ಹರಿವ ಜಲವರ್ಣದಲಿ ‘ನಮ್ಮ ಹಂಪಿ’ ಕಂಪು!

Share This

• ವೈಭವದ ಕಥೆ ತೆರೆದಿಟ್ಟ ಲೋಕೇಶ್, ಭೈರವ
‘ನಮ್ಮ ಹಂಪಿ’ !
ಕೇಳಲಿಕ್ಕೇ ಒಂದು ಖುಷಿ. ನಮ್ಮದೆನ್ನುವ ಹೆಮ್ಮೆ. ಅಲ್ಲಿಯ ಒಂದೊಂದು ಕಲ್ಲುಗಳೂ ಶಿಲ್ಪವಾಗಿ ಕಾಣಿಸುತ್ತವೆ. ಮೈನವಿರೇಳಿಸುತ್ತವೆ. ಮತ್ತೆ ಮತ್ತೆ ನೋಡಬೇಕೆನ್ನುವ ಕುತೂಹಲ ಮೂಡಿಸುತ್ತವೆ. ಅದೆಂತಹ ವೈಭವ ಅಲ್ಲಿತ್ತೆನ್ನುವುದನ್ನು ಊಹಿಸಿಕೊಳ್ಳಲಿಕ್ಕೂ ಆಗದು.
ಹೌದು ಇದು ನಮ್ಮ ಹಂಪಿಯ ಚಿತ್ತಾರ. ಯುವ ಕಲಾವಿದರಾದ ಲೋಕೇಶ್ ಆರ್. Lokesh Lokee Lokee ಮತ್ತು ಭೈರವ ಬಿ.ಎಂ. ಅವರ ಜಲವರ್ಣ ಕಲಾಕೃತಿಗಳ ‘ನಮ್ಮ ಹಂಪಿ’ ಕಲಾಪ್ರದರ್ಶನ ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ ಗ್ಯಾಲರಿ 3ರಲ್ಲಿ ನಡೆಯುತ್ತಿದೆ.
ಹಂಪಿ ಎಷ್ಟು ಸ್ಫೂರ್ತಿ ಎನ್ನುವುದನ್ನು ಪ್ರದರ್ಶಿತ ಕಲಾಕೃತಿಗಳಲ್ಲಿ ಕಾಣಬಹುದು. ವರ್ಣ ಸಂಯೋಜನೆಯಲ್ಲಿ ಈ ಇಬ್ಬರು ಕಲಾವಿದರ ಕಲಾಕೃತಿಗಳನ್ನು ಗುರುತಿಸುವುದು ತುಸು ಕಷ್ಟಸಾಧ್ಯವೆನಿಸಿಸಬಹುದು. ಆದರೆ, ಅವರ ಶ್ರದ್ಧೆ, ಛಲ, ಪ್ರಯತ್ನ ಶ್ಲಾಘನೀಯ. ಹಂಪಿಯ ಸೊಬಗನ್ನು ಬಹಳ ಶಿಸ್ತಿನಿಂದ ಹಿಡಿದಿಡುವ ಪ್ರಯತ್ನ ಮಾಡಿದ್ದಾರೆ. ಜಲವರ್ಣದಲ್ಲಿ ಹಿಡಿತ ಸಾಧಿಸಿಕೊಂಡಿರುವ ಲೋಕೇಶ್ ಮತ್ತು ಭೈರವ ಗಮನ ಸೆಳೆಯುವಂತಹ ಕಲಾಕೃತಿಗಳನ್ನು ಪ್ರದರ್ಶಿಸಿದ್ದಾರೆ. ಪ್ರಯೋಗಶೀಲತೆ ರೂಢಿಸಿಕೊಂಡಿರುವ ಇಬ್ಬರು ಕಲಾವಿದರು ಹೊಸತನದ ಹುಡುಕಾಟದಲ್ಲಿ ಚಿಂತನಶೀಲರಾಗಿದ್ದಾರೆ. ಅವರ ಮುಂದಿನ ಪ್ರಯತ್ನ ಹೇಗೆ ಸಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
ಸ್ನೇಹಿತರೆ, ಈ ಕಲಾಪ್ರದರ್ಶನ ಇಂದು ಭಾನುವಾರ ಸಂಪನ್ನಗೊಳ್ಳಲಿದೆ. ಬಿಡುವು ಮಾಡಿಕೊಂಡು ಹೋಗಿಬನ್ನಿ.
ಇಬ್ಬರು ಕಲಾವಿದರಿಗೆ ಅಭಿನಂದನೆಗಳು 💐

Share This

Leave a Reply

Your email address will not be published. Required fields are marked *