ಜಲವರ್ಣ ಮಾಸಕ್ಕೆ ಕಲಾವಿದರಿಂದ ಪ್ರದರ್ಶನ

Share This

• ಭಾನುವಾರ ಸಂಪನ್ನ • ಗಮನ ಸೆಳೆದ ಚೇತನ್, ನೀಲಾಂಜನ್, ನಿಶಾದ್
“2025 ಜುಲೈ” ಇದು ವಿಶ್ವ ಜಲವರ್ಣ ಮಾಸ (World Watercolour Month-2025). 31ದಿನಗಳ ಈ ತಿಂಗಳನ್ನು ವಿದ್ಯಾರ್ಥಿಗಳ ಕಲಾ ಕನಸಿನ ಮಾಸವನ್ನಾಗಿಸುವ ಅಥವಾ ಅವರ ಕಲಾಸಕ್ತಿಯನ್ನು ವೃದ್ಧಿಸುವ ಉದ್ದೇಶದೊಂದಿಗೆ ಆರಂಭಿಸಲಾದ ಈ ಕಾರ್ಯಕ್ರಮಕ್ಕೆ ಇದೀಗ ದಶಕದ ಸಂಭ್ರಮ.
ಇಂಥದ್ದೊಂದು ಸುಸಂದರ್ಭದಲ್ಲಿ ಇಂದು, ಜುಲೈ ತಿಂಗಳಿನ ಎರಡನೇ ದಿನದಂದು ಕರ್ನಾಟಕ ಚಿತ್ರಕಲಾ ಪರಿಷತ್ ಗ್ಯಾಲರಿಯಲ್ಲಿ ಒಂದಿಷ್ಟು ಜಲವರ್ಣದ ಕಲಾಕೃತಿಗಳನ್ನು ನೋಡುವ ಅವಕಾಶ ದೊರಕಿತು.
ಜಲವರ್ಣದ ಬಗ್ಗೆ ವಿಶೇಷ ಆಸಕ್ತಿ ಬೆಳೆಸಿಕೊಂಡು ನಿರಂತರ ಅಭ್ಯಾಸದಲ್ಲಿ ತೊಡಗಿಕೊಂಡಿರುವ ಮೂವರು ಕಲಾವಿದರ ಒಂದಿಷ್ಟು ಕಲಾಕೃತಿಗಳು ಗಮನ ಸೆಳೆದವು. ಚೇತನ್ ಸಿ.ಸದಾಶಿವನ್ Chetan C Sadashivan , ನೀಲಾಂಜನ್ ಗುಹಾ Nilanjan Guha ಮತ್ತು ನಿಶಾದ್ Nishad- ಈ ಮೂವರು ಕಲಾವಿದರ ಕಲಾಕೃತಿಗಳಲ್ಲಿ ಭಿನ್ನವೆನಿಸುವ ಕುಂಚದ ಬೀಸು (strokes) ಕಾಣಿಸಿದವು. ಒಟ್ಟರೆ ಕಲಾಪ್ರದರ್ಶನದಲ್ಲಿ ಮೂವರ ಬದ್ಧತೆ ವಿಶೇಷವೆನಿಸಿತು. ಪ್ರಯತ್ನ ಮುಂದುವರಿದರೆ ಮೂವರೂ ಇನ್ನಷ್ಟು ಸೊಗಸಾದ ಕಲಾಕೃತಿಗಳನ್ನು ಕಲಾಕ್ಷೇತ್ರಕ್ಕೆ ನೀಡಬಲ್ಲರೆನ್ನುವ ಭರವಸೆ ಮೂಡಿಸಿದ್ದಾರೆ.
ಸ್ನೇಹಿತರೆ ಈ ಕಲಾಪ್ರದರ್ಶನ ಭಾನುವಾರ ಜುಲೈ 6ರಂದು ಸಂಪನ್ನಗೊಳ್ಳಲಿದೆ. ಬಿಡುವು ಮಾಡಿಕೊಂಡು ಹೋಗಿಬನ್ನಿ. ಮೂವರೂ ಕಲಾವಿದರಿಗೆ ಅಭಿನಂದನೆಗಳು 💐 ಶುಭವಾಗಲಿ.

 


Share This

Leave a Reply

Your email address will not be published. Required fields are marked *