- ಎರಡು ವರ್ಷಗಳ ಪ್ರಶಸ್ತಿಗಳನ್ನು ಒಟ್ಟಿಗೆ ಪ್ರಕಟಿಸಿದ ಅಕಾಡೆಮಿ
ಕರ್ನಾಟಕ ಲಲಿತಕಲಾ ಅಕಾಡೆಮಿ ವಾರ್ಷಿಕವಾಗಿ ನೀಡುವ ಗೌರವ ಪ್ರಶಸ್ತಿ, 2021-22ನೇ ಮತ್ತು 2022-23ನೇ ಸಾಲಿನ ವರ್ಣಶ್ರೀ ಪ್ರಶಸ್ತಿ ಹಾಗೂ ೫೧ನೇ ಮತ್ತು ೫೨ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪಟ್ಟಿಯನ್ನು ಪ್ರಕಟಿಸಲಾಗಿದೆ. 2022-23ನೇ ಸಾಲಿನ ಗೌರವ ಪ್ರಶಸ್ತಿಯನ್ನು ಗದಗ ಜಿಲ್ಲೆಯ ಕಮಲ್ ಅಹಮದ್, ತುಮಕೂರಿನ ನಿರ್ಮಲಾ ಕುಮಾರಿ ಮತ್ತು ಬೆಂಗಳೂರಿನ ಬಿ.ಪಿ. ಕಾರ್ತಿಕ್ ಅವರನ್ನು ಆಯ್ಕೆ ಮಾಡಲಾಗಿದೆ. 2023-24ನೇ ಗೌರವ ಪ್ರಶಸ್ತಿಗೆ ಯಾದಗಿರಿಯ ನಿಜಲಿಂಗಪ್ಪ ಹಾಲ್ವಿ, ಹುಬ್ಬಳ್ಳಿಯ ವಿಠಲ ರೆಡ್ಡಿ ಚುಳಕಿ ಮತ್ತು ಕಲಬುರಗಿಯ ಬಾಬುರಾವ್ ಎಚ್. ಅವರನ್ನು ಆಯ್ಕೆ ಮಾಡಲಾಗಿದೆ.
2021-22ನೇ ಸಾಲಿನ ವರ್ಣಶ್ರೀ ಪ್ರಶಸ್ತಿಗೆ ಮಂಗಳೂರಿನ ವೀಣಾ ಶ್ರೀನಿವಾಸನ್, ಬಾಗಲಕೋಟೆಯ ಪರಮೇಶ್ ಜೋಳದ, ರಾಯಚೂರಿನ ಪಿ.ಎ.ಬಿ. ಈಶ್ವರ, ಪುಣೆಯ ಕೂಡಲಯ್ಯ ಹೀರೇಮಠ, ತುಮಕೂರಿನ ಅಶೋಕ್ ಕಲ್ಲಶೆಟ್ಟಿ, ವಿಜಯಪುರದ ನಂದಬಸಪ್ಪ ವಾಡೆ, ರಾಮನಗರದ ಕೆ.ಜಿ.ಲಿಂಗದೇವರು, ಮಡಿಕೇರಿಯ ಮಹೇಶ್ ಬಿ., ಹುಬ್ಬಳ್ಳಿಯ ಶಕುಂತಲಾ ವರ್ಣೇಕರ್ ಮತ್ತು ಬಳ್ಳಾರಿಯ ಮಂಜುನಾಥ್ ಜಿ. ಇವರನ್ನು ಆಯ್ಕೆ ಮಾಡಲಾಗಿದೆ. ಅಂತೆಯೇ, 2022-23ನೇ ಸಾಲಿನ ವರ್ಣಶ್ರೀ ಪ್ರಶಸ್ತಿಗೆ ಉತ್ತರಕನ್ನಡದ ಪ್ರಕಾಶ್ ನಾಯಕ್, ಗದಗ ಜಿಲ್ಲೆಯ ಬಸವರಾಜ ಕುತ್ನಿ, ಕಲಬುರಗಿಯ ಜಗದೀಶ್ ಕಾಂಬ್ಳೆ, ಹಾಸನದ ಜಯದೇವಣ್ಣ ಟಿ., ಬಾಗಲಕೋಟೆಯ ಶೈಲದೋತ್ರೆ ಟಿ., ಚಾಮರಾಜನಗರದ ಮಹದೇವ ಸ್ವಾಮಿ ಸಿ., ಬೆಳಗಾವಿಯ ಮೀನಾಕ್ಷಿ ಸದಲಗಿ, ತುಮಕೂರಿನ ರವೀಶ್ ಕೆ.ಎಂ., ಧರವಾಡದ ಎಫ್.ವಿ.ಚಿಕ್ಕಮಠ ಮತ್ತು ಮಂಗಳೂರಿನ ಸಯ್ಯದ್ ಅಸೀಫ್ ಅಲಿ ಅವರನ್ನು ಆಯ್ಕೆ ಮಾಡಲಾಗಿದೆ.
ಇನ್ನು 51ನೇ ವಾರ್ಷಿಕ ಕಲಾ ಬಹುಮಾನಕ್ಕೆ ಕಲಬುರಗಿಯ ಶಿವಪ್ರಸಾದ, ಬೆಂಗಳೂರಿನ ಭಾನುಪ್ರಕಾಶ್ ಬಿ.ಎಲ್., ಮಂಗಳೂರಿನ ರಾಜೇಂದ್ರ ಕೇದಿಗೆ, ಬೆಂಗಳೂರಿನ ರೋಷ್ ರವೀಂದ್ರನ್, ಹೊಸಕೋಟೆಯ ವರ್ಣಂ ನಾರಾಯಣ, ತುಮಕೂರಿನ ಅಮೋಘರಾಜ್ ಡಿ.ಬಾಲಿ, ಕಲಬುರಗಿಯ ಗಿರೀಶ್ ಬಿ.ಕುಲಕರ್ಣಿ, ಚಾಮರಾಜನಗರದ ನಾಗರಾಜು ಪಿ., ಬೀದರ್ನ ಹಣಮಂತ ಮಲ್ಲಾಪುರೆ, ಹಾಸನದ ಕೃಷ್ಣಾಚಾರಿ ಅವರನ್ನು ಆಯ್ಕೆ ಮಾಡಲಾಗಿದೆ. ಅಲ್ಲದೆ, 52ನೇ ವಾರ್ಷಿಕ ಕಲಾ ಬಹುಮಾನಕ್ಕೆ ಕಲಬುರಗಿಯ ಡಾ.ರೆಹಮಾನ್ ಪಟೇಲ್, ದಕ್ಷಿಣಕನ್ನಡದ ಪ್ರಶಾಂತ್ ಕೆ., ಬೆಂಗಳೂರಿನ ಅರುಳ್ ದೇವನ್, ಉಡುಪಿಯ ಬ್ಪಿನೆಲ್ ಮರಿಯಾ, ಬೆಂಗಳೂರಿನ ಗೌತಮಿ ಎಂ., ವಿಜಯಪುರದ ರಮೇಶ್ ಚವ್ಹಾಣ್, ಕೊಪ್ಪಳದ ಸಂತೋಷ್ ಪತ್ತಾರ, ಮೈಸೂರಿನ ಚೈತ್ರಾ ಎನ್., ಮೈಸೂರಿನ ಶಿವರಾಮು ಮತ್ತು ಮೈಸೂರಿನ ದಯಾನಂದ ಎನ್. ಅವರನ್ನು ಆಯ್ಕೆ ಮಾಡಲಾಗಿದೆ.