ಕಲಾಕೃತಿಗಳಲ್ಲಿ ಪ್ರಕೃತಿ ಸಹಜ ಗುಣಾರಾಧನೆ!

Share This

• ಗಮನ ಸೆಳೆದ ಇಶಾ ವ್ಯಾಲೈಂಟನ್ ಅವರ IN THE QUIET ಕಲಾಪ್ರದರ್ಶನ
ಕರ್ನಾಟಕ ಚಿತ್ರಕಲಾ ಪರಿಷತ್ ಗ್ಯಾಲರಿ ೩ರಲ್ಲಿ ನಡೆದ IN THE QUIET ಕಲಾಪ್ರದರ್ಶನ ಗಮನ ಸೆಳೆಯಿತು. ಛತ್ತೀಸ್‌ಗಢ ಮೂಲದ ಕಲಾವಿದೆ ಇಶಾ ವ್ಯಾಲಂಟೈನ್ (ISHA VALENTINE) ಅವರ ಏಕವ್ಯಕ್ತಿ ಕಲಾಪ್ರದರ್ಶನದಲ್ಲಿ ಪ್ರದರ್ಶಿತ ಬಹುತೇಕ ಕಲಾಕೃತಿಗಳು ಆಸಕ್ತಿಯಿಂದ ಕೂಡಿದ್ದವು. ಕೆಲವು ಕಲಾಕೃತಿಗಳು ನೋಡುಗರನ್ನು ಹಿಡಿದು ನಿಲ್ಲಿಸುವಂತೆ ಇತ್ತು.
ಸಮಕಾಲೀನ ಚಿಂತನೆಯ ವಿಭಿನ್ನ ಆಯಾಮ ಇಶಾ ಅವರ ಕಲಾಕೃತಿಗಳಲ್ಲಿ ನೋಡಲು ಸಾಧ್ಯವಾಯಿತು. ಅದರಲ್ಲೂ ಕಪ್ಪು-ಬಿಳುಪು ಬಣ್ಣಗಳಲ್ಲಿ ರಚನೆಯಾಗಿರುವ ಕಲಾಕೃತಿಗಳು ವಿಶೇಷ ಆಕರ್ಷಣೆ ಅನಿಸುವಂತೆ ಇದ್ದವು. ಜಲವರ್ಣಗಳಿಂದ ರಚಿಸಲ್ಪಟ್ಟ SILENT INTERLUDE ಶೀರ್ಷಿಕೆಯ ಕಲಾಕೃತಿಗಳ ಗೊಂಚಲು ವಿಭಿನ್ನ ಭಾವಗಳನ್ನು ನೋಡುಗರಲ್ಲಿ ಮೂಡಿಸುವಂತೆ ಇತ್ತು. ಪ್ರಕೃತಿಯಲ್ಲಿ ದಿನ ಬೆಳಗಾದರೆ ನೋಡ ಸಿಗುವ ಅತ್ಯಂತ ಸರಳವೆನಿಸುವ ವಸ್ತು ವಿಷಯವಾಗಿಸಿಕೊಂಡು ನಿರ್ವಹಿಸಿರುವ ರೀತಿ ಹೆಚ್ಚು ಆಸಕ್ತಿದಾಯಕವಾಗಿತ್ತು. MOUNTAINS AND MOLEHILLS, VITALIS (Quadriptych) ಶೀರ್ಷಿಕೆಯ ಕಲಾಕೃತಿಗಳು ಹೆಚ್ಚು ಪರಿಣಾಮಕಾರಿಯಾಗಿವೆ. ಇದಲ್ಲದೆ, WHIMSY WOOD, OPES TERRAE 2, NEXUS (Triptych) ಕಲಾಕೃತಿಗಳು ಗಮನಸೆಳೆದವು.
ಪೃಕೃತಿಯ ಅಮೂರ್ತ ಆಕಾರ, ಭಾವಗಳ ಸಮ್ಮಿಲನ ಪ್ರದರ್ಶಿತ ಕಲಾಕೃತಿಗಳಲ್ಲಿ ಕಂಡುಬಂದವು. ಜೀವ ಮತ್ತು ನಿರ್ಜೀವ ವಸ್ತುಗಳ ಕಾಲ್ಪನಿಕ ಬೆಸುಗೆಯ ನಿಗೂಢ ಜಗತ್ತಿನ ಅನಾವರಣ ಹೆಚ್ಚು ಪರಿಣಾಮಕಾರಿಯಾಗಿತ್ತು.

Share This

Leave a Reply

Your email address will not be published. Required fields are marked *