೆ ಇಂಡಿಯಾ ಆರ್ಟ್ ಫೇರ್ ಒಂದು ಅತ್ಯುತ್ತಮ ವೇದಿಕೆಯಾಗಿದೆ. ಪ್ರಪಂಚಾದ್ಯಂತ ಸಮಕಾಲೀನ ಕಲೆಗೆ ಹೆಚ್ಚೆಚ್ಚು ಮಾನ್ಯತೆ ಸಿಗುತ್ತಿದ್ದು, ಇಂಡಿಯಾ ಆರ್ಟ್ ಫೇರ್ ಕೂಡ ಒಂದು ಪ್ರಬಲ ಧ್ವನಿಯಾಗಿ, ಪ್ರದರ್ಶನವಾಗಿ ಗುರುತಿಸಿಕೊಳ್ಳುತ್ತದೆನ್ನುವ ವಿಶ್ವಾಸವಿದೆ. ಈ ಮೂಲಕ ಇಡೀ ಜಗತ್ತೇ ಭಾರತದತ್ತ ತಿರುಗಿ ನೋಡುವಂತೆ ಆಗಲಿದೆ. ಇದರೊಂದಿಗೆ ಇನ್ನಷ್ಟು ಗುಣಮಟ್ಟದ, ಜನಪ್ರಿಯ ಕಲಾಪ್ರದರ್ಶನವಾಗಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವ ವಿಶ್ವಾಸ ಹೊಂದಿದ್ದೇವೆ” ಎಂದಿದ್ದಾರೆ ಜಯಾ ಅಶೋಕನ್.

 


Share This

Leave a Reply

Your email address will not be published. Required fields are marked *