‘aeon’ ಕಾಲಘಟ್ಟ ಪ್ರತಿಬಿಂಬಿಸುವ ಕಲಾಪ್ರದರ್ಶನ

Share This

• ಏಪ್ರಿಲ್ 27, ಇಂದು ಸಂಪನ್ನ, ಹೋಗಿ ಬನ್ನಿ.
ಬೇರೆ ಬೇರೆ ಕಾಲಘಟ್ಟ, ಭಿನ್ನ ಮಾಧ್ಯಮಗಳ ವಿಭಿನ್ನ ಬಳಕೆ, ಊಹೆಗೂ ನಿಲುಕದ ಆಲೋಚನೆಗಳು, ಚೌಕಟ್ಟಿನೊಳಗಿನ ಮತ್ತು ಚೌಕಟ್ಟಿನಾಚೆಯ ಸಂಯೋಜನೆ, ಶಾಂತ ಭಾವದಿಂದ ಹಿಡಿದು ಗಾಢ ವರ್ಣಗಳ ಬಳಕೆ…. ಹೀಗೇ ಇನ್ನೂ ಏನೇನೋ ಎನ್ನುವಷ್ಟು ಆಕರ್ಷಕ ಅಭಿವ್ಯಕ್ತಿಗಳ ಸಂಗಮ!
ಬೆಂಗಳೂರಿನ ದ್ವಿಜಾ ಗ್ಯಾಲರಿಯಲ್ಲಿ ನಡೆಯುತ್ತಿರುವ ‘aeon’ – Timelessness and Eternity in Art ಕಲಾಪ್ರದರ್ಶನದ ಒಂದು ನೋಟವಿದು.
ನೀರಿನಂತೆ ಬಳಕು ಬಳ್ಳಿಯಾಗಿ ಹರಿದಿರುವ ರೇಖೆ, ಬಣ್ಣಗಳು ಪ್ರತಿ ಬಾರಿ ನೋಡಿದಾಗಲೂ ಹೊಸದೊಂದು ಆನಂದವನ್ನು ನೀಡುತ್ತಾ ಸಾಗುತ್ತವೆ. ಒಂದಲ್ಲ ಎರಡು ಸುತ್ತುಹಾಕಿ ನೋಡಿ ಬಂದರೂ ಸಾಲದು. ಮತ್ತೆ ಮತ್ತೆ ನೋಡಿ ಬರಬೇಕೆನ್ನುವ ಒಂದಿಷ್ಟು ಕಲಾಕೃತಿಗಳು ಪ್ರದರ್ಶಿಸಲ್ಪಟ್ಟಿವೆ.
ದ್ವಿಜಾ ಗ್ಯಾಲರಿ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಈ ಕಲಾಪ್ರದರ್ಶನ ಆಯೋಜನೆಯಾಗಿದೆ. ಗ್ಯಾಲರಿ ಸಂಸ್ಥಾಪಕರಿಗೆ, ಜೊತೆಗೆ ಹೆಜ್ಜೆ ಹಾಕಿದವರಿಗೆ ಅಭಿನಂದನೆಗಳು. ಶುಭವಾಗಲಿ 💐.
ಒಂದೊಳ್ಳೆಯ ಕಲಾಪ್ರದರ್ಶನ ಸ್ನೇಹಿತರೆ, ಇಂದು, ಏಪ್ರಿಲ್ 27ರಂದು ಸಂಪನ್ನಗೊಳ್ಳಲಿದೆ. ಬಿಡುವು ಮಾಡಿಕೊಂಡು ಹೋಗಿ ಬನ್ನಿ.

 

 

 

 

 

 

 

 


Share This

Leave a Reply

Your email address will not be published. Required fields are marked *