ಕವಿ ಮನಸ್ಸಿನ ಭಾವಜೀವಿಯ ವರ್ಣಸಂಭ್ರಮ

Share This

• ಗುಲಾಮ್ ಮೊಹಮ್ಮದ್ ಶೇಖ್ ರೇಖಾ ಲಾಲಿತ್ಯ
• ಕಲಾಜೀವನ ಪ್ರತಿಂಬಿಸುವ ಮಹತ್ವದ ಪ್ರದರ್ಶನ
ಹಸಿರು, ಹಳದಿ, ಕೆಂಪು, ಕೇಸರಿ, ಕಪ್ಪು… ಹೀಗೆ ಗಾಢವಾದ ವರ್ಣಗಳ ಬಳಕೆ, ಹಳ್ಳಿಯ ಜೀವನದ ನೋವು-ನಲಿವು, ಅಲ್ಲಿನ ಪರಿಸರದ ಪ್ರೇರಣೆ, ಬದುಕಿನ ಮೌಲ್ಯಗಳನ್ನು ತೆರೆದಿಡುವ ಸನ್ನಿವೇಶಗಳೇ ಇವರ ಚಿತ್ರಕಾವ್ಯ. ಮನೆ ಎನ್ನುವ ಮಂದಿರದ ಸೌಂದರ್ಯ ಗ್ರಹಿಸಿ ಅಭಿವ್ಯಕ್ತಿಯಾಗಿಸಿದ್ದಾರೆ ದೇಶದ ಹಿರಿಯ ಕಲಾವಿದ, ಕವಿ, ಕಲಾ ವಿಮರ್ಶಕ, ಕಲಾ ಶಿಕ್ಷಕ!
Yes, ಗುಜರಾತ್ ಮೂಲದ ಹಿರಿಯ ಕಲಾವಿದರಾದ ಗುಲಾಮ್ ಮೊಹಮ್ಮದ್‌ ಶೇಖ್ ಅವರ ಬಗ್ಗೆ, ಅವರ ಕಲಾಕೃತಿಗಳ ಕುರಿತಾದ ಮಾತುಗಳಿವು. ಇಂತಹ ಮೇರು ಕಲಾವಿದ, ಕವಿಯ ಜೀವನ್ಮಾನ ಕಲಾ ಸಾಧನೆಯನ್ನು ಪ್ರತಿಬಿಂಬಿಸುವ (retrospective) ಮಹತ್ವದ ” of worlds within worlds ” ಕಲಾಪ್ರದರ್ಶನ ನವದೆಹಲಿಯ ಕಿರಣ್ ನಾಡರ್ ಮ್ಯೂಸಿಯಂ ಆಫ್ ಆರ್ಟ್ ಗ್ಯಾಲರಿಯಲ್ಲಿ ನಡೆಯುತ್ತಿದೆ. ರೂಬಿನಾ ಕರೋಡೆ (Roobina Karode) ಅವರು ಈ ಕಲಾಪ್ರದರ್ಶನವನ್ನು ಅತ್ಯಂತ ವ್ಯವಸ್ಥಿತವಾಗಿ, ಶಿಸ್ತುಬದ್ಧವಾಗಿ ಕ್ಯುರೇಟ್ ಮಾಡಿದ್ದಾರೆ.
88 ವರ್ಷ ವಯಸ್ಸಿನ ಗುಲಾಮ್ ಮೊಹಮ್ಮದ್ ಶೇಖ್ ಅವರ ಕಲಾತತ್ವ ಪ್ರತಿಬಿಂಬಕ್ಕೆ ಮಹತ್ವ ಕೊಟ್ಟು ಆಯೋಜನೆಯಾಗಿರುವ ಕಲಾಪ್ರದರ್ಶನ ಇದೆನ್ನಬಹುದು. ಎಲ್ಲಾ ಪ್ರಕಾರಗಳ ಸರಣಿ (series) ಕಲಾಕೃತಿಗಳನ್ನು ಪ್ರದರ್ಶಿಸಲಾಗಿದೆ.
ಗುಲಾಮ್ ಮೊಹಮ್ಮದ್ ಶೇಖ್ ಅವರ ಅನೇಕ ಕಲಾಕೃತಿಗಳಲ್ಲಿ ಹಳ್ಳಿಯ ಪರಿಸರದ ಸಂಗತಿಗಳು ಪ್ರಾಮುಖ್ಯತೆ ಪಡೆದುಕೊಂಡಿವೆ. ಈ ಮೂಲಕ ತಮ್ಮ ಕವಿತ್ವದ ಮೂಲವನ್ನು ಸ್ಮರಿಸುವ, ಅದನ್ನು ಅನುಭವಿಸುವ ತುಡಿತ ಕಾಣಬಹುದು. ಪರಿಸರದ ಜೊತೆಗೆ ತಮ್ಮ ಭಾವನಾತ್ಮಕ ಸಂಬಂಧಗಳನ್ನು ಬೆಸೆಯುವ ಚಿಂತನೆ ಗಮನಸೆಳೆಯುತ್ತದೆ.
ಕಲಾಕೃತಿಯಲ್ಲಿ ತರಬೇಕೆನ್ನಿಸುವ ಅಂಶಗಳನ್ನು (eliments) ಸಂಯೋಜಿಸುವ ರೀತಿ ವಿಭಿನ್ನತೆಯಿಂದಲೂ ಮತ್ತು ಎಲ್ಲಿಯೂ ಅಸಮತೋಲನ (imbalance) ಅನ್ನಿಸದಂತೆ ನಿರ್ವಹಿಸುವ ಪರಿ ಗಮನಾರ್ಹವಾಗಿದೆ.
ದೇಶದ ಪ್ರತಿಯೊಬ್ಬ ಕಲಾವಿದರು, ಕಲಾಪ್ರಿಯರು ನೋಡಲೇಬೇಕಾದ ” of worlds within worlds ” ಕಲಾಪ್ರದರ್ಶನ ಜೂನ್ ತಿಂಗಳಾಂತ್ಯದಲ್ಲಿ ಸಂಪನ್ನಗೊಳ್ಳಲಿದೆ.


Share This

Leave a Reply

Your email address will not be published. Required fields are marked *