ಬೀದಿಗೆ ಬಾರದು ಬೂದು ಸಿಪಿಲೆ!

Share This

ಳಿ ಜೋರಾ ಗುತ್ತಿದ್ದಂತೆ ಇನ್ನಸ್ಟು ಚಳಿ ಇರುವ ಪ್ರದೇಶಗಳಿಗೆ ವಲಸೆ ಹೋಗುವ ಹಕ್ಕಿಗಳಿವೆ. ಈ ಗುಂಪಿಗೆ ಸೇರಿದ ಹಕ್ಕಿಗಳಲ್ಲಿ ‘ಬೂದು ಸಿಪಿಲೆ’(Grey Wagtail) ಕೂಡ ಒಂದು. ಸಾಮಾನ್ಯವಾಗಿ ಕೃಷಿಭೂಮಿ, ಜೌಗು ಪ್ರದೇಶಗಳಲ್ಲಿ ಇರುವ ಬೂದು ಸಿಪಿಲೆ ನೋಡಲಿಕ್ಕೆ ಹೆಚ್ಚು ಕಡಿಮೆ ಹಳದಿ ಸಿಪಿಲೆಯಂತೆ ಇರುತ್ತದೆ.
ಬಹುತೇಕ ಪ್ರದೇಶಗಳಲ್ಲಿ ಈ ಹಕ್ಕಿಯನ್ನೇ ಬೂದು ಸಿಪಿಲೆ ಎಂದು ಕರೆಯುವುದುಂಟು. ಈ ಹಕ್ಕಿಗೂ ಬೂದು ಸಿಪಿಲೆಗೂ ಹೆಚ್ಚೇನು ವ್ಯತ್ಯಾಸವಿಲ್ಲ. ಬೂದು ಸಿಪಿಲೆಯ ಮೇಲ್ಭಾಗವೆಲ್ಲ ಬೂದು ಮಿಶ್ರಿತ ಕಂದು ಬಣ್ಣದಿಂದ ಇದ್ದರೆ, ಹಳದಿ ಸಿಪಿಲೆಯ ಮೇಲ್ಭಾಗವೆಲ್ಲ ಹಳದಿ ಮಿಶ್ರಿತ ಕಪ್ಪು ಬಣ್ಣ. ಅಕ್ಕ-ಪಕ್ಕಕ್ಕೆ ನಿಲ್ಲಿಸಿದರೆ ಗುರುತಿಸುವುದು ಬಹಳ ಕಷ್ಟ. ಗಾತ್ರದಲ್ಲೂ ತೀರಾ ವ್ಯತ್ಯಾಸವಿಲ್ಲ. ಹಳದಿ ಸಿಪಿಲೆ ಕೊಂಚ ಚಿಕ್ಕದಿರಬಹುದು. ಇನ್ನುಳಿದ ಸಿಪಿಲೆಗಳಂತೆ ಬಾಲವನ್ನು ಮೇಲಕ್ಕೆ-ಕೆಳಕ್ಕೆ ಅಲ್ಲಾಡಿಸುತ್ತಾ ಇರುತ್ತದೆ. ಹೆಚ್ಚಿನ ಸಮಯವನ್ನು ನೆಲದ ಮೇಲೆ ನಡೆದಾಡಿಕೊಂಡು ಕಳೆಯುವ ಬೂದು ಸಿಪಿಲೆ ಕ್ಷಣಕ್ಷಣಕ್ಕೂ ಜಂಪ್ ಮಾಡುತ್ತಿರುತ್ತದೆ. ಅನಿವಾರ್ಯ ಎನಿಸಿದಾಗ ಮಾತ್ರ ಹಾರುತ್ತದೆ. ಓಟದಲ್ಲಿಯೂ ಈ ಹಕ್ಕಿ ಯಾರಿಗೂ ಪೈಪೋಟಿ ನೀಡಬಲ್ಲದು.
ಬೂದು ಸಿಪಿಲೆ ಬಹಳ ಚುರುಕಿನ ಹಕ್ಕಿ. ಗಾಬರಿಯಾದಾಗಲೆಲ್ಲ ಸ್ವೀಸ್ ಸ್ವಿಸ್… ಎಂದು ಸದ್ದು ಮಾಡುತ್ತಿರುತ್ತದೆ. ಗಾತ್ರದಲ್ಲಿ ಗುಬ್ಬಚ್ಚಿಗಿಂತ ಸ್ವಲ್ಪ ದೊಡ್ಡದು. ಎದೆ, ಹೊಟ್ಟೆ ಭಾಗ ಹಳದಿ ಮಿಶ್ರಿತ ಬೆಳ್ಳಗಿನ ಬಣ್ಣದಿಂದ ಇರುತ್ತದೆ. 8 ವರ್ಷ ಬದುಕಿರುವ ಬೂದು ಸಿಪಿಲೆ ಹಕ್ಕಿಯನ್ನು ಬೂದು ಕುಂಡೆಕುಸ್ಕ, ಬೂದು ದಾಸರಿ, ಬೂದು ಬಾಲಾಡಿ ಎಂದೂ ಕರೆಯುತ್ತಾರೆ. ಚಾರ್ಚ್-ಅಕ್ಟೋಬರ್ ತಿಂಗಳಾವಧಿಯಲ್ಲಿ 4-5 ಮೊಟ್ಟೆಗಳನ್ನಿಟ್ಟು ಮರಿಮಾಡುತ್ತದೆ. ಕೀಟಗಳು ಇದರ ಪ್ರಮುಖ ಆಹಾರ. ಚಿತ್ರ ಕೃಪೆ: ಗಾರ್ಡನ್ ಬರ್ಡ್


Share This

Leave a Reply

Your email address will not be published. Required fields are marked *