- ನ್ಯೂಯಾರ್ಕ್ ನಲ್ಲಿ ನಡೆದ ಹರಾಜಿನಲ್ಲಿ ದಾಖಲೆ ಬೆಲೆಗೆ ಹರಾಜು
ಖ್ಯಾತ ಚಿತ್ರಕಲಾವಿದ ಎಂ.ಎಫ್.ಹುಸೇನ್ ಅವರ ಶೀರ್ಷಿಕೆ ರಹಿತ (ಗ್ರಾಮಯಾತ್ರೆ / Gram Yatra) ಕಲಾಕೃತಿ 119 ಕೋಟಿ ರುಪಾಯಿಗೆ (13.8 million ಡಾಲರ್) ಮಾರಾಟವಾಗಿದ್ದು, ದೇಶದ ಪ್ರಸಿದ್ಧ ಕಲಾಪೋಷಕಿ, ಆರ್ಟ್ ಕಲೆಕ್ಟರ್ ಕಿರಣ್ ನಾಡಾರ್ (Kiran Nadar) ಅವರು ಖರೀದಿಸಿದ್ದಾರೆ. ಈ ಖರೀದಿಯು ಇದೀಗ ಭಾರತೀಯ ಸಮಕಾಲೀನ ಕಲೆ ವಿಶ್ವಮಟ್ಟದಲ್ಲಿ ಹೆಚ್ಚಿನ ಮಹತ್ವ ಪಡೆದುಕೊಂಡಿದ್ದು, ಶತಕೋಟಿಗೂ ಹೆಚ್ಚಿನ ಬೆಲೆಗೆ ಮಾರಾಟವಾಗಿರುವುದು ದಾಖಲೆಯಾಗಿದೆ.
ನ್ಯೂಯಾರ್ಕ್ನ ಕ್ರಿಸ್ಟೀಸ್ (Christie’s) ಸಂಸ್ಥೆ ರಾಕ್‌ಫೆಲ್ಲರ್ ಸೆಂಟರ್‌ನಲ್ಲಿ ನಡೆಸಿದ ಹರಾಜು ಪ್ರಕ್ರಿಯೆಯಲ್ಲಿ ಕಿರಣ್ ನಾಡಾರ್ ಅವರು ಈ ಕಲಾಕೃತಿಯನ್ನು ಖರೀದಿಸಿದ್ದಾರೆ. ಕ್ರಿಸ್ಟೀಸ್ ಸಂಸ್ಥೆ ತನ್ನ ಹೇಳಿಕೆಯಲ್ಲಿ ಹೆಸರು ಹೇಳಲು ಇಚ್ಚಿಸದ ಸಂಸ್ಥೆಯೊಂದು ಕಲಾಕೃತಿಯನ್ನು ಖರೀದಿಸಿದ್ದಾಗಿ ಹೇಳಿತ್ತು. ಆದರೆ, ಹರಾಜು ನಡೆದ ಕೆಲವೇ ಗಂಟೆಗಳ ಅವಧಿಯಲ್ಲಿ ಆರ್‌ಪಿಜಿ ಚೇರ್ಮನ್ ಹರ್ಷವರ್ಧನ್ ಗೋಯೆಂಕಾ ಅವರು ಎಕ್ಸ್ ನಲ್ಲಿ ‘ಎಂ. ಎಫ್. ಹುಸೇನ್ ಅವರ ಕಲಾಕೃತಿಯನ್ನು ಕಿರಣ್ ನಾಡಾರ್ ಅವರು 100 ಕೋಟಿಗೂ ಹೆಚ್ಚಿನ ಬೆಲೆಗೆ ಖರೀದಿಸಿದ್ದಾಗಿ ಮಾಹಿತಿ ಹಂಚಿಕೊAಡಿದ್ದರು. ಆದರೆ ಇನ್ನೂ ಕಿರಣ್ ನಾಡಾರ್ ಅವರಾಗಲಿ, ಅವರಿಗೆ ಸಂಸ್ಥೆಯಾಗಲಿ ಈ ಸಂಬAಧ ಯಾವುದೇ ಹೇಳಿಕೆ ನೀಡಿರುವುದು ಗಮನಕ್ಕೆ ಬಂದಿಲ್ಲ. 2023ರಲ್ಲಿ ಅಮೃತಾ ಶೇರ್ಗಿಲ್ ಅವರ Gil’s The Story Teller ಶೀರ್ಷಿಕೆಯ ಕಲಾಕೃತಿ 61.8ಕೋಟಿ ರು.ಗೆ ಹರಾಜಾಗಿತ್ತು. ಈ ಮೂಲಕ ಭಾರತೀಯ ಕಲಾವಿದರೊಬ್ಬರ ಕಲಾಕೃತಿ ಅತಿ ಹೆಚ್ಚು ಬೆಲೆಗೆ ಮಾರಾಟವಾದ ದಾಖಲೆ ನಿರ್ಮಾಣವಾಗಿತ್ತು.
13 ಪ್ಯಾನಲ್‌ಗಳನ್ನು ಒಳಗೊಂಡಿರುವ ೧೪ ಅಡಿ ಉದ್ದದ, ಒಂದೇ ಕ್ಯಾನ್ವಾಸ್ ಮೇಲೆ ರಚಿಸಲಾದ ಈ ಕಲಾಕೃತಿಯು 1954ರಲ್ಲಿ ವಿದೇಶಕ್ಕೆ ಕೊಂಡೊಯ್ಯಲಾಗಿತ್ತು. ಹುಸೇನ್ ಅವರು ರಚಿಸಿರುವ ದೊಡ್ಡ ಅಳತೆಯ ಕಲಾಕೃತಿಗಳಲ್ಲಿ ಇದೂ ಒಂದಾಗಿದೆ. ಭಾರತೀಯ ಕಲಾವಿದರೊಬ್ಬರ ಕಲಾಕೃತಿ 100 ಕೋಟಿಗೂ ಹೆಚ್ಚಿನ ಬೆಲೆಗೆ ಖರೀದಿಸುವ ಮೂಲಕ ಕಲಾವಿದರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸವಾಗಿದೆ ಎಂದು ಕಲಾಕ್ಷೇತ್ರ ವಿಶ್ಲೇಷಿಸುತ್ತಿದೆ.