ವೇಗದೂತ ‘ಕೆಂಗತ್ತಿನ ಸೂರಕ್ಕಿ’

Share This

ವೇಗಕ್ಕೆ ಹೆಸರಾದ ಹಕ್ಕಿಗಳ ಪಟ್ಟಿಯಲ್ಲಿ ಈ ಜಾತಿಯ ಹಕ್ಕಿ ಅಗ್ರಸ್ಥಾನದಲ್ಲಿ ನಿಲ್ಲುತ್ತದೆ. ಸೆಕೆಂಡಿಗೆ ಎರಡು ಹೂವುಗಳ ಮಕರಂದವನ್ನಾದರೂ ಹೀರುವ, ನಿಮಿಷಕ್ಕೆ ಕಿಲೋ ಮೀಟರ್ ದೂರಕ್ಕೆ ಕ್ರಮಿಸಬಲ್ಲ ಹಾರಾಟದ ಸಾಮರ್ಥ್ಯ ಈ ಹಕ್ಕಿಯದು.
ಇಸ್ಟೇ ಅಲ್ಲ ಪ್ರತಿ ಸೆಕೆಂಡಿಗೆ ಹತ್ತು-ಹನ್ನೆರಡು ಬಾರಿ ರೆಕ್ಕೆ ಬಡಿದುಕೊಂಡಿರುತ್ತದೆ. ಇಂಥ ವೈಶಿಷ್ಟ್ಯಗಳಿರುವ ಹಕ್ಕಿಗಳಾದ ಸೂರಕ್ಕಿ ಜಾತಿಯಲ್ಲೇ ಬೇರೆ ತಳಿಯ ಹಕ್ಕಿ ಇದು. ಈ ಹಕ್ಕಿಯನ್ನು ‘ಕೆಂಗತ್ತಿನ ಸೂರಕ್ಕಿ’ (Crimson Sunbird) ಎಂದು ಕರೆಯುತ್ತಾರೆ.
ಗಾತ್ರದಲ್ಲಿ ಚಿಕ್ಕ ಹಕ್ಕಿ ಇದು. ಹೆಚ್ಚೆಂದರೆ 10 ರಿಂದ 11 ಸೆ. ಮೀಟರ್ ಉದ್ದ ಇರುತ್ತದೆಯಸ್ಟೆ. ಹಾಗಂತ ದಪ್ಪವಾಗಿಯೂ ಬೆಳೆಯುವುದಿಲ್ಲ. ಕಾಲಿನ ಹೆಬ್ಬೆರೆಳಿನಸ್ಟು ಗಾತ್ರದಲ್ಲಿರುತ್ತದೆ. ಕತ್ತಿನ ಭಾಗ ಕೆಂಪಗಾಗಿರುವ ಕಾರಣ ಇದನ್ನು ಕೆಂಗತ್ತಿನ ಸೂರಕ್ಕಿ ಎಂದು ಕರೆದಿದ್ದಾರೆ. ಪ್ರಾದೇಶಿಕವಾಗಿ ಇದಕ್ಕೆ ಕೆಂಪು ಕತ್ತಿನ ಹೂವಕ್ಕಿ ಎಂದೂ ಕರೆಯುವವರಿದ್ದಾರೆ. ಕರವೀರ ಜಾತಿ ಹೂವಿನ ಮಾಕರಂದಕ್ಕಾಗಿ ಬರುವ ಕಾರಣ ‘ಕೆಂಪು ಕರವೀರ’ ಎಂದೂ ಕರೆಯುತ್ತಾರೆ.
ಉಳಿದಂತೆ ಈ ಹಕ್ಕಿಯ ರೆಕ್ಕೆಯ ಹೆಚ್ಚಿನ ಭಾಗ, ಪುಕ್ಕಗಳು ಕಡು ಹಸಿರು, ಕಂದು ಬಣ್ಣದಿಂದ ಇರುತ್ತದೆ. ಇನ್ನುಳಿದ ಸೂರಕ್ಕಿಗಳಿಗೆ ಇರುವಂತೆ ಈ ಹಕ್ಕಿಯ ಕೊಕ್ಕುಮುಳ್ಳಿನಂತೆ ಇದ್ದು, ತುದಿಯಲ್ಲಿ ಕೆಳಕ್ಕೆ ಬಾಗಿರುತ್ತದೆ. ಕೊಕ್ಕು ಮತ್ತು ಕಾಲು ಕಪ್ಪಗಾಗಿರುತ್ತದೆ. ಹೂವಿನ ಮಕರಂದ ಹೀರುವುದರಲ್ಲಿ ಈ ಹಕ್ಕಿಯಸ್ಟು ನಿಪುಣ ಹಕ್ಕಿ ಇನ್ನೊಂದಿಲ್ಲ. ಸೂರ್ಯ ಮೂಡುವ ಹೊತ್ತಿನಲ್ಲಿ ಮಕರಂದ ಹೀರುತ್ತಿರುತ್ತದೆ.
ಚೆಂಡಿನಾಕಾರದಲ್ಲಿ ಗೂಡು ಕಟ್ಟಿಕೊಳ್ಳುತ್ತದೆ. ಗೂಡಿಗೆ ಹತ್ತಿ ಮತ್ತು ಜೇಡಿನ ಬಲೆ ಬಳಸಿಕೊಳ್ಳುತ್ತದೆ. ಎಪ್ರಿಲ್-ಜೂನ್ ತಿಂಗಳಿನಲ್ಲಿ ಮೂರರಿಂದ ನಾಲ್ಕು ಮೊಟ್ಟೆ ಇಟ್ಟು ಮರಿಮಾಡುತ್ತದೆ. ಭಾರತ ಸೇರಿದಂತೆ ಸುತ್ತಮುತ್ತಲ ದೇಶಗಳಲ್ಲಿ ಕಾಣಬಹುದು.
ಚಿತ್ರ ಕೃಪೆ: ಅಂತರ್ಜಾಲ


Share This

Leave a Reply

Your email address will not be published. Required fields are marked *