ಕರ್ನಾಟಕ ಶಿಲ್ಪಕಲಾ ಅಕಾಡೆಮಿಯು ಹದಿನೆಂಟನೇ ವಾರ್ಷಿಕ ಶಿಲ್ಪಕಲಾ ಪ್ರದರ್ಶನ-2024ಕ್ಕೆ ದಿ:05-08-2024 ರಿಂದ 05-09-2024ರವರೆಗೆ ಅರ್ಜಿಗಳನ್ನು ಶಿಲ್ಪಕಲಾಕೃತಿಗಳೊಂದಿಗೆ ಅಕಾಡೆಮಿಗೆ ಖುದ್ದಾಗಿ ತಲುಪಿಸಲು ಅರ್ಜಿಯನ್ನು ಆಹ್ವಾನಿಸಿದೆ. ಪ್ರವೇಶ ಶುಲ್ಕ. ರೂ.300-00 ಮಾತ್ರ. ಅರ್ಜಿಗಳನ್ನು ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಕಚೇರಿ ವೇಳೆಯಲ್ಲಿ (ರಜಾ ದಿನಗಳನ್ನು ಹೊರತುಪಡಿಸಿ), ಅಥವಾ ಅರ್ಜಿಗಳನ್ನು ಅಕಾಡೆಮಿಯ ಅಂರ್ತಜಾಲ ವಿಳಾಸ: https://shilpakalaacademy.karnataka.gov.in/kn ಮೂಲಕ ಪಡೆಯಬಹುದಾಗಿದೆ. ಶಿಲ್ಪಕಲಾಕೃತಿಗಳನ್ನು ಸ್ವೀಕರಿಸುವ ಕೊನೆಯ ದಿನಾಂಕವನ್ನು ಯಾವುದೇ ಕಾರಣಕ್ಕೂ ವಿಸ್ತರಿಸಲಾಗುವುದಿಲ್ಲ.
ವಾರ್ಷಿಕ ಶಿಲ್ಪಕಲಾ ಪ್ರದರ್ಶನಕ್ಕೆ ಕಲಾವಿದರಿಂದ ಖುದ್ದಾಗಿ ಅಥವಾ ಕೊರಿಯರ್ ಮೂಲಕ ಅಕಾಡೆಮಿಯಲ್ಲಿ ಕಲಾಕೃತಿಗಳನ್ನು ಸ್ವೀಕರಿಸಲಾಗುವುದು. ಕೊರಿಯರ್ ಮೂಲಕ ಅಕಾಡೆಮಿಗೆ ಕಳುಹಿಸುವ ಕಲಾಕೃತಿಗಳಿಗೆ ಕಲಾವಿದರೇ ಜವಾಬ್ದಾರರಾಗಿದ್ದು, ಕೊರಿಯರ್ ವೆಚ್ಚವನ್ನು ಕಲಾವಿದರೇ ಭರಿಸಬೇಕಾಗಿರುತ್ತದೆ ಹಾಗೂ ಕೊರಿಯರ್ ನೊಂದಿಗೆ ಕಲಾಕೃತಿಯ ಒಂದು ಛಾಯಾಚಿತ್ರ ಕಳುಹಿಸುವುದು ಕಡ್ಡಾಯವಾಗಿರುತ್ತದೆ.
ಕೊನೆಯ ದಿನಾಂಕದ ನಂತರದಲ್ಲಿ ಬರುವ ಪ್ರವೇಶಾತಿಗಳನ್ನು ಸ್ವೀಕರಿಸುವುದಿಲ್ಲ. ಹೆಚ್ಚಿನ ವಿವರಗಳಿಗೆ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ದೂರವಾಣಿ ಸಂಖ್ಯೆ:080-22278725. ಶಿಲ್ಪಕಲಾ ವಿದ್ಯಾರ್ಥಿಗಳು/ ಶಿಲ್ಪಕಲಾವಿದರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಕೋರಿದೆ.