ಡ್ಯೂರರ್ ನೆನಪಿಸಿದ ಕಲಾಮಂದಿರ ವಿದ್ಯಾರ್ಥಿಗಳು

Share This

• ಆಲ್ಬ್ರೆಕ್ಟ್ ಕಲಾಕೃತಿಗಳ ಮರುಸೃಷ್ಟಿಸಿ ಗೌರವಾರ್ಪಣೆ
• ನಾಳೆ ವಿ.ಜಿ.ವೇಣುಗೋಪಾಲ್ ಮುಕ್ತ ಮಾತುಕತೆ
ಜರ್ಮನಿಯ ‘ಆಲ್ಬ್ರೆಕ್ಟ್ ಡ್ಯೂರರ್’ (Albrecht Durer) ನವೋದಯ ಕಾಲದ ಮೇರು ಕಲಾವಿದ. ಡ್ಯೂರರ್ ರೇಖಾ ಲಾಲಿತ್ಯ, ಸಮತೋಲನದ ಸಂಯೋಜನೆ ಮತ್ತು ಮಾನವಾಕೃತಿಗಳಲ್ಲಿನ ಜೀವಂತಿಕೆ ಬಹುತೇಕ ಕಲಾವಿದರಿಗೆ ಅಚ್ಚುಮೆಚ್ಚು. ಕಲಾ ಇತಿಹಾಸದ ಪುಟಗಳನ್ನು ತಿರುವುತ್ತಾ ಹೋದಾಗ ಒಮ್ಮೆಯಾದರೂ ಅಲ್ಬೆçಕ್ಟ್ ಡ್ಯೂರರ್ ಅವರ ಕಲಾಕೃತಿಗಳನ್ನು ನೋಡಬೇಕೆನ್ನಿಸುತ್ತದೆ. ಡ್ಯೂರರ್ ತಮ್ಮ 13ನೇ ವಯಸ್ಸಿನಲ್ಲಿ ರಚಿಸಿದ ಸಿಲ್ವರ್‌ಪಾಯಿಂಟ್ (silverpoint) ರೇಖಾಚಿತ್ರ ಜನಪ್ರಿಯ ಕಲಾಕೃತಿಗಳಲ್ಲಿ ಒಂದು. ಅಪರೂಪದಲ್ಲೂ ಅಪರೂಪವಾಗಿರುವ ಅಂದಿನ ಸಿಲ್ವರ್‌ಪಾಯಿಂಟ್ ಚಿತ್ರ ರಚನಾ ವಿಧಾನ ವಿಶೇಷವಾದುದು. ಡ್ಯೂರರ್ ಈ ವಿಧಾನವನ್ನು ಮೈಗೂಡಿಸಿಕೊಂಡಿದ್ದರು. ಅಕ್ಕಸಾಲಿಗ ಕುಟುಂಬದಲ್ಲಿ ಜನಿಸಿದ್ದರಾದ್ದರಿಂದ ಡ್ಯೂರರ್ ಈ ಬಗ್ಗೆ ಹೆಚ್ಚಿನ ಜ್ಞಾನವನ್ನೂ ಸಂಪಾದಿಸಿಕೊಂಡಿದ್ದರು.
ಡ್ಯೂರರ್ ಎನ್ನುವ ಕಲಾ ಶಕ್ತಿಗೆ ಗೌರವ ಸಮರ್ಪಿಸುವ ಕಲಾಪ್ರದರ್ಶನ ‘A HOMAGE TO ALBRECHT DÜRER’ ಬೆಂಗಳೂರಿನ ವೆಂಕಟಪ್ಪ ಗ್ಯಾಲರಿಯಲ್ಲಿ ನಡೆಯುತ್ತಿದೆ. ಶತಮಾನಕಂಡಿರುವ ಕಲಾಶಾಲೆ ಕಲಾಮಂದಿರ ವಿದ್ಯಾರ್ಥಿಗಳು ಡ್ಯೂರರ್ ಅವರ ಮರಗೆತ್ತನೆ ಮತ್ತು ತಾಮ್ರದ ಮೇಲಿನ ಕೆತ್ತನೆಯ ತಂತ್ರದಿAದ ರಚಿಸಲ್ಪಟ್ಟ ಕಲಾಕೃತಿಗಳನ್ನು ಮರುಸೃಷ್ಟಿ ಮಾಡಿ, ಅವುಗಳನ್ನು “A Homage to Albrecht Durer” ಶೀರ್ಷಿಕೆಯಡಿ ಪ್ರದರ್ಶಿಸಿದ್ದಾರೆ. ಕಲಿಕಾ ಹಂತದಲ್ಲಿ ಇದೊಂದು ಒಳ್ಳೆಯ ಪ್ರಯತ್ನ. ಕಲಾವಿದ, ಕಲಾ ಉಪನ್ಯಾಸಕ ನಿಖಿಲ್ ಶರ್ಮಾ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಕಲಾಕೃತಿಗಳನ್ನು ರಚಿಸಿದ್ದಾರೆ.
ಅಕ್ರಲಿಕ್ ಪ್ಲೇಟ್ ಬಳಸಿಕೊಂಡು ಡ್ರೈಪಾಯಿಂಟ್ ವಿಧಾನದಿಂದ ರೇಖಾಚಿತ್ರಗಳನ್ನು ಮರುಸೃಷ್ಟಿಸಿರುವ ವಿದ್ಯಾರ್ಥಿಗಳು ತಮ್ಮಲ್ಲಿರುವ ಕೌಶಲ್ಯವನ್ನು ಕಂಡುಕೊಂಡಿದ್ದಾರೆ. ಹೊಸ ಮಾಧ್ಯಮದ ಪರಿಚಯ ಮಾಡಿಕೊಳ್ಳುವಲ್ಲಿ ಯಶಸ್ವಿ ಪ್ರಯತ್ನವಾಗಿದೆ. ಕೇಂದ್ರ ಲಲಿತಕಲಾ ಅಕಾಡಮಿ ಆಯೋಜಿಸಿದ 3ನೇ ಪ್ರಿಂಟ್ ಬೆನಾಲೆ ಭಾಗವಾಗಿರುವುದು ಇನ್ನೊಂದು ವಿಶೇಷ.
ನಾಳೆ ಫೆ.1 ಪ್ರದರ್ಶನ ಸಂಪನ್ನಗೊಳ್ಳಲಿದೆ. ಬಿಡುವು ಮಾಡಿಕೊಂಡು ಹೋಗಿಬನ್ನಿ.
ಇನ್ನೊಂದು ಮಹತ್ವದ ವಿಚಾರ ಏನೆಂದರೆ ನಾಳೆ ಭಾನುವಾರ ಸಂಜೆ ೩ರಿಂದ ೪ಗಂಟೆಯ ತನಕ The Language of Lines ಕುರಿತು ದೃಶ್ಯ ಕಲಾವಿದ ವಿ.ಜಿ. ವೇಣುಗೋಪಾಲ್ ಅವರು ಮಾತನಾಡಲಿದ್ದಾರೆ. ಆಸಕ್ತರು ಪಾಲ್ಗೊಳ್ಳಬಹುದು.

 


Share This

Leave a Reply

Your email address will not be published. Required fields are marked *