- ಭಾರತದಲ್ಲಿ ಇದೆ ಮೊದಲ ಬಾರಿಗೆ ವೀಕ್ಷಣೆಗೆ ಅವಕಾಶ
ವಿಶ್ವ ಖ್ಯಾತಿಯ ಕಲಾವಿದ ಸಾಲ್ವಡಾರ್ ಡಾಲಿ ಭಾರತಕ್ಕೆ ಭೇಟಿ ನೀಡದಿದ್ದರೂ ಅವರ ಕಲಾಕೃತಿಗಳು ಈಗ ನವದೆಹಲಿಯ ಇಂಡಿಯಾ ಹೆಬಿಟೇಟ್ ಸೆಂಟರ್ (India Habitat Centre) ಗ್ಯಾಲರಿಯಲ್ಲಿ ಪ್ರದರ್ಶಿಸಲ್ಪಟ್ಟಿತ್ತು. ಫೆ.7ರಿಂದ 12ರ ತನಕ ಈ ಕಲಾಪ್ರದರ್ಶನ ಆಯೋಜನೆಯಾಗಿತ್ತು.
ಬಹುಶಃ ಹಿಂದೆಂದೂ ಈ ಪ್ರಮಾಣದಲ್ಲಿ ಡಾಲಿಯ ಕಲಾಕೃತಿಗಳು ಭಾರತದಲ್ಲಿ ಪ್ರದರ್ಶನ ಆಗಿರಲಿಕ್ಕಿಲ್ಲ. ಡಾಲಿ ರಚಿಸಿದ ಮುದ್ರಣ ಕಲೆಯ ಸಾಕಷ್ಟು ಕಲಾಕೃತಿಗಳು ಪ್ರದರ್ಶನದಲ್ಲಿ ಇದ್ದವು. ಸೆರೆಯಲಿಸಂ ಸಿದ್ದಾಂತಕ್ಕೆ ಆಕರ್ಷಿತರಾಗಿ, ಇದನ್ನೇ ಪ್ರತಿಪಾದಿಸಿಕೊಂಡು ಕಲಾಕೃತಿಗಳನ್ನು ರಚಿಸಿದ ಡಾಲಿಯ ಚಿಂತನೆಗಳು ವಿಶಿಷ್ಟ ಅನಿಸುತ್ತವೆ. ಕ್ಯುರೆಟರ್ Christine Argillet ಅವರ ಸಂಗ್ರಹದ ಕಲಾಕೃತಿಗಳು ಇವಾಗಿದ್ದವು.