ಪಹಾರಿ, ಚಿಕಣಿ ಗೋಸ್ವಾಮಿ ಇನ್ನಿಲ್ಲ 

Share This

ಭಾರತೀಯ ಚಿಕಣಿ ಚಿತ್ರಕಲೆ (Indian miniature paintings), ಪಹಾರಿ ಚಿತ್ರಕಲೆ (Pahari Paintings) ಸೇರಿದಂತೆ ಕಲೆಗೆ ಸಂಬಂಧಿಸಿದ ಇಪ್ಪತ್ತೈದಕ್ಕೂ ಹೆಚ್ಚು ಸಂಗ್ರಹ ಯೋಗ್ಯ ಪುಸ್ತಕಗಳನ್ನು ನೀಡಿರುವ ದೇಶದ ಖ್ಯಾತ ಕಲಾ ವಿಮರ್ಶಕ, ಕಲಾ ಇತಿಹಾಸಕಾರ,
‘ ಪದ್ಮಶ್ರೀ, ಪದ್ಮಭೂಷಣ ‘ ಪುರಸ್ಕೃತ ಬ್ರಿಜಿಂದರ್ ನಾಥ್ ಗೋಸ್ವಾಮಿ (Brijinder Nath Goswamy) ಇನ್ನಿಲ್ಲ ಎನ್ನುವುದನ್ನು ಅರಗಿಸಿಕೊಳ್ಳುವುದು ತುಸು ಕಷ್ಟ. ಕಾರಣ ಅವರ ಕೊಡುಗೆ ಅಪಾರ. ಕಲೆ ಮತ್ತು ಸಂಸ್ಕೃತಿಗೆ ಸಂಬಂಧಿಸಿದಂತೆ 25ಕ್ಕೂ ಹೆಚ್ಚು ಪುಸ್ತಕಗಳ ವಾರಸುದಾರರು ಅವರು.
ಹೌದು, ಮೇರು ವ್ಯಕ್ತಿತ್ವದ ಬಿ.ಎನ್.ಗೋಸ್ವಾಮಿ ಅವರು ಶುಕ್ರವಾರ (17-11-2023) ಚಂಡೀಗಢದಲ್ಲಿರುವ ತಮ್ಮ ನಿವಾಸದಲ್ಲಿ ವಿಧಿವಶರಾಗಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಕೆಲದಿನಗಳ ಹಿಂದೆ ಸ್ವಾಶಕೋಶದ ಸೋಂಕು ಕಾಣಿಸಿತ್ತು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಗೋಸ್ವಾಮಿ ಅವರು ಪರಾರಿ ಚಿತ್ರಕಲೆ ಮತ್ತು ಚಿಕಣಿ ಚಿತ್ರಕಲೆಯಲ್ಲಿ ವಿಶೇಷ ಪಾಂಡಿತ್ಯ ಹೊಂದಿದ್ದರು. ಈ ಕಲೆಗಳ ಕುರಿತಾಗಿ ಅನೇಕ ಪುಸ್ತಕಗಳನ್ನೂ ಬರೆದು ಮೆಚ್ಚುಗೆ ಪಡೆದುಕೊಂಡಿದ್ದರು. Sakti Burman THE WONDER OF IT ALL ಸೇರಿದಂತೆ 25ಕ್ಕೂ ಹೆಚ್ಚು ಪುಸ್ತಕಗಳನ್ನು ಕಲಾಕ್ಷೇತ್ರಕ್ಕೆ ನೀಡಿದ್ದಾರೆ.
 
– Essence of Indian Art
– Pahari-Meister: Ho¨fische Malerei aus den Bergen Nord-Indiens
– A Place Apart: Painting in Kutch, 1720-1820
– Masters of Indian Painting
– An Early Document of Indian Art: The Citralaksana of Nagnajit
– Intimate Worlds: Indian Paintings from the Alvin O. Bellak Collection
– Indian Painting in the Sarabhai Foundation
– Pahari Paintings of The Nala – Damayanti Theme
– Shuvaprasanna Black, Brown & the Blue
– Piety and Splendour: Sikh Heritage in Art,
-The Indian Cat: Stories, Paintings, Poetry, and Proverbs
– Spirit of Indian Painting, The: Close Encounters With 101 Great Works 1100-1900 ಹೀಗೆ ಅನೇಕ ಪುಸ್ತಕಗಳು ಇಂದಿನ ಕಲಾ ಇತಿಹಾಸಕಾರರಿಗೆ ದಾರಿದೀಪವಾಗಿವೆ.
ಪಹಾರಿ ಮತ್ತು ಚಿಕಣಿ ಚಿತ್ರಕಲೆಯಲ್ಲಿ ಗೋಸ್ವಾಮಿ ಅವರದ್ದು ಅಪಾರ ಜ್ಞಾನ. 1968ರಲ್ಲಿ ಗೋಸ್ವಾಮಿ ಅವರು ಬರೆದ “Pahar Painting: The Family as the Basis of Style” ಪಂಜಾಬ್‌ನ ಬೆಟ್ಟ ಪ್ರದೇಶದ ಕಲೆಯ ಕುರಿತಾದ ಬರಹವಾಗಿದೆ. Pandit Seu, Nainsukh and Manaku ಕಲಾ ಪರಂಪರೆಯ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ಭಾರತೀಯ ಕಲಾಕ್ಷೇತ್ರಕ್ಕೆ ದೊರಕುವಂತೆ ಮಾಡುವಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ. ಭಾರತದ ಪರಂಪರಾಗತ ಕಲೆಯ ಕುರಿತು ಐದು ಪುಸ್ತಕಗಳನ್ನು ಬರೆದಿದ್ದಾರೆ.
1) Nainsukh of Guler: A Great Indian Painter from a Small Hill-State
2) Pahari Masters: Court Painters of Northern India
3) Painters at the Sikh Court
4) Essence of Indian Art
5) Masters of Indian Painting 1100-1900.
  ಇವು ಆ ಪ್ರಮುಖ ಪುಸ್ತಕಗಳಾಗಿವೆ. ಈ ಐದು ಪುಸ್ತಕಗಳ ಸಹ ಬರಹಗಾರ ಮತ್ತು ಪದ್ಮಶ್ರೀ ಪುರಸ್ಕೃತ ಜರ್ಮನ್ ಇತಿಹಾಸಕಾರ Eberhard Fischer ಜತೆಗೂಡಿ ಅನೇಕ ಕಡೆಗಳಲ್ಲಿ ಪಹಾರಿ ಪ್ರದರ್ಶನ ಏರ್ಪಡಿಸಿ ಜಾಗೃತಿ ಮೂಡಿಸುವಲ್ಲಿಯೂ ಪ್ರಮುಖರೆನಿಸಿಕೊಂಡಿದ್ದಾರೆ. ಹೀಗೆ ಭಾರತೀಯ ಕಲೆ ಮತ್ತು ಸಂಸ್ಕೃತಿಗೆ ಸಂಬಂಧಿಸಿ ಸಾಕಷ್ಟು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಗೋಸ್ವಾಮಿ ಅವರ ಕೊಡುಗೆಯನ್ನೂ ಎಂದೆಂದೂ ಮರೆಯುವಂತಿಲ್ಲ. ಅವರ ನೂರಾರು ಲೇಖನಗಳು ಅಂತಾರಾಷ್ಟ್ರೀಯ ದೈನಿಕಗಳಲ್ಲಿಯೂ ಪ್ರಕಟವಾಗಿವೆ. ಚಂಡೀಗಢ ಲಲಿತಕಲಾ ಅಕಾಡೆಮಿಗಾಗಿ ಅವರು ನಲವತ್ತು ಸಾವಿರ (40,000) ಪದಗಳ ಆಡಿಯೋ-ವೀಡಿಯೊವೊಂದನ್ನು ಸಿದ್ದಪಡಿಸಿದ್ದು, ಇದರಲ್ಲಿ ತಮ್ಮ ಅಧ್ಯಯನದ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಸಣ್ಣದೊಂದು ಪರಿಚಯ
    ಬ್ರಿಜಿಂದರ್ ನಾಥ್ ಗೋಸ್ವಾಮಿ ಅವರು 1933, ಆಗಸ್ಟ್ 15ರಂದು ಪಂಜಾಬ್ ಪ್ರಾಂತ್ಯದ ಸರ್ಗೋಧಾದಲ್ಲಿ ಜನಿಸಿದರು. ಅಲ್ಲೇ ಪ್ರಾಥಮಿಕ, ಪ್ರೌಢ ಶಿಕ್ಷಣ ಪಡೆದು ಬಳಿಕ ಅಮೃತಸರದ ಹಿಂದೂ ಕಾಲೇಜಿನಲ್ಲಿ ಶಿಕ್ಷಣ ಮುಂದುವರಿಸಿ ಪದವಿ ಪಡೆದುಕೊಂಡರು. ತದನಂತರ ಚಂಡೀಗಢ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದರು. ಭಾರತ ಸರ್ಕಾರದ ಸೇವೆಗೆ ಸೇರಿಕೊಂಡಿದ್ದ ಗೋಸ್ವಾಮಿ ಅವರು ಕಲೆಯಲ್ಲಿ ಹೆಚ್ಚಿನ ಅಧ್ಯಯನ ಮಾಡಬೇಕೆನ್ನುವ ಉದ್ದೇಶದಿಂದ 1956ರಲ್ಲಿ ರಾಜೀನಾಮೆ ನೀಡಿ ಹೊರಬಂದರು. ಅಷ್ಟೇ ಅಲ್ಲ, ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮುಂದುವರಿಸಿದರು. 1961ರಲ್ಲಿ ಡಾಕ್ಟರೇಟ್ ಪದವಿ ಪಡೆಯುವ ಉದ್ದೇಶದಿಂದ ಹೆಸರಾಂತ ಇತಿಹಾಸಕಾರ ಹರಿ ರಾಮ್ ಅವರ ಮಾರ್ಗದರ್ಶನ ಪಡೆದುಕೊಂಡರು. ಕಾಂಗ್ರಾ ಚಿತ್ರಕಲೆ ಮತ್ತು ಸಾಮಾಜಿಕ ಹಿನ್ನೆಲೆ ಕುರಿತು ಸಂಶೋಧನೆ ಕೈಗೊಂಡರು. ಇದೇ ಸಂದರ್ಭದಲ್ಲಿಯೇ ಇತಿಹಾಸ ವಿಭಾಗದ ಸದಸ್ಯರಾಗಿ ನೇಮಕವಾದರು. ಕೆಲ ವರ್ಷಗಳ ಕಾಲ ಅಲ್ಲಿಯೇ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದರು. ಜೊತೆಗೆ ಹೈಡೆಲ್ಬರ್ಗ್ ವಿಶ್ವವಿದ್ಯಾಲಯದ ಸೌತ್ ಏಷ್ಯನ್ ಇನ್‌ಸ್ಟಿಟ್ಯೂಟ್‌ನಲ್ಲಿಯೂ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ವಿದೇಶದ ಅನೇಕ ವಿವಿಗಳಲ್ಲಿ ಉಪನ್ಯಾಸ ನೀಡಿರುವ ಕೀರ್ತಿ ಗೋಸ್ವಾಮಿ ಅವರದ್ದಾಗಿದೆ. ಇದಲ್ಲದೇ, ಸಿಸಿಆರ್‌ಟಿ ಉಪಾಧ್ಯಕ್ಷರಾಗಿಯೂ, ಐಸಿಎಚ್‌ಆರ್ ಆಡಳಿತ ಸಮಿತಿ ಸದಸ್ಯರಾಗಿಯೂ, ಚಂಡೀಗಢ ಲಲಿತಕಲಾ ಅಕಾಡೆಮಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

Share This

Leave a Reply

Your email address will not be published. Required fields are marked *