ರಾಜಧಾನಿಯಲ್ಲಿ ಆಕರ್ಷಿಸಿದ ‘ಪ್ರಜಾಪ್ರಭುತ್ವ ಸಂಕೀರ್ಣತೆ’

Share This

  • ಆರ್ಟ್ ಹೆರಿಟೇಜ್ನಲ್ಲಿ ಗಮನಾರ್ಹ ಕಲಾಪ್ರದರ್ಶನ
  • ಅನಿತಾ ದುಬೆ ಅವರಿಂದ ಅತ್ಯಂತ ಜಾಣ್ಮೆಯ ಕ್ಯುರೇಶನ್

‘ಪ್ರಜಾಪ್ರಭುತ್ವದ ಸಂಕೀರ್ಣತೆ’ / The Complexity of Democracy!
ಉತ್ತಮ ಕಲಾಕೃತಿಗಳನ್ನು ಒಳಗೊಂಡಿದ್ದ ಸಮೂಹ ಕಲಾಪ್ರದರ್ಶನ. ಇದು ಯಾವುದೇ ಸಮಾಜದ ವಿಚಾರಗಳು ಅನಿಸಲೇ ಇಲ್ಲ. ಎಲ್ಲವೂ ನಾವು ಬದುಕಿ ಬಾಳುತ್ತಿರುವ ನಮ್ಮದೆ ಸಮಾಜದ ಆಗು-ಹೋಗುಗಳು ಅನಿಸುವಷ್ಟು ಸುಶ್ರಾವ್ಯವೆನಿಸುವ ದೃಶ್ಯಕಾವ್ಯವಾಗಿತ್ತು ಈ ಕಲಾಪ್ರದರ್ಶನ. ಒಂದೊಂದು ಕಲಾಕೃತಿಯೂ ಒಂದೊಂದು ಸಂದೇಶವನ್ನು ನೀಡುವಂತಿತ್ತು. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಹಿಡಿದ ಕನ್ನಡಿಯಂತಿತ್ತು. ಕಲಾವಿದರು ವಿಭಿನ್ನ ನೆಲೆಯಲ್ಲಿ ನಿಂತು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಮಾಧ್ಯಮಗಳ ಆಯ್ಕೆಯಲ್ಲಿ ಅಳೆದು ತೂಗಿ ನಿರ್ಧರಿಸಿ ರಚಿಸಿದಂತಿತ್ತು. ಅತ್ಯಂತ ಜಾಣ್ಮೆಯ ಕ್ಯುರೇಶನ್ ಇದಾಗಿತ್ತು.

ನವದೆಹಲಿಯ ತ್ರಿವೇಣಿ ಕಲಾ ಸಂಗಮದಲ್ಲಿರುವ ಆರ್ಟ್ ಹೆರಿಟೇಜ್ ಗ್ಯಾಲರಿಯಲ್ಲಿ ಜನವರಿ 16ರಂದು ಆರಂಭವಾಗಿರುವ ಈ ಕಲಾಪ್ರದರ್ಶನ ಮಾರ್ಚ್ 8ರ ತನಕ ನಡೆಯಲಿದೆ. ಕ್ಯುರೇಟರ್ ಅನಿತಾ ದುಬೆ ಅವರು ಕಲಾಕೃತಿಗಳ ಆಯ್ಕೆ ಮತ್ತು ಪ್ರಸ್ತುತಿಯಲ್ಲಿ ಶಿಸ್ತು ಕಾಪಾಡಿಕೊಂಡಿರುವುದು ಕಂಡುಬಂತು. ಅದಿತಿ ಅಗರ್ವಾಲ್, ಬಸಿಸ್ತ್ ಕುಮಾರ್, ದೀಪಕ್ ಕುಮಾರ್, ದಿಗ್ವಿಜಯಿ ಖತುವಾ, ಹರ್ಮೀತ್ ಸಿಂಗ್ ರತನ್, ಜಂಘೀ ಮನ್, ಪ್ರಮೋದ್ ಜೈಸ್ವಾಲ್, ರಾಜೇಶ್ ಕುಮಾರ್ ಸಿಂಗ್, ರಿಚಾ ಆರ್ಯಾ, ರಿತಿಕಾ ಶರ್ಮ, ಶಾಂಭವಿ ಸಿಂಗ್, ಷಣ್ಮುಖ ತಮಡಾ, ಶೇಖ್ ಹಿಫ್ಜುಲ್ ಕಬೀರ್, ಶ್ವೇತಾ ರೈ ಮತ್ತು ಸುನಿಲ್ ಯಾದವ್ ಅವರ ಕಲಾಕೃತಿಗಳು ಪ್ರದರ್ಶನದಲ್ಲಿದ್ದವು.

ಹರ್ಮೀತ್ ಸಿಂಗ್ ರತನ್ ಅವರ Hands of Time ಶೀರ್ಷಿಕೆಯ ಪ್ರತಿಷ್ಠಾಪನಾ ಕಲಾಕೃತಿ, ಸುನಿಲ್ ಯಾದವ್ ಅವರ Unseen Reality ಶೀರ್ಷಿಕೆಯ ಮಿಶ್ರ ಮಾಧ್ಯಮದ ಕಲಾಕೃತಿ, ಬಸಿಸ್ತ್ ಕುಮಾರ್ ಅವರ Inspection – 1 ಶೀರ್ಷಿಕೆಯ ತೈಲವರ್ಣ ಕಲಾಕೃತಿ, ದಿಗ್ವಿಜಯಿ ಖತುವಾ ಅವರ Oxygen In The Machine ಶೀರ್ಷಿಕೆಯ ಗ್ರಾಫೈಟ್ ಪೆನ್ಸಿಲ್ ಮತ್ತು ಜಲವರ್ಣ ಕಲಾಕೃತಿ, ದೀಪಕ್ ಕುಮಾರ್ ಅವರ Refused Habitat ಶೀರ್ಷಿಕೆಯ ತೈಲ ಮತ್ತು ಅಕ್ರಲಿಕ್ ವರ್ಣ ಕಲಾಕೃತಿ ವಿಭಿನ್ನ ಚಿಂತನೆಯ ದೃಷ್ಟಿಯಿಂದ ಆಕರ್ಷಿಸಿದವು. ಕಲಾಪ್ರದರ್ಶನ ಇನ್ನಷ್ಟು ದಿನಗಳ ಕಾಲ ವೀಕ್ಷಣೆಗೆ ಲಭ್ಯವಿದೆ.

 

 

 


Share This

Leave a Reply

Your email address will not be published. Required fields are marked *