ಪ್ರತಿಷ್ಠಿತ “ಬುಕ್ ಬ್ರಹ್ಮ ಸಾಹಿತ್ಯ ಉತ್ಸವ- 2024” ( Book Brahma Literature Festival -2024) ಆಗಸ್ಟ್ 9, 10 ಮತ್ತು 11ರಂದು ಬೆಂಗಳೂರಿನ ಕೋರಮಂಗಲದ ಸೇಂಟ್ ಜಾನ್ಸ್ ರಂಗಮಂದಿರದ ಆವರಣದಲ್ಲಿ ನಡೆಯಲಿದೆ. ಇದೇ ಸಂದರ್ಭದಲ್ಲಿ ದೃಶ್ಯ ಭಾಷೆಯ ವಿಭಿನ್ನ ಅಭಿವ್ಯಕ್ತಿ ಅನಾವರಣವೂ ಆಗಲಿದೆ.
ಕನ್ನಡ ಸೇರಿದಂತೆ ದಕ್ಷಿಣ ಭಾರತದ ಉಳಿದೆಲ್ಲಾ ಭಾಷೆಗಳ ಸಾಹಿತ್ಯ ರಸದೌತಣದ ಜೊತೆ ಕಲಾಪ್ರದರ್ಶನಕ್ಕೂ ಅವಕಾಶ ಮಾಡಿಕೊಡಲಾಗಿದೆ. ಅಷ್ಟೇ ಅಲ್ಲ, ಸಂಗೀತ, ನಾಟಕ, ಯಕ್ಷಗಾನ, ಭರತನಾಟ್ಯ ಪ್ರದರ್ಶನಗಳೂ ನಡೆಯಲಿವೆ. ಬೇರೆ ಬೇರೆ ಕ್ಷೇತ್ರದ ಹಿರಿಯ-ಕಿರಿಯರ ಜ್ಞಾನಿಗಳು ಮಾತನಾಡಲಿದ್ದಾರೆ. ತಪ್ಪದೇ ಬಿಡುವು ಮಾಡಿಕೊಂಡು ಭೇಟಿ ನೀಡಿ. ಸಾಹಿತ್ಯ, ಕಲಾಸಕ್ತರಿಗೆಲ್ಲರೂ ಬನ್ನಿ. www.bookbrahmalitfest.com ಭೇಟಿ ನೀಡಿ ನಿಮ್ಮ ಬರುವಿಕೆಯನ್ನು ಖಾತ್ರಿಪಡಿಸಲು ನೋಂದಣಿ ಮಾಡಿಕೊಳ್ಳಿ. ಸಾಹಿತ್ಯ ಉತ್ಸವದ ಮಾಹಿತಿಯೂ ಇಲ್ಲಿ ಲಭ್ಯ.
ಕಲಾಪ್ರದರ್ಶನದಲ್ಲಿ 21 ಕಲಾವಿದರ ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ. ಈ ಸದಾವಕಾಶ ಒದಗಿಸಿದ ಬುಕ್ ಬ್ರಹ್ಮ ಬಳಗಕ್ಕೆ ಅನಂತಾನಂತ ಧನ್ಯವಾದಗಳು.