ಹೆಜ್ಜೆ ಮೇಲೊಂದು ಹೆಜ್ಜೆ!
ವಯ್ಯಾರದಲ್ಲಿ ಹೆಜ್ಜೆ ಹಾಕುತ್ತಿದ್ದರೆ ಆ ನಡಿಗೆ ದೇವ ಲೋಕದ ಅಪ್ಸರೆಯರನ್ನು ನೆನಪಿಸುತ್ತದೆ. ಅದರಲ್ಲೂ ನೆತ್ತಿಯ ಮೇಲಿನ ಕೇಸರಿ ಮಿಶ್ರಿತ ಕೆಂಪು ಬಣ್ಣ ಸಿಂದೂರ ಲೆಪಿಸಿಕೊಂಡಂತೆ ಇರುತ್ತದೆ.
ಹಾವಿನಂತೆ ಬಳುಕುವ ಕತ್ತು, ಗುಲಾಬಿ ಮೈ ಬಣ್ಣ, ರೆಕ್ಕೆಯ ಮೇಲಿನ ಕಂದು ಮಿಶ್ರಿತ ಕಪ್ಪು ಪಟ್ಟಿ ನಿಜಕ್ಕೂ ವರ್ಣರಂಜಿತ. ಹಳದಿ ಕೊಕ್ಕು ಸಾಕಷ್ಟು ಬಲಿಷ್ಠ. ಇಂಥ ಅತ್ಯಾಕರ್ಷಕ ಹಕ್ಕಿ ಯಾವುದೆಂಬ ಕುತೂಹಲ ನಿಮಗಿರಬಹುದು. ನೆನಪಿಸಿಕೊಳ್ಳಿ, ‘ಸಿಂದೂರ ಕೊಕ್ಕರೆ’ ‘ಬಣ್ಣದ ಕೊಕ್ಕರೆ’ ( Painted Stork ) ಯ ಪರಿಚಯ ನಿಮಗಿದೆಯೇ?
ಸಾಮಾನ್ಯವಾಗಿ ಕೊಕ್ಕರೆ ಎಂದಾಕ್ಷಣ ಬೆಳ್ಳಗಿರುತ್ತದೆ ಎನ್ನುವ ನಂಬಿಕೆ ಎಲ್ಲರಲ್ಲಿರುತ್ತದೆ. ಆದರೆ ಬಣ್ಣ ಬಣ್ಣದಿಂದಿರುವ ಕೊಕ್ಕರೆಗಳೂ ಇವೆ. ಕೊಕ್ಕರೆ ಬೆಳ್ಳೂರು, ರಂಗನತಿಟ್ಟಿಗೆ ಭೇಟಿ ನೀಡಿದವರಿಗೆ ಈ ಹಕ್ಕಿಯ ಪರಿಚಯ ಆಗದೆ ಇರಲು ಸಾಧ್ಯವಿಲ್ಲ. ಸಾಮಾನ್ಯವಾಗಿ ಈ ಹಕ್ಕಿ ಇಲ್ಲಿ ವರ್ಷದ ಎಲ್ಲಾ ದಿನಗಳಲ್ಲೂ ಇದ್ದೇ ಇರುತ್ತದೆ.
ಮನುಷ್ಯನಂತೆ ಈ ಸಿಂದೂರ ಕೊಕ್ಕರೆ ಕೂಡ ಸ್ವಾರ್ಥಿ. ತಾನಾಯಿತು ತನ್ನ ಸಂಸಾರವಾಯಿತು ಎಂದುಕೊಂಡೇ ಇರುತ್ತದೆ. ಗುಂಪು ಗುಂಪಾಗಿ ಜೀವಿಸುತ್ತದೆಯಾದರೂ ತಾನು ತಂದ ಆಹಾರವನ್ನು ತನ್ನ ಪಕ್ಕಕ್ಕೇ ಇರುವ ಇನ್ನೊಂದು ಹಕ್ಕಿಯ ಮರಿಗೆ ನೀಡಲು ಬಯಸುವುದಿಲ್ಲ. ಹಾಗಂತ ಕೆಡುಕು ಉಂಟು ಮಾಡುವ ಬುದ್ಧಿ ಇದರದ್ದಲ್ಲ.
ಅಂದಾಜು 25 ರಿಂದ 30 ವರ್ಷಗಳ ಕಾಲ ಬದುಕಿರುವ ಸಿಂದೂರ ಕೊಕ್ಕರೆ ಮಾರ್ಚ್ ತಿಂಗಳಿಂದ ಜೂನ್ ತಿಂಗಳಾವಧಿಯಲ್ಲಿ ಸಂತಾನೋತ್ಪತ್ತಿ ಕಾರ್ಯದಲ್ಲಿ ತೊಡಗಿಕೊಳ್ಳುತ್ತದೆ. 2 ರಿಂದ 5 ಮೊಟ್ಟೆಗಳನ್ನಿಟ್ಟು ಮರಿಮಾಡುತ್ತದೆ.

ಸಾಮಾನ್ಯವಾಗಿ ಈ ಹಕ್ಕಿಗಳನ್ನು ನೀರು ಇರುವ ತಾಣದಲ್ಲಿ ಮಾತ್ರ ಕಾಣಲು ಸಾಧ್ಯ. ತನಗೆ ಖುಷಿಯಾದಾಗಲೆಲ್ಲ ಕ್ರಾಕ್.. ಕ್ರಾಕ್.. ಎಂದು ಕೂಗುತ್ತಿರುತ್ತದೆ. ಮೃದುವಾದ ಕಡ್ಡಿ ಮತ್ತು ಹುಲ್ಲುಗಳನ್ನು ತಂದು ಮರಗಳ ಮೇಲೆ ಗೂಡು ಕಟ್ಟಿಕೊಳ್ಳುತ್ತದೆ. ಮೀನು, ಕಪ್ಪೆ, ಹಲ್ಲಿ, ಕೀಟಗಳೇ ಈ ಹಕ್ಕಿಯ ಪ್ರಮುಖ ಆಹಾರ.
ಚಿತ್ರ: ಅಂತರ್ಜಾಲ