ಗಣೇಶ್ ದೊಡ್ಡಮನಿ ವರ್ಣ ಸಂಭ್ರಮ!

Share This

” 𝐏𝐞𝐭𝐫𝐢𝐜𝐡𝐨𝐫 – 𝐬𝐦𝐞𝐥𝐥 𝐨𝐟 𝐧𝐚𝐭𝐮𝐫𝐞 “: ಕಲಾವಿದ ದೊಡ್ಡಮನಿ ವರ್ಣ ಸಂಭ್ರಮ!
” ಬಣ್ಣ (colour) “! ಹಾಗಂದರೇನು?
ಈ ಪ್ರಶ್ನೆ ಎದುರಾದರೆ ತತಕ್ಷಣ ಉತ್ತರಿಸೋದು ಕಷ್ಟಸಾಧ್ಯವಾದೀತು. ಒಬ್ಬೊಬ್ಬರ ವ್ಯಾಖ್ಯಾನ ಒಂದೊಂದು ಆಗಲೂಬಹುದು. ” ಬಣ್ಣ ” ನಮ್ಮ ಕಣ್ಣಿಗೆ ಕಾಣಿಸುವ ಒಂದು ” ಗುಣ ” ಎಂದು, ಇಂದ್ರಿಯಗಳು ಬೆಳಕಿನ ವರ್ಣಪಟಲದ (spectrum of light) ಸೂಕ್ಷ್ಮ ಗ್ರಹಿಸುವಂತಹ ನಿಯತಿ ಎಂದೂ ಹೇಳುವುದುಂಟು.
ಅದೇನೆ ಇರಲಿ, ಭೂಮಂಡಲದ ಪ್ರತಿಯೊಂದು ಜೀವಿಗಳು, ಪ್ರತಿಯೊಂದು ವಸ್ತುಗಳು ಬಣ್ಣಗಳಿಂದ ಕಾಣಿಸಲು ” ಬೆಳಕು ” ಪ್ರಮುಖ ಕಾರಣ ಎನ್ನುವುದನ್ನು ವಿಜ್ಞಾನಿಗಳು ಸಾಬೀತುಪಡಿಸಿದ್ದಾಗಿದೆ. ನೈಸರ್ಗಿಕ ಬದಲಾವಣೆಯ ಹಿಂದೆ ಬೆಳಕು ಗಾಢವಾದ ಪರಿಣಾಮ ಬೀರಲಿದೆ ಎನ್ನುವುದು ನಿಖರ, ನಿರ್ವಿವಾದ!
“For the Rays, to speak properly, have no Colour. In them there is nothing else than a certain power and disposition to stir up a sensation of this Colour or that.”
ಭೌತವಿಜ್ಞಾನಿ, ಖಗೋಳಶಾಸ್ತ್ರಜ್ಞ, ರಸ ಸಿದ್ಧಾಂತಿ ಸರ್ ಐಸಾಕ್ ನ್ಯೂಟನ್ ಅವರ ಈ ಗ್ರಹಿಕೆ (observation) ಗಮನಿಸಿದಾಗ ಬಣ್ಣಗಳ ಉತ್ಪತ್ತಿ ರೋಚಕ ಅನಿಸದೇ ಇರಲು ಸಾಧ್ಯವೇ?. ಬಣ್ಣ ಮತ್ತು ಬೆಳಕುಗಳ ನಡುವಿನ ಪ್ರತಿಫಲನ ಫಲಿತಾಂಶ ಸಿದ್ಧಾಂತವೇ ಅಚ್ಚರಿ ಎನಿಸುವುದು ಸಹಜ.
ಬಣ್ಣದ ಬಗ್ಗೆ ಸಣ್ಣದೊಂದು ಪೀಠಿಕೆಗೆ ಕಾರಣ ಇಷ್ಟೆ. ಕರ್ನಾಟಕ ಚಿತ್ರಕಲಾ ಪರಿಷತ್ ಗ್ಯಾಲರಿ 3ರಲ್ಲಿ ಉತ್ಸಾಹಿ ಕಲಾವಿದ ಗಣೇಶ್ ದೊಡ್ಡಮನಿ ( Ganesh Dodamani ) ಅವರ
” Petrichor – smell of nature ” ಕಲಾಪ್ರದರ್ಶನ ನಡೆಯುತ್ತಿದೆ. ಅವರ ಕಲಾಕೃತಿಗಳಲ್ಲಿನ ಗಾಢ ವರ್ಣ ಬಳಕೆ ಈ ಮೇಲಿನ ” ಬಣ್ಣ ” ವಿವರಣೆಗೊಂದು ಕಾರಣವಾಯ್ತು.
ಕಲಾಪ್ರದರ್ಶನದ ಶೀರ್ಷಿಕೆ ಹೇಳುವಂತೆ ಪ್ರಕೃತಿಯ ಸುಗಂಧ, ಸೌಂದರ್ಯ ಬಣ್ಣಗಳ ಮುಖೇನ ಪ್ರತಿಫಲಿಸಿದೆ. ಕಾದಿರುವ ಭೂಮಿಯ ಮೇಲೆ ಮಳೆ ಬಂದು ನಿಂತಾಗ ಆ ಮಣ್ಣಿನಿಂದ ಹೊರಸೂಸುವ ಸುವಾಸನೆಗೆ ಕಲಾವಿದ ಗಣೇಶ ದೊಡ್ಡಮನಿ ಅವರು ಜಾಗ್ರತರಾಗಿದ್ದಾರೆ. ಪ್ರಕೃತಿಯ ಸಹಜ ಬದಲಾವಣೆ ಅನುಭವಿಸುವ ಮರ, ಗಿಡ, ಜೀವ ಸಂಕುಲಗಳ ಜೊತೆ ಕಲಾವಿದನ ಹೃದಯವೂ ಸಂಭ್ರಮಿಸಿದೆ. ಉಲ್ಲಸಿತರನ್ನಾಗಿಸಿದೆ.
ಗಣೇಶ್ ದೊಡ್ಡಮನಿ ಅವರು ಗಾಢ ಬಣ್ಣಗಳನ್ನು (dark colors) ನೆಚ್ಚಿಕೊಳ್ಳುವ, ಸಂಭ್ರಮಿಸುವ ಕಲಾವಿದರು ಎನ್ನುವುದನ್ನು ಅವರ ಕಲಾಕೃತಿಗಳು ಹೇಳುತ್ತವೆ. ಕಲಾವಿದನ ಅಂತರ್ಗತ ಗುಣಗಳು ಅವರ ಕಲಾಕೃತಿಗಳಲ್ಲಿ ಕಾಣಲು ಸಾಧ್ಯವಿದೆ ಎಂಬ ವಾದ ಒಪ್ಪುವುದಾದರೆ ದೊಡ್ಡಮನಿ ಅವರು ಇದಕ್ಕೊಳಪಡುತ್ತಾರೆ. ಅವರು ಬಣ್ಣಗಳನ್ನು ಸಿದ್ಧಗೊಳಿಸಿಕೊಳ್ಳುವ ಕ್ರಮವೇ ಭಿನ್ನ. ಪ್ರಜ್ವಲಿಸುವ ಬಣ್ಣಗಳನ್ನೇ ಕಲಾಕೃತಿ ಪೂರ್ಣಗೊಳಿಸುವ ತನಕ ಹೇಗೆ ಉಳಿಸಿಕೊಳ್ಳುತ್ತಾರೆ ಎಂಬ ಕುತೂಹಲ ಮೂಡುವುದು ಸಹಜ. ಇದನ್ನು ಸಿದ್ಧಿಸಿಕೊಂಡಿರುವ ಕಲಾವಿದರ ಸಾಲಿನಲ್ಲಿ ದೊಡ್ಡಮನಿ ಒಬ್ಬರಾಗಿ ನಿಲ್ಲುತ್ತಾರೆ.
ಕೆಲ ಕಲಾಕೃತಿಗಳು ಅಕ್ರಾಲಿಕ್ ಮಾಧ್ಯಮದಲ್ಲಿ ರಚಿಸಿರುವಂತದ್ದು, ಉಳಿದೆಲ್ಲವೂ ತೈಲವರ್ಣದಿಂದ ರಚಿಸಿರುವ ಕಲಾಕೃತಿಗಳು. ಬೃಹತ್ ಅಳತೆಯ ಕಲಾಕೃತಿಗಳು ಗ್ಯಾಲರಿಯ
ಸೂರ್ಯನ ಕಿರಣಗಳ ನಡುವೆ ವರುಣನ ಪ್ರವೇಶವಾದರೆ ಮೂಡುವ ಮಳೆಬಿಲ್ಲಿನ(rainbow) ಬಣ್ಣಗಳು ದೊಡ್ಡಮನಿ ಅವರ ಕಲಾಕೃತಿಗಳಲ್ಲಿ ಮೇಳೈಸಿವೆ. ಪ್ರಜ್ವಲಿಸುವ ಮರಗಿಡಗಳು, ಆಕಾಶ ಆಕೃತಿಗಳನ್ನು ಒಳಗೊಂಡಿರುವ ಪರಿಸರ ಅಮೂರ್ತ ಶೈಲಿಯಲ್ಲಿರುವುದನ್ನು ಕಾಣಬಹುದು. ಆದರೆ, ಸಮತೋಲನ ಕಾಪಾಡಿಕೊಳ್ಳಲು ಪ್ರಮುಖವೆನಿಸುವಲ್ಲಿ ತೆಳು ಅಥವಾ ಹಗುರವೆನಿಸುವ ಬಣ್ಣಗಳ ಬಳಕೆ ಮಾಡುತ್ತಾರೆ. ಇದರಿಂದ ತಂಗಾಳಿಯೊಂದು ಬೀಸಿದಾಗ ಎದುರಾಗುವ ಹಿತಾನುಭವದಂತೆ ನೋಡುಗನನ್ನು ಕಲಾಕೃತಿ ಒಳಕ್ಕೆ ಕರೆದೊಯ್ಯುವ ಪ್ರಯತ್ನ ಸಾಧ್ಯವಾಗಿಸುತ್ತಾರೆ. ಜೊತೆಯಲ್ಲಿ ದೂರದಲ್ಲಿ ನಿಂತು ಊರೊಂದನ್ನು ನೋಡಿದರೆ ಮನೆಗಳು ಎಷ್ಟು ಸರಳವಾಗಿ ಕಾಣಬಹುದೋ ಅದೇ ರೀತಿ ಸರಳ ಆಕೃತಿಗಳ ಮೂಲಕ ತೋರಿಸಿದ್ದಾರೆ. ಇಂತಹ ಅನೇಕ ಆಸಕ್ತಿದಾಯಕ ಅಂಶಗಳನ್ನು(elements) ಕಲಾಕೃತಿಗಳಲ್ಲಿ ನೋಡಲು ಸಾಧ್ಯವಿದೆ.

Share This

Leave a Reply

Your email address will not be published. Required fields are marked *