ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮನ ವಿಗ್ರಹ ಪ್ರಾಣ ಪ್ರತಿಷ್ಠಾಪನೆಯಲ್ಲಿ ಬೆಂಗಳೂರಿನ ದೀಪಿಕಾ ಲೇಔಟ್ ನಲ್ಲಿ ” ಶ್ರೀ ಅಯೋಧ್ಯಾ ರಾಮ ವರ್ಣ ವೈಭವ ” ಕಲಾ ಶಿಬಿರ ನಡೆಯಿತು.
ರಾಮಾಯಣದ ಕಥೆಗಳನ್ನೇ ಆದರಿಸಿ ಕಲಾಕೃತಿಗಳನ್ನು ರಚಿಸಿರುವುದು ಈ ಶಿಬಿರದ ವಿಶೇಷವಾಗಿತ್ತು.
ಶೈಲೇಶ್ ಪಟವರ್ಧನ್ ಅವರ ನಿರ್ದೇಶನದಲ್ಲಿ ಕಲಾವಿದರುಗಳಾದ ಬಿ.ಎನ್.ಹರಿಪ್ರಸಾದ್, ವಿಜಯ್ ಎಸ್ ನಾಗ್ವೇಕರ್, ಸಂಜಯ ಕೇತನ್, ಕಾಳಿದಾಸ್ ಸೋನಾರ್, ನವೀನ್ ಬಿ. ಪತ್ತಾರ್, ಸತೀಶ್ ಕೆ.ಆರ್., ಎಂ. ರಮೇಶ್, ಲೋಕೇಶ್ ಆರ್., ಶೀಲವಂತ ಯಾದಗಿರಿ, ವಿಶ್ವಾಸ್ ಎಂ., ರಾಮಕೃಷ್ಣ ನಾಯಕ್, ಅರುಣ್ ಕಾಡಾಪುರೆ ಅವರು ಕಲಾಶಿಬಿರದಲ್ಲಿ ಪಾಲ್ಗೊಂಡಿದ್ದರು.
ಶ್ರೀಮತಿ & ಶ್ರೀ ಲಕ್ಷ್ಮೀ ಅನೆಲ್ ಕುಮಾರ್ ಎಂ.ಕೆ. ಹಾಗೂ ಪುನಶ್ಚೇತನ ಸಂಸ್ಥೆ ಈ ಕಲಾಶಿಬಿರವನ್ನು ಆಯೋಜಿಸಿತ್ತು. ಜ.19ರಂದು ಆರಂಭಗೊಂಡು ಜ.21 ರಂದು ಸಂಪನ್ನಗೊಂಡಿತು.
ಹಿರಿಯರಾದ ಚಂದ್ರಶೇಖರ ಹಿರೇಮಠ ಅವರು, ಕರ್ನಾಟಕ ಹೈಕೋರ್ಟ್ ನ್ಯಾಯವಾದಿ ಆರ್.ಎಲ್.ಎನ್ ಮೂರ್ತಿ ಹಾಗೂ ಹಿರಿಯ ಕಲಾವಿದರು, ವೆಂಕಟಪ್ಪ ಪ್ರಶಸ್ತಿ ಪುರಸ್ಕೃತರು ಆದ ಚಿ.ಸು.ಕೃಷ್ಣ ಸೆಟ್ಟಿ ಅವರು, ಕಾರ್ಯನಿರ್ವಾಹಕ ಟ್ರಸ್ಟಿ ಮೋಹನ್ ಜಿ. ನಾಯಕ್ ಅವರು ಶಿಬಿರಕ್ಕೆ ಸಾಕ್ಷಿಯಾದರು. ಶಿಬಿರದಲ್ಲಿ ರಚನೆಯಾದ ಕಲಾಕೃತಿಗಳ ಬಗ್ಗೆ ಸಂತಸ ವ್ಯಕ್ತಪಡಿಸಿದರು.