ಬೋಸ್ ಕೃಷ್ಣಮಾಚಾರಿ ರಾಜೀನಾಮೆ: ಕೊಚ್ಚಿ
ಮುಝರಿಸ್ ಬಿನಾಲೆ ಕಲಾವಲಯದಲ್ಲಿ ಸಂಚಲನ|
• ಕೌಟುಂಬಿಕ ಕಾರಣ ನೀಡಿರುವ ಸಂಸ್ಥಾಪಕ ಟ್ರಸ್ಟಿ
ಕೊಚ್ಚಿ ಮುಝರಿಸ್ ಬಿನಾಲೆ ಫೌಂಡೇಶನ್ ಸಂಸ್ಥಾಪಕ ಟ್ರಸ್ಟಿಗಳಲ್ಲಿ ಒಬ್ಬರಾದ, ಕಲಾವಿದ ಬೋಸ್ ಕೃಷ್ಣಮಾಚಾರಿ ( Bose Krishnamachari ) ಅವರು ತಮ್ಮ ಹುದ್ದೆಗೆ ಹಠಾತ್ ರಾಜೀನಾಮೆ ನೀಡಿದ್ದಾರೆ. ಕುಟುಂಬ ಕಾರಣಗಳಿಗಾಗಿ ರಾಜೀನಾಮೆ ನೀಡಿದ್ದಾರೆ ಎಂದು ಕೊಚ್ಚಿ ಮುಝರಿಸ್ ಬಿನಾಲೆ ಫೌಂಡೇಶನ್ ಹಾಲಿ ಅಧ್ಯಕ್ಷರಾದ ವೇಣು ವಾಸುದೇವನ್ ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
6ನೇ ಆವೃತ್ತಿಯ ಸಂದರ್ಭದಲ್ಲೆ ರಾಜೀನಾಮೆ ನೀಡಿರುವುದು ಸಾಕಷ್ಟು ಸುದ್ದಿಯಾಗುವಂತೆ ಮಾಡಿದೆ. ಅಂತಾರಾಷ್ಟ್ರೀಯ ಮಟ್ಟದ ಕಲಾಪ್ರದರ್ಶನ ಆಯೋಜನೆ ಮತ್ತು ಕಲಾ ಸಮುದಾಯದ ಆಕರ್ಷಕ ಕೇಂದ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರಿಂದ ಇದೀಗ ಅವರ ಹಠಾತ್ ರಾಜೀನಾಮೆ ಸದ್ದುಮಾಡುತ್ತಿದೆ. ದೇಶ-ವಿದೇಶಗಳ ಕಲಾ ವಲಯದಲ್ಲಿ ತರಹೇವಾರಿ ಚರ್ಚೆಗಳು ಆರಂಭವಾಗಿದೆ.
2012ರಲ್ಲಿ ಕೊಚ್ಚಿ ಮುಝರಿಸ್ ಬಿನಾಲೆ ಮೊದಲ ಆವೃತ್ತಿ ಆರಂಭವಾದಾಗಿನಿಂದ ಕಲಾಪ್ರದರ್ಶನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವಂತೆ ಮಾಡಿದವರಲ್ಲಿ ಬೋಸ್ ಕೃಷ್ಣಮಾಚಾರಿ ಅವರ ಪಾತ್ರ ದೊಡ್ಡದಿದೆ. ಇದೀಗ ಅವರ ಹಠಾತ್ ರಾಜೀನಾಮೆ ಕಲಾವಲಯದಲ್ಲಿ ಒಂದು ಸಂಚಲನಕ್ಕೆ ಕಾರಣವಾಗಿದೆ.
ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಈ ಕಲಾಪ್ರದರ್ಶನದ 6ನೇ ಆವೃತ್ತಿ ನಡೆಯುತ್ತಿದ್ದು, ದೇಶ-ವಿದೇಶಗಳ ಗಮನ ಸೆಳೆದಿದೆ.

